ಶತ್ರುಗಳ ಗುಂಡಿನಿಂದ ಇನ್ನುಮುಂದೆ ಭಾರತೀಯ ಸೈನಿಕರು ಸಾಯಲ್ಲ… ಭಯೋತ್ಪಾದಕರನ್ನ ಶತ್ರುಗಳನ್ನ ಹುಡುಕಿ ಹುಡುಕಿ ಕೊಲ್ಲುತ್ತೆ ಈ ಸೂಟ್ ಹೆಲ್ಮೆಟ್

ರಷ್ಯಾ ತನ್ನ ಸೇನೆಯನ್ನ ಮತ್ತಷ್ಟು ಬಲಿಷ್ಟಗೊಳಿಸಲು ಒಂದು ರೋಬೋಟಿಕ್ ಯೂನಿಫಾರಂ ನ್ನ ರೆಡಿ ಮಾಡಿದೆ. ಈ ಯೂನಿಫಾರಂ (ಸಮವಸ್ತ್ರ)ನ್ನ ಹಾಕಿಕೊಂಡು ರಷ್ಯಾ ಸೈನಿಕರು ರಣಾಂಗಣದಲ್ಲಿ ಇನ್ನೂ ಬಲಶಾಲಿಯಾಗಿ ಯುದ್ಧ ಮಾಡಲು ಸಶಕ್ತರಾಗಬಹುದಾಗಿದೆ. ಈ ಯೂನಿಫಾರಂ ನೋಡೋಕೆ ಜನಪ್ರೀಯ ಹಾಲಿವುಡ್ ಚಿತ್ರ ‘ಸ್ಟಾರ್ ವಾರ್’ ನಲ್ಲಿನ ಸೈನಿಕರು ಹಾಕಿಕೊಂಡಿದ್ದ ಯೂನಿಫಾರಂ ನಂತೆಯೇ ಕಾಣುತ್ತೆ.

ಇದರ ಸಹಾಯದಿಂದ ರಷ್ಯಾ 21 ನೆಯ ಶತಮಾನದಲ್ಲಿ ಯೋಧರನ್ನ ಆವಿಷ್ಕಾರ ಮಾಡುವ ಮೂಲಕ ಮತ್ತೊಂದು ದಿಟ್ಟ ಹೆಜ್ಜೆಗೆ ಮುನ್ನುಡಿ ಬರೆದಿದೆ. ಯೋಧರಿಗಾಗಿಯೇ ವಿಶೇಷ ರೀತಿಯಲ್ಲಿ ತಯಾರಿಸಲಾಗಿರುವ ಈ ಯೂನಿಫಾರಂ ನ ಕವಚವನ್ನ ಹೇಗೆ ವಿನ್ಯಾಸಗೊಳಿಸಲಾಗಿದೆಯೆಂದರೆ ಶತ್ರುಗಳು ಅದೆಷ್ಟು ಗುಂಡು ಹಾರಿಸಿದರೂ ಈ ಯೂನಿಫಾರಂ ಹಾಕಿಕೊಂಡಿರುವ ಸೈನಿಕರಿಗೆ ಯಾವುದೇ ರೀತಿಯ ಎಫೆಕ್ಟ್ ಕೂಡ ಆಗಲ್ಲ.

ಕಪ್ಪು ಬಣ್ಣದ್ದಾಗಿರುವ ಈ ರೋಬೋಟಿಕ್ ಕವಚದಲ್ಲಿ ಸ್ಟಾರ್ಮಟ್ಟಪರ್ ಸ್ಟೈಲ್ ನ ಹೆಲ್ಮೇಟ್ ಕೂಡ ಫಿಕ್ಸ್ ಮಾಡಲಾಗಿದೆ. ಈ ಹೆಲ್ಮೇಟ್ ನಲ್ಲಿ ಮಿನಿ ಟಾಸ್ಕ್ ಲೈಟ್ ಸ್ಕ್ರೀನ್ ನ್ನ ಕೂಡ ಅಳವಡಿಸಲಾಗಿದೆ. ಇದರ ಮೂಲಕ ಶತ್ರುಗಳ ಶಸ್ತ್ರಾಸ್ತ್ರಗಳು ಹಾಗು ಅವರಿರುವ ನಕ್ಷೆಯನ್ನೂ ಕೂಡ ಕಂಡು ಹಿಡಿಯಬಹುದಾಗಿದೆ. ಈ ಹೆಲ್ಮೆಟ್ ನಲ್ಲಿರುವ ಸ್ಕ್ರೀನ್ ನ ಪಾಪಪ್ ಓಪನ್ ಆಗುತ್ತದೆ, ಇದರ ಮೂಲಕ ಯುದ್ಧ ಕ್ಷೇತ್ರದಲ್ಲಿ ಪ್ಲ್ಯಾನ್ ಮಾಡಲು ಉಪಯೋಗಕಾರಿಯಾಗಿದೆ. ಹೆಲ್ಮೆಟ್ ನಲ್ಲಿ ನೈಟ್ ವಿಶನ್ ನ ಆಪ್ಷನ್ ಕೂಡ ಇದೆ.

ರಷ್ಯಾ ಸೈನಿಕರ ಬಲ ಹೆಚ್ಚಿಸಲಿದೆ ಈ ಕವಚ:

ಈ ಅತ್ಯಾಧುನಿಕ ಯೂನಿಫಾರಂ ನ್ನ ಮಾಸ್ಕೋ ದಲ್ಲಿರುವ ನ್ಯಾಶನಲ್ ಯೂನಿವರ್ಸಿಟಿ ಆಫ್ ಸೈನ್ಸ್ & ಟೆಕ್ನಾಲಾಜಿ ತಯಾರಿಸಿದೆ. ರಷ್ಯಾದ ಸೈನಿಕರಿಗೆ ಈ ಹೊಚ್ಚ ಹೊಸ ಅತ್ಯಾಧುನಿಕ ರಕ್ಷಾ ಕವಚ ಸಿಕ್ಕ ಬಳಿಕ ರಷ್ಯಾ ಸೇನಾ ಬಲ ಕೂಡ ಹೆಚ್ಚಲಿದೆ. ಈ ಹೈಟೆಕ್ ರೋಬೋಟಿಕ್ ಕವಚದ ಹೊರಗಿನ ಲೇಯರ್ ‘ಎಕ್ಸೋ ಸ್ಕೆಲಿಟನ್’ ಸೈನಿಕರ ತಾಕತ್ತು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಇದರ ಮೂಲಕ ಶತ್ರುಗಳ ಗುಂಡಿನ ದಾಳಿಯಿಂದ ಬಚಾವ್ ಆಗಬಹುದಾಗಿದೆ.

ಈ ರೋಬೋಟಿಕ್ ಕವಚಕ್ಕೆ ಒಂದು ಮಾಡೆಲ್ ನ್ನೂ ಹಾಕಲಾಗಿದೆ. ರೋಬೋಟಿಕ್ ಕವಚದ ಕೈ ಭಾಗಗಳನ್ನ ಕ್ಯಾಮೊಫ್ಲೇಜ್ ಪ್ರಿಂಟ್ ಇರುವ ಫ್ಯಾಬ್ರಿಕ್ ಪ್ಯಾಟರ್ನ್ ನಿಂದ ಕವರ್ ಮಾಡಲಾಗಿದೆ, ಇದರ ಜೊತೆ ಜೊತೆಗೆ ಇದನ್ನ ಬುಲೆಟ್ ಪ್ರೂಫ್ ಪ್ಲೇಟ್ಸ್ ಗಳಿಂದಲೂ ರಕ್ಷಣೆ ಒದಗಿಸಲಾಗಿದೆ.

ಭಾರತಕ್ಕೂ ಬರಲಿದೆ ಈ ರಕ್ಷಾ ಕವಚ:

ಭಾರತೀಯ ರಕ್ಷಣಾ ಸಚಿವಾಲಯದ ಬಲ್ಲ ಮೂಲಗಳ ಪ್ರಕಾರ ರಷ್ಯಾ ತನ್ನ ಈ ಸೂಪರ್ಸಾನಿಕ್ ರಕ್ಷಣಾ ಕವಚವನ್ನ ಭಾರತದ ಜೊತೆಗೂ ಹಂಚಿಕೊಳ್ಳಲಿದೆ. ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಈ ಹಿಂದೆಯೂ ಭಾರತ ಹಾಗು ರಷ್ಯಾ ಜಂಟಿಯಾಗಿ ಬ್ರಹ್ಮೋಸ್ ನಂತಹ ಶಕ್ತಿಶಾಲಿ ಮಿಸೈಲ್ ನ್ನ ಅವಿಷ್ಕಾರ ಮಾಡಿವೆ.

ರಿಮೋಟ್ ಕಂಟ್ರೋಲ್ ನ ಟ್ಯಾಂಕ್ ಕೂಡ ರೆಡಿ ಮಾಡಿದೆ ರಷ್ಯಾ:

ಈ ವಿಶಿಷ್ಟವಾದ ಯೂನಿಫಾರಂ ನ ಪ್ರಕಾರವಾಗಿಯೇ ಕಾಲಿನಲ್ಲಿ ಸ್ಕೀ ನಂತಹ ಶೂ ಹಾಕಲಾಗುವುದು, ಇದೊಂದು ಮೆಟಲ್ ಫ್ಲೇಮ್ ನ ಸಹಾಯದಿಂದ ಸೊಂಟದ ಜೊತೆ ಫಿಕ್ಸ್ ಆಗಿಬಿಡುತ್ತೆ. ಈ ಸುರಕ್ಷಾ ಕವಚವನ್ನ ಮಾಸ್ಕೋದಲ್ಲಿರುವ ಶಸ್ತ್ರಾಸ್ತ್ರಗಳನ್ನ ನಿರ್ಮಿಸುವ ರಿಸರ್ಚ್ ಇನ್ಸ್ಟಿಟ್ಯೂಟ್ ಫಾರ್ ಪ್ರೆಸಿಸನ್ ಮಷೀನ್ ಬಿಲ್ಡಿಂಗ್ ನಲ್ಲಿ ತಯಾರಿಸಲಾಗಿದೆ. ಇದಕ್ಕೂ ಮುಂಚೆಯೇ ರಷ್ಯಾ ಏಪ್ರಿಲ್‌ನಲ್ಲಿ ಒಂದು ರಿಮೋಟ್ ಕಂಟ್ರೋಲ್ ಟ್ಯಾಂಕರ್ ನ ಟೆಸ್ಟ್ ಕೂಡ ನಡೆಸಿತ್ತು.

ಆ ರಿಮೋಟ್ ಕಂಟ್ರೋಲ್ಡ್ ಟ್ಯಾಂಕರ್ ನಲ್ಲಿ 30 ಎಂಎಂ ನ ಗನ್ ಹಾಗು 6 ಮಿಸೈಲ್ ಗಳೂ ಇರಲಿವೆ. ಇದನ್ನ ಒಬ್ಬ ಡ್ರೈವರ್ ಚಲಾಯಿಸುತ್ತಾನೆ, ಅದನ್ನ ಆತ ಒಂದು ಕ್ಯಾಮೆರಾ ಕ್ಲಿಂಪಪ್ ನ ಮೂಲಕ ರಣಾಂಗಣದಲ್ಲಿ ಶತ್ರುಗಳಿಂದ ನಡೆಯುತ್ತಿರುವ ಷಡ್ಯಂತ್ರಗಳ ಮೇಲೆ ಕಣ್ಣಿಡುತ್ತಾನೆ. ಇದರ ಜೊತೆ ಜೊತೆಗೆ ಒಂದು ಡ್ರೋನ್ ನ ಮೂಲಕ ರಣಾಂಗಣದಲ್ಲಿನ ವ್ಯಾಪಕ ವಿಸ್ತಾರದ ದೃಶ್ಯಗಳನ್ನೂ ಆತ ನೋಡಬಹುದಾಗಿದೆ.

– Vinod Hindu Nationalist

Leave a Reply

Your e-mail address will not be published. Required fields are marked *

error: Content is protected !!