ಹಿಂದುತ್ವಕ್ಕೆ ಸಿಕ್ಕ ಭರ್ಜರಿ ಜಯ; ದಿಗ್ವಿಜಯ್ ಸಿಂಗ್‌ನನ್ನ ಸೋಲಿಸಿದ ಸಾಧ್ವಿ ಪ್ರಜ್ಞಾ ಸಿಂಗ್

ಲೋಕಸಭಾ ಚುನಾವಣೆ 2019 ರ ಫಲಿತಾಂಶ ಬಂದಿದೆ ಹಾಗು ಯಾವ್ಯಾವ ಕ್ಷೇತ್ರಗಳಲ್ಲಿ ಹೈವೋಲ್ಟೇಜ್ ಕದನವಿತ್ತೋ ಆ ಕ್ಷೇತ್ರಗಳ ಪೈಕಿ ಮಧ್ಯಪ್ರದೇಶದ ಭೋಪಾಲ್ ಕ್ಷೇತ್ರ ಕೂಡ ಒಂದಾಗಿತ್ತು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ದಿಗ್ವಿಜಯ್ ಸಿಂಗ್ ಹಾಗು ಬಿಜೆಪಿಯಿಂದ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ರವರು ಚುನಾವಣಾ ಕಣದಲ್ಲಿದ್ದರು.

ದಿಗ್ವಿಜಯ್ ಸಿಂಗ್ ತನ್ನನ್ನ ತಾನು ಒ್ರಬಕ ನಾಯಕನೆಂದು ಬೀಗುತ್ತಿದ್ದ, ಈತ ಎರಡು ಬಾರಿ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದ ಹಾಗು ಕಾಂಗ್ರೆಸ್ಸಿನ ಜನರಲ್ ಸೆಕ್ರೆಟರಿಯಾಗಿಯೂ ಕಾರ್ಯ ನಿರ್ವಹಿದಿದ್ದ. ಈತನ ವಿರುದ್ಧ ಬಿಜೆಪಿಯಿಂದ ಮೊಟ್ಟ ಮೊದಲ ಬಾರಿಗೆ ರಾಜಕೀಯಕ್ಕೆ ಸ್ಪರ್ಧಿಸಿ ದಿಗ್ವಿಜಯ್ ಸಿಂಗ್ ವಿರುದ್ಧ ಸಾಧ್ವಿ ಪ್ರಜ್ಞಾ ಸಿಂಗ್ ಚುನಾವಣೆಗೆ ಸ್ಪರ್ಧಿಸಿದ್ದರು.

ಭೋಪಾಲ್‌ನಲ್ಲಿ ಧರ್ಮ ಹಾಗು ಅಧರ್ಮಗಳ ನಡುವಿನ ಚುನಾವಣೆ ಏರ್ಪಟ್ಟಿತ್ತು, ಭಯೋತ್ಪಾದಕ ಜಾಕೀರ್ ನಾಯಕ್‌ನ ಸಮರ್ಥಕ, ಭಯೋತ್ಪಾದಕರ ಸಿಂಪತೈಸರ್ ದಿಗ್ವಿಜಯ್ ಸಿಂಗ್ ವರ್ಸಸ್ ರಾಷ್ಟ್ರವಾದ ಹಾಗು ಹಿಂದುತ್ವದ ಪ್ರತೀಕವಾಗಿದ್ದ ಸಾಧ್ವಿ ಪ್ರಜ್ಞಾ ಸಿಂಗ್ ರವರ ನಡುವೆ ಚುನಾವಣಾ ಕದನ ನಡೆದಿತ್ತು.

ಕೊನೆಗೂ ಈ ಧರ್ಮಯುದ್ಧದಲ್ಲಿ ಧರ್ಮಕ್ಕೇ ಜಯ ಸಿಕ್ಕಿದೆ:

ಸಾಧ್ವಿ ಪ್ರಜ್ಞಾ ಸಿಂಗ್ ಭೋಪಾಲ್ ಕ್ಷೇತ್ರವನ್ನ ಗೆದ್ದು ಬೀಗಿದ್ದಾರೆ ಹಾಗು ಕಾಂಗ್ರೆಸ್ಸಿನ ದಿಗ್ವಿಜಯ್ ಸಿಂಗ್‌ನ್ನ ಹೀನಾಯವಾಗಿ ಸೋಲಿಸಿ ಸೋಲಿನ ರುಚಿ ತೋರಿಸಿದ್ದಾರೆ. ಭೋಪಾಲ್ ಜನತೆ ಸಾಧ್ವಿ ಪ್ರಜ್ಞಾ ಸಿಂಗ್‌ರನ್ನ ತಮ್ಮ ಸಂಸದೆಯಾಗಿ ಆಯ್ಕೆ ಮಾಡಿದ್ದಾರೆ. ಈ ಕ್ಷೇತ್ರದ ಚುನಾವಣೆ ನೇರವಾಗಿ ಹಿಂದುತ್ವದ ಹೆಸರಲ್ಲೇ ನಡೆದಿತ್ತು. ಹಿಂದುಗಳು ಭಯೋತ್ಪಾದರಕರು ಎಂದು ಹೇಳಿಕೆ ನೀಡಿ ಹಿಂದೂ ಭಯೋತ್ಪಾದನೆ ಎಂಬ ಶಬ್ದವನ್ನ ಹುಟ್ಟು ಹಾಕಿದ್ದ ದಿಗ್ವಿಜಯ್ ಸಿಂಗ್ ಕೂಡ ಈ ಚುನಾವಣೆ ಗೆಲ್ಲಲು ತಾನೂ ಹಿಂದೂ ಎಂದು ಕೇಸರಿ ಬಾವುಟ ಹಿಡಿದು ಚುನಾವಣಾ ಕಣಕ್ಕಿಳಿದಿದ್ದ.

ಆದರೆ ಭೋಪಾಲ್ ಜನತೆ ಕೊನೆಗೂ ತಮ್ಮ ನಿರ್ಧಾರವನ್ನ ತಮ್ಮ ವೋಟ್ ಮೂಲಕ ತಿಳಿಸಿದ್ದು ತನ್ನನ್ನ ತಾನು ಗ್ರೇಟ್ ಲೀಡರ್ ಅಫ್ ಮಧ್ಯಪ್ರದೇಶದ ಎನ್ನುತ್ತಿದ್ದ ದಿಗ್ವಿಜಯ್ ಸಿಂಗ್‌ಗೆ ಮೊದಕ ಬಾರಿ ಚುನಾವಣೆ ಸ್ಪರ್ಧಿಸಿದ್ದ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಎದುರು ಮಂಡಿಯೂರಿದ್ದಾನೆ. ಹಿಂದೂ ಧರ್ಮವನ್ನ ನಿಂದಿಸುವವರನ್ನ ಈ ದೇಶ ಎಂದಿಗೂ ಕ್ಷಮಿಸಲಾರರು ಎಂಬುದು ಈ ಫಲಿತಾಂಶದಿಂದ ಸಾಬೀತಾಗಿದೆ.

– Team Google Guruu

Leave a Reply

Your e-mail address will not be published. Required fields are marked *

error: Content is protected !!