ಭಾರತೀಯ ಸೇನೆಯ ಕಮಾಂಡರ್ ಫೋನ್ ಮಾಡಿ ಆರೆಸ್ಸೆಸ್ ಗೆ ಮನವಿ ಮಾಡಿದ್ದೇನು? ಬಳಿಕ ಪಾಕಿಸ್ತಾನಿ ಸೈನಿಕರ ಕ್ಯಾಂಪ್ ಗೆ ನುಗ್ಗಿ ಆರೆಸ್ಸೆಸ್ಸಿನ 8 ಸ್ವಯಂಸೇವಕರು ಮಾಡಿದ್ದೇನು ಗೊತ್ತಾ?

ದೇಶಕ್ಕಾಗಿ ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿ ಸದಾ ದೇಶದ ಹೊತದ ಕುರಿತಾಗಿ ಚಿಂತಿಸುವ ಆರೆಸ್ಸೆಸ್ ಕಾರ್ಯಕರ್ತರ, ಪ್ರಚಾರಕರ ಬಗ್ಗೆ ಇಲ್ಲ ಸಲ್ಲದ ಆರೋಪಗಳು, ಟೀಕೆಗಳು, ಅಪಪ್ರಚಾರಗಳು ಕೇಳಿ ಬರುತ್ತಲೇ ಇರುತ್ತವೆ. ನಮ್ಮ ದೇಶದ ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿದ್ದ ಮಾನ್ಯ ಮಲ್ಲಿಕಾರ್ಜುನ ಖರ್ಗೆ ಸಾಹೇಬರು ಆಗಾಗ ಮಾತನಾಡಿತ್ತಿರುವಾಗ ದೇಶದ ಸ್ವಾತಂತ್ರ್ಯಕ್ಕಾಗಿ ಬಿಜೆಪಿ/ಆರೆಸ್ಸೆಸ್ಸಿನ ಒಂದು ನಾಯಿ ಕೂಡ ಸತ್ತಿಲ್ಲ ಅಂತ ಹೇಳುತ್ತಿರುತ್ತಾರೆ.

ಆದರೆ ಅವರಿಗೆ ಆಗ ಅಂದರೆ ಭಾರತ ಸ್ವಾತಂತ್ರ್ಯ ಹೋರಾಟ ಸಂಗ್ರಾಮದ ಸಮಯದಲ್ಲಿ ಬಿಜೆಪಿ‌ಪಕ್ಷ ಇನ್ನೂ ಹುಟ್ಟೇ ಇರಲಿಲ್ಲ ಅನ್ನೋದು ಬಹುಶಃ ಗೊತ್ತಿರಲಿಕ್ಕಿಲ್ಲ. ಆದರೆ ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಆರೆಸ್ಸೆಸ್ ಸಲ್ರೀಯವಾಗಿ ಭಾಗವಹಿಸಿತ್ತು ಅನ್ನೋದನ್ನೂ ಈಗಿನ ಸೆಕ್ಯೂಲರ್ ರಾಜಕಾರಣಿಗಳು ಮುಚ್ಚಿಡುತ್ತಾರೆ ಹಾಗು ಬಾಯಿಗೆ ಬಂದ ಹಾಗೆ ಆರೆಸ್ಸೆಸ್ಸನ್ನ ದೂಷಿಸುತ್ತಲೇ ಇರುತ್ತಾರೆ.

ಇನ್ನೂ ಕೆಲ ಕಾಂಗ್ರಸ್ಸಿಗರಂತೂ ವೀರ ವಿನಾಯಕ ದಾಮೋದರ್ ಸಾವರ್ಕರರ ಬಗ್ಗೆಯೂ ಇಲ್ಲಸಲ್ಲದ ಮಾತುಗಳನ್ನಾಡುತ್ತ ಅವರ ಬಗ್ಗೆ ಪ್ರಶ್ನೆಗಳ ಸುರಿಮಳೆಗೈಯುತ್ತಾರೆ. ಆದರೆ ಆರೆಸ್ಸೆಸ್ಸಿನ ಮೌನದಿಂದ ಎಲ್ಲರೂ ಆರೆಸ್ಸೆಸ್ ದೇಶಕ್ಅಕಾಗಿ ಏನೂ ಮಾಡಿಲ್ಲ ಅಂತಲೇ ತಿಳಿಯುತ್ತಾರೆ. ಆದರೆ ಭಗವದ್ಗೀತೆಯ ಸಂದೇಶವಾದ “ಕರ್ಮಣ್ಯೇವಾಧಿಕಾರಶ್ಚ್ಯ್, ಮಾ ಫಲೇಶು ಕದಾಚನ” ದ ಸಿದ್ಧಾಂತದ ಪ್ರಕಾರ ಅಂದರೆ ನೀನು ಮಾಡುವ ಕಾರ್ಯವನ್ನ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮಾಡು, ಫಲಾಫಲ ನನಗೆ ಬಿಟ್ಟುಬಿಡು ಎಂದು ಕೃಷ್ಣ ಹೇಳುವ ಮಾತಿನಂತೆ ಸಂಘ ಕಾರ್ಯ ನಿರ್ವಹಿಸುತ್ತ ಬಂದಿದೆ.

ಆರೆಸ್ಸೆಸ್ ಸ್ವಯಂಸೇವಕರು ಬರೀ ಭಾರತದ ಬಗ್ಗೆ ಚಿಂತಿಸುವುದಷ್ಟೇ ಅಲ್ಲದೆ ಮತಾಂಧ ಮಾನಸಿಕತೆ ಹೊಂದಿರುವ ಪಾಕಿಸ್ತಾನ ಹಾಗು ಚೀನಾದ ಜೊತೆಗೆ ನಡೆದಿದ್ದ ಯುದ್ಧಗಳಲ್ಲಿಯೂ ತಮ್ಮ ತ್ಯಾಗ ಬಲಿದಾನ ಮಾಡಿದ್ದರು ಅನ್ನೋದನ್ನ ಬಹುಶಃ ದೇಶದ ಅತೀ ಕಡಿಮೆ ಜನರಿಗಷ್ಟೇ ಗೊತ್ತಿರಬಲ್ಲದು. ಆದರೆ ಆರೆಸ್ಸೆಸ್ ಸ್ವಯಂಸೇವಕರ ತ್ಯಾಗ ಬಲಿದಾನಗಳ ಚರ್ಚೆ ನಮ್ಮ ದೇಶದಲ್ಲಿ ಆಗದಿರಬಹುದು ಆದರೆ ವಿದೇಶಗಳಲ್ಲಿ ಈ ಕುರಿತು ಚರ್ಚೆಗಳು ನಡೆಯುತ್ತವೆ. 

ಈ‌ ಕಾರಣಕ್ಕಾಗಿಯೇ ಭಾರತೀಯ ಸಂಸ್ಕೃತಿಯೆಂದರೆ ಕೆಙಡ ಕಾರುವ ಹಾಗು ವಿದೇಶಿ ಸಂಸ್ಕೃತಿಯನ್ನ ನಮ್ಮ ಮೇಲೆ ಹೇರಲು ಹವಣಿಸುವ ಮತಾಂಧ ಶಕ್ತಿಗಳ ಮೊಟ್ಟ ಮೊದಲ ಟಾರ್ಗೇಟ್ ನಲ್ಲಿ ಹಿಟ್ ಲಿಸ್ಟ್ ನಲ್ಲಿ ಬರೋದೇ ರಾಷ್ಟ್ರೀಯ ಸ್ವಯಂಸೆವಕ ಸಂಘ(ಆರೆಸ್ಸೆಸ್). “ಹಸ್ ಕೇ ಲಿಯಾ ಪಾಕಿಸ್ತಾನ್, ಲಡ್ ಕೇ ಲೇಂಗೇ ಹಿಂದೂಸ್ತಾನ್” ಅಂದರೆ ಮುಗುಳ್ನಗುತ್ತ ಪಡೆದಿದ್ದೇವೆ ಪಾಕಿಸ್ತಾನ, ಹೋರಾಟ ನಡೆಸಿ ಪಡೆಯುತ್ತೇವೆ ಹಿಂದೂಸ್ತಾನ್ ಎಂಬ ಘೋಷಣೆಯೊಂದಿಗೇ ಪಾಕಿಸ್ತಾನವು 1947 ರಲ್ಲಿ ಭಾರತದ ನೆಲವಾದ ಕಾಶ್ಮೀರದ ಮೇಲೆ ಯುದ್ಧ ನಡೆಸಿತ್ತು.

ದೇಶರಕ್ಷಣೆಗೆ ಕಟಿಬದ್ಧರಾಗಿರುವ ಸಂಘದ ಸ್ವಯಂಸೇವಕರು ಭಾರತದ ಮೇಲೆರಗಿದ್ದ ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರವನ್ನೇ ಕೊಟ್ಟಿದ್ದರು. ಆರೆಸ್ಸೆಸ್ ಸ್ವಯಂಸೇವಕರು ಭಾರತೀಯ ಸೇನೆ ಹಾಗು ಕಾಶ್ಮೀರದ ರಾಜನಾಗಿದ್ದ ರಾಜಾ ಹರಿಸಿಂಗ್ ಗೆ ಪಾಕಸ್ತಾನದಿಂದ ಆಗಬಹುದಾದ ದಾಳಿ/ಯುದ್ಧದ ಮುನ್ಸೂಚನೆಯನ್ನ ಮೊದಲೇ ನೀಡಿದ್ದರು. ಈ ಅಧ್ಯಾಯದ ಒಂದು ಯಶೋಗಾಥೆ ನವೆಂಬರ್ 27, 1948 ರಂದು ಕೋಟಲಿ(ಸದ್ಯ ಪಾಕಿಸ್ತಾನ ಆಕ್ರಮಿತ ಪ್ರದೇಶ POK) ಯಲ್ಲಿ ಬರೆಯಲಾಗಿತ್ತು.

ಕಾಶ್ಮೀರವನ್ನ ವಶಪಡಿಸಿಕೊಂಡೇ ಸಿದ್ಧ ಎಂದು ಪಾಕಿಸ್ತಾನವು ಭಾರತದ ಮೇಲೆ ಯುದ್ಧ ಮಾಡೇ ಬಿಟ್ಟಿತ್ತು. ಯುದ್ಧದ ಸಮಯದಲ್ಲಿ ಭಾರತೀಯ ಸೇನೆಯ ವಿಮಾನಗಳು ಭಾರತೀಯ ಸೈನಿಕರ ಕ್ಯಾಂಪ್ ಗಳ ಬಳಿ ಎಸೆದ ಮದ್ದುಗುಂಡುಗಳ ಪೆಟ್ಟಿಗೆ ಅಚಾನಕ್ಕಾಗಿ ಶತ್ರು ಸೇನೆಯ ಹತ್ತಿರ ಬಿದ್ದುಬಿಟ್ಟಿತ್ತು‌. ಈ ವಿಷಯ ಪಾಕಿಸ್ತಾನಿ ಸೇನೆಯ ಅರಿವಿಗೆ ಬಂದಿರಲಿಲ್ಲ, ಆದರೆ ಶತ್ರುಗಳ ಬಳಿ ಬಿದ್ದ ಮದ್ದುಗುಂಡುಗಳ ಪೆಟ್ಟಿಗೆಯನ್ನ ತರೋದು ದುಲಭದ ಮಾತಾಗಿರಲಿಲ್ಲ.

ಮದ್ದುಗುಂಡುಗಳಿರುವ ಪೆಟ್ಟಿಗೆಯನ್ನ ಶತ್ರುಸೇನೆ ವಶಪಡಿಸಿಕೊಳ್ಳುವುದಾಗಲಿ ಅಥವ ಅದನ್ನ ಕಳೆದುಕೊಳ್ಳಲು ಆ ಜಾದಲ್ಲಿದ್ದ ಭಾರತೀಯ ಸೇನೆಯ ಕಮಾಂಡರ್ ಗಳು ಸಿದ್ಧರಿರಲಿಲ್ಲ. ಅಚಾನಕ್ಕಾಗಿ ಬೆಬ್ನಿಗೆ ಚೂರಿ ಇರಿದ ಪಾಕಿಸ್ತಾನದ ದಾಳಿಗೆ ಭಾರತೀಯ ಸೇನೆ ಸಂಪೂರ್ಣ ಸಜ್ಜಾಗಿರದ ಕಾರಣ ತಕ್ಷಣ ಭಾರತೀಯ ಸೇನೆಯ ಕಮಾಂಡರ್ ಒಬ್ಬರು ಸಂಘ ಕಾರ್ಯಾಲಯಕ್ಕೆ ಫೋನಾಯಿಸಿದರು. ಆಗಿನ. ಸಮಯದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಪ್ರಬಂಧಕರಾಗಿದ್ದ ಶ್ರೀ ಚಂದ್ರಪ್ರಕಾಶ್ ರವರು ಕೋಟಲಿ ಊರಿನ ಆರೆಸ್ಸೆಸ್ ನಗರ ಕಾರ್ಯವಾಹರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು.

ಭಾರತೀಯ ಸೇನೆಯ ಕಮಾಂಡರ್ ರ ಫೋನಗೆ ಪ್ರತಿಕ್ರಿಯಿಸಿದ ಅವರು “ನಿಮಗೆ ಎಷ್ಟು ಸ್ವಯಂಸೇವಕರು ಬೇಕು?” ಎಂದಾಗ ಅದಕ್ಕುತ್ತರಿಸಿದ ಕಮಾಂಡರ್ “8 ಜನ ಆದರೆ ಸಾಕು” ಎಂದರು. ನಾನೊಬ್ಬ ಹಾಗು ಇನ್ನೂ 7 ಜನರನ್ನ ನಾನು ಅರ್ಧ ಗಂಟೆಯಲ್ಲಿ ಕರೆತರುತ್ತೇನೆ ಎಂದು ಚಂದ್ರಪ್ರಕಾಶ್ ಕಮಾಂಡರ್ ಗೆ ತಿಳಿಸಿದರು. ಯುದ್ಧದ ಸನ್ನಿವೇಶವನ್ನ ಹಾಗು ಸ್ಥಿತಿಗತಿಗಳನ್ನ ಚಂದ್ರಪ್ರಕಾಶ್ ಜೀ ಸ್ವಯಂಸೇವಕರಿಗೆ ತಿಳಿಸಿದಾಗ ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರಿ 30 ಜನ ಸ್ವಯಂಸೇವಕರು ಸಜ್ಜಾಗಿ ಬಿಟ್ಟರು‌.

ದೇಶಕ್ಕಾಗಿ ಬಲಿದಾನಗೈಯುವ ಇಂತಹ ಸುವರ್ಣಾವಕಾಶವನ್ನ ಕಳೆದುಕೊಳ್ಳೋಕೆ ಆ 30 ಜನ ಸ್ವಯಂಸೇವಕರು ಸಿದ್ಧರಿರಲಿಲ್ಲ‌. ಆದರೆ ಆ 30 ಜನರಲ್ಲಿ 7 ಜನರನ್ನ ಚಂದ್ರಪ್ರಕಾಶ್ ಜೀ ಆರಿಸಿದಾಗ ಉಳಿದ 23 ಜನ ನಾವೂ ಬರುತ್ತೇವೆ ಎಂದು ಹಠ ಹಿಡಿದಿದ್ದರು. ಬಳಿಕ ಚಂದ್ರಪ್ರಕಾಶ್ ಜೀ ಯವರ ಆಜ್ಞೆಗೆ ಮಣಿದು 8 ಜನರನ್ನ ಕಳಿಸಿಕೊಡಲು ಉಳಿದ ಸ್ವಯಂಸೇವಕರು ಸಜ್ಜಾದರು.

ಭಾರತೀಯ ಸೇನೆಯ ಆ ಕಮಾಂಡರ್ 8 ಜನ ಸ್ವಯಂಸೇವಕರಿಗೆ ಸಂಪೂರ್ಣ ಚಿತ್ರಣವನ್ನ ಹಾಗು ಏನು ಮಾಡಬೇಕು ಅನ್ನೋ ಸ್ಪಷ್ಟ ನಿರ್ದೇಶನ ನೀಡಿದರು. ಭಾರತೀಯ ಸೇನೆ ಹಾಗು ಶತ್ರು ಸೇನೆಯ ನಡುವೆ ಒಂದು ನಾಲೆಯಿತ್ತು. ನಾಲೆಯ ಆ ಭಾಗದಲ್ಲಿ ಭಾರತೀಯ ಸೇನೆಯ ಗುಂಡು ಮದ್ದುಗಳ ಪೆಟ್ಟಿಗೆ ಬಿದ್ದಿತ್ತು. ಅದು ಸಂಜೆಯ ಹೊತ್ತು, ಮೈ ಕೊರೆಯುವ ಚಳಿಯಿದ್ದರೂ ಕೂಡ ಸ್ವಯಂಸೇವಕರು ಈಜಿ ನಾಲೆಯನ್ನ ದಾಟಿ ಪಾಕಿಸ್ತಾನಿ ನೆಲದಲ್ಲಿ ಬಿದ್ದಿದ್ದ ಮದ್ದುಗುಂಡುಗಳ ಪೆಟ್ಟಿಗೆಯನ್ನ ತಮ್ಮ ಬೆನ್ನಿಗೆ ಕಟ್ಟಿಕೊಂಡು ಬಿಟ್ಟರು.

ಬಳಿಕ ಅಲ್ಲಿಂದ ಹೊರಟು ಭಾರತೀಯ ನೆಲಕ್ಕೆ ಮರಳುತ್ತಿದ್ದಾಗ ನೀರಿನಲ್ಲಾದ ಶಬ್ದವನ್ನ ಕೇಳಿದ ತಕ್ಷಣವೇ ಶತ್ರು ಸೈನ್ಯ ಫೈರಿಂಗ್ ಶುರು ಮಾಡೇಬಿಟ್ಟಿತು. ಗುಂಡಿನ ಸುರಿಮಳೆಯ ಮಧ್ಯಯೇ ಸ್ವಯಂಸೇವಕರು ಭಾರತದತ್ತ ಮುನ್ನುಗ್ಗುತ್ತಲಿದ್ದರು. ಆದರೆ ಶತ್ರು ಸೈನಿಕರ ಗುಂಡುಗಳು ವೇದಪ್ರಕಾಶ್ ಜೀ ಹಾಗು ಚಂದ್ರಪ್ರಕಾಶ್ ಜೀ ದೇಹಕ್ಕೆ ಹೊಕ್ಕಿಬಿಟ್ಟವು. ಆದರೆ ಅದ್ಯಾವುದನ್ನೂ ಲೆಕ್ಕಿಸದೆ ಭಾರತದ ಗಡಿಯೊಳಗೆ ಆರು ಜನ ಸ್ವಯಂಸೇವಕರು ಸುರಕ್ಷಿತವಾಗಿ ಕಮಾಂಡರ್ ಕೈಗೆ ಮದ್ದುಗುಂಡುಗಳ ಪೆಟ್ಟಿಗೆಗಳನ್ನ ಹಸ್ತಾಂತರಿಸಿದರು.

ಭಾರತದ ಗಡಿಯನ್ನೇನೋ ತಲುಪಿ ಬಿಟ್ಟರು ಆದರೆ ಇಬ್ಬರು ಸ್ವಯಂಸೇವಕರು ನಾಲೆಯ ಆಚೆಯಲ್ಲೇ ಗುಂಡಿನ ದಾಳಿಯಿಂದಾಗಿ ಬಿದ್ದಿರುವುದರಿಂದ ಅವರನ್ನ ಕರೆತರಲು ಮತ್ತೆ ನಾಲೆಯನ್ನ ಪಾರು ಮಾಡಿ ಹೋದರು. ಆದರೆ ಸ್ವಯಂಸೇವಕರು ಅಲ್ಲಿ ತಲಯಪುವವರೆಗೆ ಆ ಇಬ್ಬರೂ ಸ್ವಯಂಸೇವಕರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಇಬ್ಬರ ಮೃತದೇಹಗಳನ್ನ ಹೆಗಲ ಮೇಲೆ ಹೊತ್ತು ಸಾಗುತ್ತಿದ್ದ ಸ್ವಯಂಸೇವಕರ ಮೇಲೆ ಮತ್ತೆ ಗುಂಡಿನ ದಾಳಿ ಶುರುವಾಗಿ ಬಿಟ್ಟಿತು. ಈ ದಾಳಿಯಲ್ಲಿ ಮತ್ತೊಬ್ಬ ಸ್ವಯಂಸೇವಕ ಕೂಡ ಪ್ರಾಣಾರ್ಪಣೆ ಮಾಡಿದ.

ಆತನ ಶವವನ್ನೂ ಬೆನ್ನಿಗೆ ಕಟ್ಟಿಕೊಂಡ ಉಳಿದ ಸ್ವಯಂಸೇವಕರು ನಾಲೆ ದಾಟಿ ಭಾರತದ ಗಡಿ ತಲುಪುವುದರಲ್ಲೇ ನಾಲ್ಕನೆಯ ಸ್ವಯಂಸೇವಕನ ಕಿವಿಗೆ ಪಾಪಿ ಪಾಕಿಗಳು ಗುಂಡಿಕ್ಕಿದ್ದರು. ಆತ ಕೂಡ ಮಾತೃಭೂಮಿಯ ರಕ್ಷಣೆ ಮಾಡುತ್ತಲೇ ಬಲಿದಾನಿಯಾಗಿಬಿಟ್ಟ. ಈ ತಂಡ ವಾಪಸ್ ಮರಳಿದ ಘಟನೆ ಮಾತ್ರ ಭೀಕರ ಹಾಗು ರೋಚಕವಾಗಿತ್ತು. ನಾಲ್ವರು ಸ್ವಯಂಸೇವಕರ ಅಂತ್ಯಕ್ರಿಯೆಯ ವೇಳೆಗೆ ಭಾರತ್ ಮಾತಾ ಕೀ ಜೈ ಘೋಷಣೆಗಳು ಮೊಳಗುತಲಿದ್ದವು.

ಅಂತ್ತಕ್ರಿಯೆಯಲ್ಲಿ ಭಾಗವಹಿಸಿದ್ದ ಜನ ಪುಷ್ಪಾರ್ಚನೆ ಮಾಡುವ ಮೂಲಕ ಬಲಿದಾನಿಗಳಿಗೆ ಶೃದ್ಧಾಂಜಲಿಯನ್ನ ಅರ್ಪಿಸಿದ್ದರು. ಆದರೆ ಹಸಿದ ಹೆಬ್ಬುಲಿಗಳಂತಾಗಿದ್ದ ಭಾರತೀಯ ಸೈನಿಕರ ಕೈಗೆ ಸ್ವಯಂಸೇವಕರು ಮರಳಿ ತಂದಿದ್ದ ಮದ್ದು ಗುಂಡುಗಳ ಪೆಟ್ಟಿಗೆ ಕೈಗೆ ಸಿಕ್ಕ ಬಳಿಕ ಅವರು ಶತ್ರುಗಳ ಎದೆ ಸೀಳಲು ಮುನ್ನುಗ್ಗೇ ಬಿಟ್ಟರು. ಕೆಲವೇ ಹೊತ್ತಿನಲ್ಲಿ ಶತ್ರು ಸೈನಿಕರಲ್ಲಿ ನಡುಕ ಹುಟ್ಟಿ ಅಲ್ಲಿಂದ ಕಾಲ್ಕಿತ್ತಿದ್ದರು. ಇತ್ತ ಸ್ವಯಂಸೇವಕರ ಚಿತೆ ಆರುವ ಮುನ್ನವೇ ಅತ್ತ ಬೆಟ್ಟದ ಮೇಲೆ ತಿರಂಗಾ ಹಾರಾಡಲಾರಂಭಿಸಿತ್ತು.

ಇಂತಹ ಅನೇಕ ಮಹಾನ್ ಕಾರ್ಯಗಳನ್ನ ಮಾಡಿರುವ ಸಂಘ ಮಾತ್ರ ಎಂದಿಗೂ ಪ್ರಚಾರ ಬಯಸದಿರುವ ಕಾರಣ ಸಂಘದ ಹಲವಾರು ಕಾರ್ಯಗಳು ಪ್ರಚಾರವೇ ಇಲ್ಲದೆ ತಮ್ಮ ಪಾಡಿಗೆ ಸಾಗುತ್ತಿರುತ್ತವೆ. ಆದರೆ ಆರೆಸ್ಸೆಸ್ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡುವ ಮುನ್ನ ಆರೆಸ್ಸೆಸ್ ದೇಶಕ್ಕಾಗಿ, ಸಮಾಜದ ಒಳಿತಿಗಾಗಿ, ರಾಷ್ಟ್ರ ರಕ್ಷಣೆಗಾಗಿ ಏನು ಮಾಡಿದೆ, ಮಾಡುತ್ತಿದೆ ಅನ್ನೋದನ್ನೂ ಸ್ವಲ್ಪ ನೋಡಿದರೆ ಒಳಿತಲ್ಲವೇ?

ಹಿಂದೂಸ್ತಾನದ ಸೈನಿಕರ ಬಲಿದಾನದ ಜೊತೆಗೆ ರಾಷ್ಟ್ರ ರಕ್ಷಣೆ ಮಾಡುತ್ತ ಅಮರರಾದ ಆ ನಾಲ್ವರು ಬಲಿದಾನಿಗಳನ್ನ ನೆನೆಯುತ್ತ ಅವರಿಗೆ ಶೃದ್ಧಾಂಜಲಿಯನ್ನ ಅರ್ಪಿಸೋಣ.

ಜೈ ಹಿಂದ್, ಜೈ ಆರೆಸ್ಸೆಸ್

– Vinod Hindu Nationalist

Leave a Reply

Your email address will not be published. Required fields are marked *

error: Content is protected !!