ಪ್ರಪ್ರಥಮವಾಗಿ ಸಂಸದೆಯಾಗಿ ಆಯ್ಕೆಯಾದ ಬಳಿಕ ಸಾಧ್ವಿ ಪ್ರಜ್ಞಾ ಠಾಕೂರ್ ಮಾಡಿದ್ದೇನು

2019 ರ ಲೋಕಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರ ದೇಶ ಹಾಟ್ ಸೀಟ್‌ಗಳ ಲಿಸ್ಟ್ ನಲ್ಲಿತ್ತು. ಭೋಪಾಲ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ಸಿನಿಂದ ದಿಗ್ವಿಜಯ್ ಸಿಂಗ್ ಚುನಾವಣಾ ಕಣದಲ್ಲಿದ್ದರು, ಇವರು ಸನಾತನ ಹಿಂದೂ ಧರ್ಮದ ಮೇಲೆ ಭಾರೋ ದಾಳಿ ನಡೆಸುತ್ತ ದಿಗ್ವಿಜಯ್ ಸಿಂಗ್ “ಹಿಂದೂ ಭಯೋತ್ಪಾದನೆ” ಎಂಬ ಥಿಯರಿಯನ್ನ ಭಾರತದಾದ್ಯಂತೆ ಬಿತ್ತಲು ಹೊರಟಿದ್ದರು.

ಇಂತಹ ದಿಗ್ವಿಜಯ್ ಸಿಂಗ್ ವಿರುದ್ಧ ಬಿಜೆಪಿಯ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಕಣದಲ್ಲಿದ್ದರು. ಹಿಂದೂ ಭಯೋತ್ಪಾದನೆ ಎಂಬ ತಥಾಕಥಿತ ಕೇಸ್ ನಲ್ಲಿ ಇದೇ ಸಾಧ್ವಿ ಪ್ರಜ್ಞಾ ಸಿಂಗ್ ರನ್ನ ಬರೋಬ್ಬರಿ 9 ವರ್ಷಗಳ ಕಾಲ ಜೈಲಿನಲ್ಲಿ ಕೊಳೆಸಲಾಗಿತ್ತು. ಚಿತ್ರ ಹಿಂಸೆಯನ್ನ ಕೊಟ್ಟು ಈ ಮಹಿಳೆಗೆ ನರಕಯಾತನೆ ಕೊಟ್ಟಿದ್ದು ಅಷ್ಟಿಷ್ಟೇನಲ್ಲ. ಆದರೆ ಈ ದಿಟ್ಟ ಮಹಿಳೆ ಹಿಂದೂ ಧರ್ಮವನ್ನ ಮಾತ್ರ ಬಿಟ್ಟುಕೊಡಲಿಲ್ಲ.

ಇದಾದ ಬಳಿಕ ಈಗ ಭೋಪಾಲ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ದಿಗ್ವಿಜಯ್ ಸಿಂಗ್ ಹಾಗು ಸಾಧ್ವಿ ಪ್ರಜ್ಞಾ ಸಿಂಗ್ ಮುಖಾಮುಖಿಯಾಗಿಬಿಟ್ಟರು. ಇದೇ ಕಾರಣದಿಂದ ಭೋಪಾಲ್ ಲೋಕಸಭಾ ಕ್ಷೇತ್ರದ ಚುನಾವಣೆಯ ಮೇಲೆ ದೇಶದ ಮೇಲೆ ಭಾರೀ ಕ್ರೇಜ್ ಹೆಚ್ಚಾಗಿತ್ತು. ಈ ಕ್ಷೇತ್ರದಲ್ಲಿ ಭಗವಾ ಭಯೋತ್ಪಾದನೆ ಹಬ್ಬಿಸಿದ್ದ ದಿಗ್ವಿಜಯ್ ಸಿಂಗ್ ಗೆಲ್ಲುತ್ತಾರೋ ಇಲ್ಲ ಫೈರ್‌ಬ್ರ್ಯಾಂಡ್ ಸಾಧ್ವಿ ಗೆಲ್ಲುತ್ತಾರೋ ಎಂಬ ಗುತೂಹಲ್ ಗರಿಗೆದರಿತ್ತು.

ಆ ಕ್ಷಣ ಬಂದೇ ಬಿಟ್ಟಿತ್ತು, ಮೇ 23 ರಂದು ಲೋಕಸಭಾ ಚುನಾವಣೆ ಫಲಿತಾಂಶ ಬಂದಾಗ ಭೋಪಾಲ್ ಲೋಕಸಭಾ ಕ್ಷೇತ್ರದಿಂದ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಭರ್ಜರಿಯಾದ ಗೆಲುವು ಸಾಧಿಸಿ ದಿಗ್ವಿಜಯ್ ಸಿಂಗ್‌ರನ್ನ ಸೋಲಿಸಿ ಲೋಕಸಭೆಗೆ ಆಯ್ಕೆಯಾಗೇ ಬಿಟ್ಟರು. ಭಗವಾದಾರಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಭಗವಾ ಭಯೋತ್ಪಾದನೆ ಎಂಬ ಷಡ್ಯಂತ್ರ ರಚಿಸಿದ್ದ ದಿಗ್ವಿಜಯ್ ಸಿಂಗ್ ರನ್ನ ಮೂರುವರೇ ಲಕ್ಷ ಮತಗಳ ಅಂತರದಿಂದ ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ.

ಭೋಪಾಲ್‌ನಿಂದ ಸಂಸದೆಯಾದ ಬಳಿಕ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಎಂಥಾ ಘೋಷಣೆ ಮಾಡಿದರೆಂದರೆ ಜನಗಳೀಗ್ ಅವರಿಗೆ ಹ್ಯಾಟ್ಸಾಫ್ ಎನ್ನುತ್ತಿದ್ದಾರೆ. ಸಾಧ್ವಿ ಪ್ರಜ್ಞಾ ಠಾಕೂರ್ ರವರು ಘೋಷಣೆ ಮಾಡುತ್ತ ತನಗೆ ಸಂಸದ ನಿಧಿ ಹಾಗು ತಮ್ಮ ಸಂಬಳವನ್ನ ನಿರ್ಗತಿಕರಿಗೆ ದಾನ ಮಾಡುತ್ತೇನೆ ಎಂಬ ಘೋಷಣೆ ಮಾಡಿದ್ದಾರೆ. ಮಂಗಳವಾರದಂದು ಗಾಜಿಯಾಬಾದ್‌ನ ಎಎಲ್‌ಟಿ ಸೆಂಟ್ ನಲ್ಲಿ ಅಮರ್ ಹುತಾತ್ಮಾ ವೀರ ಸಾವರ್ಕರ್‌ಜೀ ಜನ್ಮದಿನದಂದು ಕಾರ್ಯಕ್ರಮದಲ್ಲಿ ಮಾತಮಾಡುತ್ತ ಅವರು ತಾನು ಹಿಂದೆ ಹೇಗೆ ಜೀವನ ನಡೆಸುತ್ತಿದ್ದರೋ ಅದೇ ರೀತಿಯಲ್ಲಿ ಜೀವನ ನಡೆಸುವಿದಾಗಿ ಹೇಳಿದ್ದಾರೆ.

ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮಾತನಾಡುತ್ತ ಭಿಕ್ಷೆಯಲ್ಲಿ ಪಡೆದ ಸಿಕ್ಕ ಭೋಜನ ಹಾಗು ಬಟ್ಟೆಗಳ ಮೂಲಕವೇ ಜೀವನ ಸಾಗಿಸುತ್ತೇನೆ ಎಂದಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಸ್ತುತಗೊಳಿಸಿದ 2 ಪ್ರಸ್ತಾವನೆಗಳಲ್ಲಿ ಶಾಲೆಗಳಲ್ಲಿ ಸೈನ್ಯ ತರಬೇತಿ ನೀಡುವ ಹಾಗು ಜನಸಂಖ್ಯಾ ನಿಯಂತ್ರಣ ಜಾರಿಗೆ ತರುವ ಕುರಿತು ಮಾತನಾಡಿದ ಅವರು ಇವರೆಡು ವಿಷಯಗಳ ಬಗ್ಗೆ ತಮ್ಮ ಸಮ್ಮತಿಯಿದೆ ಎಂದರು.

ಜನಸಂಖ್ಯಾ ನಿಯಂತ್ರಣ ಕಾನೂನನ್ನ ಜಾರಿಗೆ ತರಲು ಸಾಧ್ವಿ ಪ್ರಜ್ಞಾ ಸಿಂಗ್ ರವರು ಮಾತನಾಡುತ್ತ ಸಂವಿಧಾನದ ಪ್ರಕಾರವೇ ಈ ಚರ್ಚೆಯಾಗಬೇಕು ಹಾಗು ದೇಶಹಿತದಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅವರು ಹೇಳಿದರು. ಜೈಲಿನಲ್ಲಿ ತಾವು ಅನುಭವಿಸಿದ ಘೋರ ಶಿಕ್ಷೆಯ ಬಗ್ಗೆ ಮಾತನಾಡಿದ ಅವರು ಈ ಕಷ್ಟ ದೇಶದ ವೀರಾಂಗಣಿಯಯರು ಅನುಭವಿಸಿದ ಕಷ್ಟದ ಮುಂದೆ ತೃಣ ಸಮಾನ ಎಂದು ಅವರು ಹೇಳಿದರು.

– Team Google Guruu

Leave a Reply

Your e-mail address will not be published. Required fields are marked *

error: Content is protected !!