ಪಾಕಿಸ್ತಾನದ ಬರೋಬ್ಬರಿ 100 ಹಳ್ಳಿಗಳನ್ನ ವಶಪಡಿಸಿಕೊಂಡ ಭಾರತೀಯ ದರೋಡೆಕೋರ

ಭಾರತದ ಒಬ್ಬ “ಡಾಕೂ” ಪಾಕಿಸ್ತಾನದ ಬರೋಬ್ಬರಿ 100 ಹಳ್ಳಿಗಳನ್ನ ವಶಪಡಿಸಿಕೊಂಡಿದ್ದ. ಈತನ್ಯಾರೂ ಭಾರತೀಯ ಯೋಧನಲ್ಲ ಅಥವ ಯಾವುದೋ ರಾಜ್ಯದ ರಾಜನಲ್ಲ ಆದರೂ ಈತ ಪಾಕಿಸ್ತಾನಕ್ಕೆ ಮಣ್ಣುಮುಕ್ಕಿಸಿ ಪಾಕಿಸ್ತಾನದ ಬರೋಬ್ಬರಿ 100 ಹಳ್ಳಿಗಳನ್ನ ತನ್ನ ಸುಪರ್ದಿಗೆ ತೆಗೆದುಕೊಂಡಿದ್ದ.

ಭಾರತ ಹಾಗು ಪಾಕಿಸ್ತಾನದ ನಡುವೆ ನಡೆದ ಯುದ್ಧದ ಸಂದರ್ಭದಲ್ಲಿ ನಡೆದ ಈ ಘಟನೆ ಬಹಳ ಜನರಿಗೆ ಗೊತ್ತೇ ಇಲ್ಲ‌. ಈ ಹೋರಾಟದಲ್ಲಿ ಒಬ್ಬ ರಾಜ ಹಾಗು ದರೋಡೆಕೋರ ಇಬ್ಬರೂ ಸೇರಿ ಪಾಕಿಸ್ತಾನಕ್ಕೆ ಮಣ್ಣುಮುಕ್ಕಿಸಿ ಪಾಕಿಸ್ತಾನದ ಬಹುದೊಡ್ಡ ಭಾಗವಾದ ಸಿಂಧ್ ಪ್ರಾಂತ್ಯದ 100 ಹಳ್ಳಿಗಳನ್ನ ವಶಪಡಿಸಿಕೊಂಡಿದ್ದರು. ಆ ರಾಜ ಮತ್ಯಾರೂ ಅಲ್ಲ ಆತ ಜೈಪುರ(ರಾಜಸ್ಥಾನ)ದ ರಾಜ ಲೆಫ್ಟಿನೆಂಟ್ ಕರ್ನಲ್ “ಸವಾಯಿ ಭವಾನಿ ಸಿಂಗ್” ಹಾಗು ಆ ದರೋಡೆಕೋರ ಮತ್ಯಾರೂ ಅಲ್ಲ ಆತ “ಬಲವಂತ ಸಿಂಗ್ ಬಾಖಾಸರ್” ಎಂಬಾತನಾಗಿದ್ದನು.

ಭಾರತ-ಪಾಕಿಸ್ತಾನದ ನಡುವಿನ 1971 ರ ಯುದ್ಧವು ಡಿಸೆಂಬರ್ 3 ರಿಂದ ಡಿಸೆಂಬರ್ 16 ರವರೆಗೆ ನಡೆದಿತ್ತು. ಭಾರತೀಯ ಸೇನೆಯ ಸೈನಿಕರು ಮರುಭೂಮಿಯಲ್ಲಿ ಪಕ್ಕಾ ಸಿಕ್ಕಿಬೀಳುತ್ತಾರೆ ಅವರಿಗೆ ಮರಳುಗಾಡಿನಲ್ಲಿ ಯುದ್ಧಕ್ಕೆ ಸನ್ನದ್ಧರಾಗಲು ಸಧ್ಯವಾಗೋದಿಲ್ಲ ಸೋ ಈ ಪ್ರದೇಶದ ಬಗ್ಗೆ ಸಂಪೂರ್ಣ ಮಾಹಿತಿಯಿರುವ ಡಕಾಯಿತ(ಡಾಕೂ) ಭಾರತೀಯ ಸೇನೆಗೆ ಸಹಾಯ ಮಾಡಬಲ್ಲ ಏಕೈಕ ವ್ಯಕ್ತಿ ಅನ್ನೋದು ರಾಜಾ ಸವಾಯಿ ಭವಾನಿ ಸಿಂಗರಿಗೆ ಗೊತ್ತಿತ್ತು. ಭವಾನಿ ಸಿಂಗರು ಡಾಕೂ ಬಲವಂತ್ ಸಿಂಗನ ಸಹಾಯ ಕೇಳಿದ್ದರು. ಆಗ ಬಲವಂತ್ ಸಿಂಗನ ಮೇಲೆ ಡಕಾಯಿತಿ,‌ ಕೊಲೆ, ಸುಲಿಗೆಯ ಹಲವಾರು ಕೇಸ್ ಗಳು ದಾಖಲಾಗಿದ್ದವು.

ಬಲವಂತ್ ಸಿಂಗ್ ನ ಬಿಗಿ ಹಿಡಿತ ಭಾರತ ಹಾಗು ಪಾಕಿಸ್ತಾನದ ಹಲವು ಪ್ರದೇಶಗಳಲ್ಲಿತ್ತು‌. ಬಲವಂತ್ ಸಿಂಗ್ ನಿಗೆ ಪಾಕಿಸ್ತಾನದ ನೂರು ಕಿಲೋಮೀಟರ್ ಸುತ್ತಮುತ್ತಲಿನ ಪ್ರದೇಶದ ಬಗ್ಗೆ ಚೆನ್ನಾಗೇ ತಿಳಿದಿತ್ತು. ಮಹಾರಾಜಾ ಹೇಳಿದ ಬಳಿಕ ಡಾಕೂ ಬಲವಂತ್ ಸಿಂಗ್ ಭಾರತೀಯ ಸೇನೆಯ ಜೊತೆ ಸೇರಿ ಪಾಕಿಸ್ತಾನದ ವಿರುದ್ಧ ಹೋರಾಡಲು ಸಿದ್ಧನಾಗಿಬಿಟ್ಟ. ಆದರೆ ರಾಜಾ ಭವಾನಿ ಸಿಂಗರ ಈ ಪ್ರಸ್ತಾವನೆಗೆ ಆಗಿನ ರಾಜಸ್ಥಾನದ ಮುಖ್ಯಮಂತ್ರಿಯಾಗಿದ್ದ ಜಯನಾರಾಯಣ್ ವ್ಯಾಸ್ ಒಪ್ಪಲಿಲ್ಲ.

ಅವರ ಪ್ರಕಾರ ಒಂದು ವೇಳೆ ಡಕಾಯಿತನೊಬ್ಬನ‌ ಸಹಾಯ ತೆಗೆದುಕೊಂಡು ಬಳಿಕ ಆತನಿಗೆ ಕ್ಷಮಾದಾನ ನೀಡುವುದರಿಂದ ಸರ್ಕಾರಿ ಅಧಿಕಾರಿಗಳು ಬೇಜಾರಾಗುತ್ತಾರೆ ಅಂತ ಅನಿಸಿತ್ತು. ಆದರೆ ಮಹಾರಾಜಾ ಭವಾನಿ ಸಿಂಗ್ ರವರು ಅವರ ಮನವೊಲಿಸಿದ ಬಳಿಕ ಮಹಾರಾಜರ ಪ್ರಸ್ತಾವನೆಗೆ ಅವರು ಒಪ್ಪಿಕೊಂಡು ಬಿಟ್ಟರು‌. ಆಗ ಭಾರತೀಯ ಸೇನೆಯ ಬ್ರಿಗೇಡ್ ನಲ್ಲಿ ಒಂದು ಟ್ಯಾಂಕರ್ ಕೂಡ ಇರಲಿಲ್ಲ, ಸೇನೆಯ ಬಳಿ ಕೇವಲ ಕೆಲ ಜೋಂಗಾ ಜೀಪ್ ಗಳಷ್ಟೇ ಇದ್ದವು. ಆಗ ರಾಜಾ ಭವಾನಿ ಸಿಂಗರು ಬಲವಂತ್ ಸಂಗ್ ಗೆ ಸೇನೆಯ ಒಂದು ಬಟಾಲಿಯನ್, ಮದ್ದುಗುಂಡುಗಳು ಹಾಗು 4 ಜೋಂಗೋ ಜೀಪ್ ಗಳನ್ನ ಕೊಟ್ಟು ಹೆಡ್ ಓವರ್ ಮಾಡಿಸಿಬಿಟ್ಟರು. 

ಬಲವಂತ್ ಸಿಂಗ್ ಮಹಾರಾಜಾ ಭವಾನಿ ಸಿಂಗರಿಗೆ ಸಲಹೆಯೊಂದನ್ನ ನೀಡುತ್ತ “ನೀವು ನಿಮ್ಮ ಜೀಪ್ ಗಳ ಸೈಲೆನ್ಸರ್ ತೆಗೆದು ಪಾಕಿಸ್ತಾನಿ ಚೌಕಿಗಳ ಮೇಲೆ ದೂರದಿಂದ ದಾಳಿ ನಡೆಸುತ್ತ ಮುಂದೆ ಸಾಗಿ, ಹಾಗೆ ಮಾಡುವುದರಿಂದ ಶತ್ರುಗಳಿಗೆ ಭಾರತೀಯ ಸೇನೆ ಟ್ಯಾಂಕರ್ ಗಳ ಮೂಲಕ ಯುದ್ಧ ಮಾಡುತ್ತಿದೆ ಅನ್ನೋ ಭ್ರಮೆಯಲ್ಲಿ ಅವರು ಮುಳುಗಿ ಬಿಡುತ್ತಾರೆ”, ಆತನ ಸಲಹೆಯಂತೆ ಭಾರತೀಯ ಸೇನೆ ಜೀಪ್ ಗಳ ಸೈಲೆನ್ಸರ್ ತೆಗೆದು ಪಾಕಿಸ್ತಾನಿ ಪೋಸ್ಟ್ ಗಳ ಮೇಲೆ ದಾಳಿ ಮಾಡಲು ಶುರು ಮಾಡಿದರು.

ಭಾರತೀಯ ಸೇನೆ ಒಂದು ಕಡೆಯಿಂದ ದಾಳಿ ನಡೆಸುತ್ತಿದ್ದಂತೆ ಇತ್ತ ಬಲವಂತ್ ಸಿಂಗ್ ಫೈರಿಂಗ್ ಮಾಡುತ್ತಲಿದ್ದ. ಇದರಿಂದ ಭ್ರಮಿತರಾದ ಪಾಕಿಗಳು ಒಂದು ಕಡೆಯಿಂದ ಭಾರತೀಯ ಸೇನೆ ದಾಳಿ ನಡೆಸುತ್ತಿದೆ ಮತ್ತೊಂದು ಕಡೆ ನಮ್ಮ ಸೈನಿಕರೇ ಫೈರಿಂಗ್ ಮಾಡುತ್ತಿದ್ದಾರೆ ಅಂದುಕೊಂಡಿತ್ತು ಪಾಕಿಸ್ತಾನ. ಆದರೆ ಫೈರಿಂಗ್ ಮಾಡಿ ಪಾಪಿ ಪಾಕಿಗಳ ಹೆಣವನ್ನ ಬಲವಂತ್ ಸಿಂಗ್ ಉರುಳಿಸುತ್ತಿದ್ದ ಅನ್ನೋದು ಅವುಗಖಿಗೆ ತಿಳಿಯಲೇ ಇಲ್ಲ. ಅತ್ತ ಭಾರತೀಯ ಸೇನೆ ಇತ್ತ ಬಲವಂತ್ ಸಿಂಗ್ ನ ಟೀಂ ಇಬ್ಬರೂ ಇದೇ ರಣತಂತ್ರವನ್ನ ಬಳಸಿ ಯಾವುದೇ ರಕ್ತಪಾತವಿಲ್ಲದೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಬಹುದೊಡ್ಡ ಪ್ರದೇಶವನ್ನ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. 

ಡಿಸೆಂಬರ್ 7 ರ ರಾತ್ರಿ ಬಲವಂತ್ ಸಿಂಗ್, ತನ್ನ ಬೆಟಾಲಿಯನ್ ಜೊತೆ ಸೇರಿ ಪಾಕಿಸ್ತಾನದ “ಛಾಚರೋ” ವರೆಗೂ ನುಗ್ಗಿಬಿಟ್ಟಿದ್ದ. ಮತ್ತೊಂದು ಕಡೆ ರಾಜಾ ಭವಾನಿ ಸಿಂಗರೂ ಪಾಕಿಸ್ತಾನದ ಮೇಲೆ ದಾಳಿ ಮಾಡುತಲಿದ್ದರು‌. ಈ ದಾಳಿಯಲ್ಲಿ ಹಲವಾರು ಪಾಕಿಗಳು ಸತ್ತರು‌. ಜೀಚ ಉಳಿಸಿಕೊಳ್ಳಲು ಹಲವರು ಓಡಿ ಅಲ್ಲಿಂದ ಕಾಲ್ಕಿತ್ತರು. ಬೆಳಿಗ್ಗೆ 3 ಗಂಟೆಯವರೆಗೆ ರಾಜಾ ಭವಾನಿ ಸಿಂಗ್, ಬಲವಂತ್ ಸಿಂಗ್ ಹಾಗು ಭಾರತೀಯ ಸೇನೆ ಸೇರಿ ಛಾಚರೋ ಚೌಕಿ ಸಮೇತ 100 ಹಳ್ಳಿಗಳನ್ನ ತಮ್ಮ ವಶಕ್ಕೆ ಪಡೆದುಬಿಟ್ಟಿದ್ದರು.

ಡಿಸೆಂಬರ್ 16 ರಂದು ಭಾರತ ಪಾಕಿಸ್ತಾನಕ್ಕೆ ಮಣ್ಣುಮುಕ್ಕಿಸಿ ದಿಗ್ವಿಜಯ ಸಾಧಿಸಿತ್ತು. ಯುದ್ಧ ಮುಗಿದ ಬಳಿಕ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಆ 100 ಹಳ್ಳಿಗಳ ಮೇಲೆ ಭಾರತೀಯ ಸೇನೆ ಹಾಗು ಬಲವಂತ್ ಸಿಂಗ್ ನ ಬಿಗಿ ಹಿಡಿತ ಹೊಂದಿತ್ತು. ದೇಶಕ್ಕಾಗಿ ಪರಾಕ್ರಮದಿಂದ ಹೋರಾಡಿ ಯುದ್ಧ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಬಲವಂತ್ ಸಿಂಗನ ಪರಾಕ್ರಮಕ್ಕೆ ಮೆಚ್ಚಿ ಭಾರತ ಸರ್ಕಾರ ಬಲವಂತ್ ಸಿಂಗ್ ಬಾಖಾಸರ್ ಹಾಗು ಆತನ ಸಂಗಡಿಗರ ಮೇಲಿದ್ದ ಎಲ್ಲಾ ಕೇಸುಗಳನ್ನೂ ತೆಗೆದು ಹಾಕಿತ್ತು.


ಇದಷ್ಟೇ ಅಲ್ಲದೆ ಆತನನ್ನ ರಾಷ್ಟ್ರಭಕ್ತ ನೆಂದು ಘೋಷಿಸಿ ಆತನಿಗೆ ಎರಡು ಶಸ್ತ್ರಗಳನ್ನ ಇಟ್ಟುಕೊಳ್ಳುವ ಆಲ್ ಇಂಡಿಯಾ ಲೈಸೆನ್ಸ್ ಕೂಡ ನೀಡಲಾಯಿತು‌‌. ಬಲವಂತ್ ಸಿಂಗನ ಜೊತೆ ಕೆಲಸ ಮಾಡಿದ್ದ ಭಾರತೀಯ ಸೇನೆಯ ಸೈನಿಕರು ಹೇಳುವ ಪ್ರಕಾರ “ಬಲವಂತ್ ಸಿಂಗ್ ಯುದ್ಧಭೂಮಿಯಲ್ಲಿ ತತ್ ಕ್ಷಣದ ನಿರ್ಣಯ ಕೈಗೊಳ್ಳುತ್ತಿದ್ದರು ಹಾಗು ತಾವೇ ಮುನ್ನುಗ್ಗಿ ತಮ್ಮ ಸೇನೆಯ ನೇತೃತ್ವ ವಹಿಸುತ್ತಿದ್ದರು, ಈ ರೀತಿಯ ನಡೆಯನ್ನು ಸಂಪೂರ್ಣ ಟ್ರೇನಿಙಗ್ ಪಡೆದಿರುವ ಆಫೀಸರ್ ಗಳಿಗೂ ಸಾಧ್ಯವಾಗಲ್ಲ” ಅನ್ನೋದಾಗಿತ್ತು. ಹಾಗಿತ್ತು ಬಲವಂತ್ ಸಿಂಗನ ಖಡಕ್ ನಿರ್ಣಯ ಹಾಗು ಛಾತಿ.

ಲೆಫ್ಟಿನೆಂಟ್ ಕರ್ನಲ್ ಮಹಾರಾಜಾ ಸವಾಯಿ ಭವಾನಿ ಸಿಂಗ್ ರಿಗೆ ಯುದ್ಧದಲ್ಲಿ ಅಸಾಧಾರಣ ಶೌರ್ಯ ಪ್ರದರ್ಶಿಸಿದ್ದಕ್ಕಾಗಿ ಭಾರತ ಸರ್ಕಾರದ ವತಿಯಿಂದ ಅವರಿಗೆ ಮಹಾವೀರ ಚಕ್ರ ಪ್ರಶಸ್ತಿಯಿಂದ ಸನ್ಮಾನಿಸಲಾಯಿತು. ಈ ಮಧ್ಯೆ ಭಾರತ ಹಾಗು ಪಾಕಿಸ್ತಾನದ ಮಧ್ಯೆ ಶಿಮ್ಲಾ ಒಪ್ಪಂದವಾಯಿತು ಹಾಗು ಈ ಒಪ್ಪಂದದ ಪ್ರಕಾರ ಭಾರತ ತಾನು ಗೆದ್ದು ವಶಪಡಿಸಿಕೊಂಡಿದ್ದ ಪಾಕಿಸ್ತಾನದ ಭೂಭಾಗವನ್ನ ಮತ್ತೆ ಪಾಕಿಸ್ತಾನಕ್ಕೇ ಬಿಟ್ಟುಕೊಟ್ಟಿತ್ತು‌. ಭಾರತದ ಈ ನಡೆಯಿಂದ ಬಲವಂತ್ ಸಿಂಗ್ ಭಾಕಾಸರ್ ಅಸಮಾಧಾನಗೊಂಡಿದ್ದ.

ಆತ ಮಹಾರಾಜಾ ಭವಾನಿ ಸಿಂಗರ ಜೊತೆ ಈ‌ ಕುರಿತು ತನ್ನ ಅಸಮಾಧಾನ ವ್ಯಕ್ತಪಡಿಸುತ್ತ “ಪಾಕಿಸ್ತಾನದ ಭೂಮಿಯನ್ನ ಪಾಕಿಸ್ತಾನಕ್ಕೇ ವಾಪಸ್ ಕೊಡೋದಾಗಿದ್ದರೆ ನಾವೆಲ್ಲಾ ನಮ್ಮ ಜೀವದ ಹಂಗು ತೊರೆದು ಯುದ್ಧ ಮಾಡಿದ್ದಾದರೂ ಯಾಕೆ?” ಅಂತ ಕೇಳಿದಾಗ ಮಹಾರಾಜರು ಉತ್ತರಿಸುತ್ತ ಹೇಳ್ತಾರೆ “ನಾವು ಸೈನಿಕರಷ್ಟೇ, ನಮ್ಮ ಕೆಲಸ ಶತ್ರುಗಳ ವಿರುದ್ಧ ಹೋರಾಡೋದಷ್ಟೇ, ಇಂತಹ ಕುಟಿಲ ನೀತಿಗಳ ಬಗ್ಗೆ ನಮಗೆ ಅರ್ಥವಾಗಲ್ಲ ಹಾಗು ಇದರಲ್ಲಿ ನಮ್ಮ ಪಾತ್ರವೂ ಇಲ್ಲ”

ಆದರೆ ಇಂದಿರಾ ಗಾಂಧಿಯ ಈ ನಿರ್ಧಾರ ಕೊನೆವರೆಗೂ ಬಲವಂತ್ ಸಿಂಗ್ ಭಾಖಾಸರ್ ಗೆ ಅರ್ಥವೇ ಆಗಲಿಲ್ಲ. ಆತ ಇಂದಿರಾ ಗಾಂಧಿಯನ್ನ ತನ್ನ ಕೊನೆ ಉಸಿರಿರುವವರೆಗೂ ದ್ವೇಷಿಸುತ್ತಲೇ ಬಂದ‌. ಎಮರ್ಜೆನ್ಸಿಯ ಬಳಿಕ(1977 ರಲ್ಲಿ) ನಡರದ ಚುನಾವಣೆಯಲ್ಲಿ ಬಲವಂತ್ ಸಿಂಗ್ ಜನತಾ ಪಕ್ಷಕ್ಕೆ ಬೆಂಬಲ ಸೂಚಿಸಿ ಹೇಳ್ತಾನೆ “ನನಗಂತೂ ರಾಜಕೀಯದ ಗಂಧ ಗಾಳಿ ಗೊತ್ತಿಲ್ಲ ಆದರೆ ಶತ್ರುಗಳನ್ನ ಸೋಲಿಸಿ ವಶಪಡಿಸಿಕೊಂಡಿದ್ದ ಭೂಮಿಯನ್ನ ವಾಪಸ್ ಶತ್ರುಗಳ ಕೈಗೆ ಕೊಟ್ಟಿದ್ಯಾಕೆ?”

ಬಲವಂತ್ ಸಿಂಗರ ಶೌರ್ಯಗಾಥೆ ಇಂದಿಗೂ ರಾಜಸ್ಥಾನದ ಬಾಡಮೇರ್-ಜೈಸಲ್ಮೇರ್ ಅಷ್ಟೇ ಅಲ್ಲದೆ ಗುಜರಾತಿನ ಕಚ್-ಭುಜ್ ಪ್ರದೇಶದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈಗಲೂ ಅಲ್ಲಿನ ಜನ ಹೇಳುತ್ತಾರೆ. ಅಷ್ಟಕ್ಕೂ ಬಲವಂತ್ ಸಿಂಗ್ ಬಾಖಾಸರ್ ಜನರನ್ನ ಪೀಡಿಸುವ ಡಾಕೂ ಏನೂ ಆಗಿರಲಿಲ್ಲ, ಆತ ಸುತ್ತಮುತ್ತಲಿನ ಪ್ರದೇಶಗಳ ಜಹಾಗಿರದಾರ್ ನಾಗಿದ್ದ. ಭಾರತ ಸ್ವಾತಂತ್ರ್ಯವಾದ ಬಳಿಕ ನೆಹರುವಿನ ನೀತಿಗಳ ಕಾರಣ ಆತನ ಭೂಮಿಯನ್ನ ನೆಹರು ಸರ್ಕಾರ ಕಸಿದುಕೊಂಡಿತ್ತು, ಇದೇ ಕಾರಣದಿಂದ ಆತ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದ.

ಈತನ ಇಮೇಜ್ ಈಗಲೂ ಹೇಗಿದೆಯೆಂದರೆ ಈತನನ್ನ ಅಲ್ಲಿನ ಜನ ಈಗಲೂ ರಾಬಿನ್ ಹುಡ್ ರಂತೆ ಕಾಣುತ್ತಾರೆ. ಬಡವರನ್ನ ಹಿಂಸಿಸುವ ಸರ್ಕಾರಿ ಅಧಿಕಾರಿಗಳ ವಿರುದ್ಧ ಬಲವಂತ್ ಸಿಂಗ್ ಬಹಳ ಕಠೋರವಾಗಿ ನಡೆದುಕೊಳ್ಳುತ್ತಿದ್ದ‌. ಆಗಿನ‌ ಕಾಲದಲ್ಲೂ ಗೋ ಕಳ್ಳರು ಭಾರತೀಯ ಗಡಿಯಿಂದ ಗೋವುಗಳನ್ನ ಅಕ್ರಮವಾಗಿ ಕಳ್ಳತನದ ಮೂಲಕ ಪಾಕಿಸ್ತಾನಕ್ಕೆ ಕೊಂಡೊಯ್ಯುತ್ತಿದ್ದರು. ಅಂತಹ ಸಮಯದಲ್ಲಿ ಬಲವಂತ್ ಸಿಂಗರಯಮು ಅನೇಕ ಬಾರಿ ಗೋಕಳ್ಳರನ್ನ ಕೊಂದು ಗೋಮಾತೆಯ ರಕ್ಷಣೆ ಕೂಡ ಮಾಡಿದ್ದರು. ಇದೇ ಕಾರಣಕ್ಕಾಗಿ ಅವರ ಮೇಲೆ ಹತ್ಯೆ, ಕೊಲೆ, ಸುಲಿಗೆಯ ಕೇಸ್ ಗಳು ದಾಖಲಾಗಿದ್ದವು‌.

“ಸಾಂಚೋರ್” ಎಂಬಲ್ಲಿ ನಡೆಯುವ ಜಾತ್ರೆಯ ಮುಂದಾಳತ್ವವನ್ನ ಖುದ್ದು ಬಲವಂತ್ ಸಿಂಗರೇ ನೇತೃತ್ವ ವಹಿಸಿಕೊಳ್ಳುತ್ತಿದ್ದರು. ಅವರ ಪ್ರಖರ ಹಿಂದುತ್ವದ ವಿಚಾರಧಾರೆಯಿಂದಲೇ ಅವರನ್ನ ಸೆಕ್ಯೂಲರ್ ರಾಜಕಾರಣಿಗಳು ಇಷ್ಟ ಪಡುತ್ತಿರಲಿಲ್ಲ‌. ಕಾಂಗ್ರೆಸ್ ಅಲ್ಲದೆ ಭಾರತೀಯ ಜನಸಂಘ ಕ್ಕೆ ಅವರು ಬೆಂಬಕ ನೀಡಿದ್ದರೂ ಅವರಿಗೆ ಯಾವ ಮಹತ್ವವೂ ಪಕ್ಷದಲ್ಲಿ ನೀಡಲಿಲ್ಲ. ಅವರ ವಂಶದ ಕುಡಿ “ರತನ್ ಸಿಂಗ್ ಬಾಖಾಸರ್” ಈಗಲೂ ಗುಜರಾತಿನ ಅಹಮದಾಬಾದ್ ನಲ್ಲಿ ವಾಸಿಸುತ್ತಿದ್ದು ಅವರು ಈಗ ಭಾರತೀಯ ಜನತಾ ಪಕ್ಷದ ಪ್ರಭಾವಿ ನಾಯಕರಾಗಿದ್ದಾರೆ.

– Vinod Hindu Nationalist

Leave a Reply

Your e-mail address will not be published. Required fields are marked *

error: Content is protected !!