ಕಾಂ’ಗ್ರೆಸ್ಸಿನ ನೂತನ ಅಧ್ಯ’ಕ್ಷೆಯಾಗಿ ಮಮ’ತಾ ಬ್ಯಾ’ನರ್ಜಿ ಆಯ್ಕೆ?

ಬಿಜೆಪಿ ಹಿರಿಯ ನಾಯಕ ಹಾಗು ಫೈರ್‌ಬ್ರ್ಯಾಂಡ್ ನಾಯನೆಂದೇ ಖ್ಯಾತಿಯಾಗಿರುವ ಸುಬ್ರಮಣಿಯನ್ ಸ್ವಾಮಿ ಕಾಂಗ್ರೆಸ್ಸಿನ ಚಳಿಜ್ವರ ಬಿಡಿಸುವಲ್ಲಿ ನಿಸ್ಸೀಮರು. ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗು ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನ ನ್ಯಾಶನಲ್ ಹೆರಾಲ್ಡ್ ಕೇಸ್‌ನಲ್ಲಿ ಚಕ್ರವ್ಯೂಹ ಹೆಣೆದು ಕೋರ್ಟ್ ಮೆಟ್ಟಿಲೇರಿ ಬೇಲ್ ಮೇಲೆ ಓಡಾಡುವಂತೆ ಮಾಡಿದ್ದು ಇದೇ ಸುಬ್ರಮಣಿಯನ್.

ಪ್ರತಿ ಬಾರಿ ಕಾಂಗ್ರೆಸ್ಸಿಗೆ ಭಾರೀ ಹೊಡೆತವನ್ನೇ ಕೊಡುವ ಸುಬ್ರಮಣಿಯನ್ ಸ್ವಾಮಿ ಈ ಬಾರಿ ಕಾಂಗ್ರಸ್ಸಿಗೆ ಮಹತ್ವದ ಸಲಹೆಯೊಂದನ್ನ ನೀಡಿದ್ದಾರೆ. ಬಿಜೆಪಿಯ ರಾಜ್ಯಸಭ ಸಂಸದ ಸುಬ್ರಮಣಿಯನ್ ಸ್ವಾಮಿ ಕಾಂಗ್ರೆಸ್ ಪಕ್ಷಕ್ಕೆ ಸಲಹೆ ನೀಡುತ್ತ ಟಿಎಂಸಿ ಪಕ್ಷದ ಅಧ್ಯಕ್ಷೆ ಹಾಗು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನ ಕಾಂಗ್ರಸ್ಸಿನ ನೂತನ ಅಧ್ಯಕ್ಷೆಯಾಗಿ ಆಯ್ಕೆ ಮಾಡಿ ಎಂಬ ಸಲಹೆಯನ್ನ ನೀಡಿದ್ದಾರೆ.

ಸುಬ್ರಮಣಿಯನ್ ಸ್ವಾಮಿಯವರು ಟ್ವಿಟ್ಟರ್ ನಲ್ಲಿ ಈ ಕುರಿತು ಟ್ವೀಟ್ ಮಾಡುತ್ತ ಟಿಎಂಸಿ ಪಕ್ಷವನ್ನ ಕಾಂಗ್ರೆಸ್ ಪಕ್ಷದ ಜೊತೆ ವಿಲೀನ ಮಾಡುವಂತೆ ಸಲಹೆ ಕೊಟ್ಟಿದ್ದಾರೆ. ಸ್ವಾಮಿಯವರು ಗೋವಾ ಹಾಗು ಕಾಶ್ಮೀರದಲ್ಲಿನ ಸ್ಥಿತಿಯನ್ನ ನೋಡಿದ ಬಳಿಕ ಒಂದು ವೇಳೆ ರಾಷ್ಟ್ರದಲ್ಲಿ ಬಿಜೆಪಿ ಪಕ್ಷವೊಂದೇ ಉಳಿದುಬಿಟ್ಟರೆ ಪ್ರಜಾಪ್ರಭುತ್ವ ದುರ್ಬಲವಾಗಿಬಿಡುತ್ತೆ ಎಂದಿದ್ದಾರೆ. ಸುಬ್ರಮಣಿಯನ್ ಸ್ವಾಮಿ ಯವರು ಈ ಕುರಿತು ಸಲಹೆ ನೀಡುತ್ತ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ ಹಾಗು ಶರದ್ ಪವಾರ್ ನೇತೃತ್ವದ ರಾಷ್ಟ್ರವಾದಿ ಕಾಂಗ್ರಸ್ ಪಕ್ಷ(NCP) ಗಳನ್ನ ಕಾಂಗ್ರೆಸ್ ಪಕ್ಷದಲ್ಲಿ ವಿಲೀನಗೊಳಿಸಿ ಮಮತಾ ಬ್ಯಾನರ್ಜಿಯನ್ನ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆಯಾಗಿ ಮಾಡಬೇಕು ಎಂದಿದ್ದಾರೆ.

ಅವರು ಕಾಂಗ್ರೆಸ್ಸಿನ ವಿರುದ್ದ್ ಲೇವಡಿ ಮಾಡುತ್ತ ಕಳೆದ ಕೆಲ ದಿನಗಳ ಹಿಂದೆ ತಮ್ಮದೇ ಪಕ್ಷದ ಜನ ಕಾಂಗ್ರೆಸ್ಸಿಗೆ ಮೋಸ ಮಾಡಿದ್ದರು. ಗೋವಾದ 15 ಕಾಂಗ್ರೆಸ್ ಶಾಸಕರಲ್ಲಿ 10 ಶಾಸಕರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಅಷ್ಟೇ ಅಲ್ಲದೆ 2017 ರಲ್ಲಿ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಜಮ್ಮು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಕೂಡ ಕಾಂಗ್ರೆಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿತ್ತು. 

ಕರ್ನಾಟಕದಲ್ಲಿನ ಮೈತ್ರಿ ಸರ್ಕಾರದ 16 ಶಾಸಕರು ಪಕ್ಷದಿಂದ ರಾಜೀನಾಮೆ ಕೊಟ್ಟಿದ್ದಾರೆ. ಅದರಲ್ಲಿ 13 ಜನ ಶಾಸಕರು ಕಾಂಗ್ರೆಸ್ ಪಕ್ಷದವರೇ ಆಗಿದ್ದಾರೆ. ಈ ಪ್ರಕರಣ ಇದೀಗ ಸುಪ್ರೀಂಕೋರ್ಟ್ ತಲುಪಿದ್ದು ಮುಖ್ಯ ನ್ಯಾಯಾಧೀಶ ರಂಜನ್ ಗೋಗೊಯ್ ರವರು ಮಾತನಾಡುತ್ತ ಕರ್ನಾಟಕ ವಿಧಾನಭೆಯ ಸಭಾಧ್ಯಕ್ಷ 16 ಜುಲೈವರೆಗೆ ಈ ರಾಜೀನಾಮೆ ಪತ್ರಗಳನ್ನ ಹಾಗೇ ಇಟ್ಟಿದ್ದಾರೆ ಇನ್ನೂ ಅವುಗಳನ್ನ ಅಂಗೀಕರಿಸಿಲ್ಲ ಎಂದಿದ್ದಾರೆ‌.

ಕೆಲ ದಿನಗಳ ಹಿಂದೆಯಷ್ಟೇ ಸುಬ್ರಮಣಿಯನ್ ಸ್ವಾಮಿ ಯವರು ರಾಹುಲ್ ಗಾಂಧಿಯನ್ನ “ನಶೆಯ ವ್ಯಕ್ತಿ” ಎಂದಿದ್ದರು. ರಾಹುಲ್ ಗಾಂಧಿಯ ವಿರುದ್ದದ ಈ ಹೇಳಿಕೆಯ ಬಳಿಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕೆಂಡಾಮಂಡಲವಾಗಿದ್ದರು. ಸುಬ್ರಮಣಿಯನ್ ಸ್ವಾಮಿಯವರನ್ನ ತಕ್ಷಣವೇ ಬಂಧಿಸುವ ಆಗ್ರಹಿಸಿ ಅವರ ವಿರುದ್ಧ ಪ್ರಕರಣ ಕೂಡ ದಾಖಲಿಸಿದ್ದರು.

ಸುಬ್ರಮಣಿಯನ್ ಸ್ವಾಮಿ ರಾಹುಲ್ ಗಾಂಧಿ ಹಾಗು ಕಾಂಗ್ರೆಸ್ಸಿನ ವಿರುದ್ಧ ಈ ರೀತಿಯಾಗಿ ಲೇವಡಿ ಮಾಡಿದ್ದು ಇದೇ ಮೊದಲೇನಲ್ಲ. ಇದಕ್ಕೂ ಮೊದಲು ಹಲವು ಬಾರಿ ರಾಹುಲ್ ಗಾಂಧಿ ವಿರುದ್ಧ ಅವರು ವಾಗ್ದಾಳಿ ನಡೆಸಿದ್ದರು. ಸುಬ್ರಮಣಿಯನ್ ಸ್ವಾಮಿ ರಾಹುಲ್ ಗಾಂಧಿ ಕುರಿತು ಆಗಾಗ ಇಂತಹ ಹೇಳಿಕೆಗಳನ್ನ ನೀಡುತ್ತಲೇ ಇರುತ್ತಾರೆ.

– Team Google Guruu

Leave a Reply

Your e-mail address will not be published. Required fields are marked *

error: Content is protected !!