ಅಮೇಥಿಯಲ್ಲಿ ಚುನಾವಣೆ ಮುಗಿಯುತ್ತಲೇ ಸ್ಮೃತಿ ಇರಾನಿ ಆಪ್ತನನ್ನ ಗುಂಡಿಟ್ಟು ಹತ್ಯೆ ಮಾಡಿದ ದುಷ್ಕರ್ಮಿಗಳು

ಮೇ 25 ರಂದು ಸುರೇಂದ್ರ ಸಿಂಗ್ ಎಂಬ ವ್ಯಕ್ತಿಯನ್ನ ಗುಂಡಿಟ್ಟು ಕೊಲ್ಲಲಾಗಿದೆ, ಅಮೇಥಿಯಲ್ಲಿ ಸ್ಮೃತಿ ಇರಾನಿಯವರನ್ನ ಗೆಲ್ಲಿಸಲು ಸುರೇಂದ್ರ ಸಿಂಗ್ ರವರ ಪಾತ್ರ ಬಹುಮುಖ್ಯವಾಗಿತ್ತು. ಚುನಾವಣೆ ಮುಗಿದ ಎರಡು ದಿನಗಳಲ್ಲೇ ಸುರೇಂದ್ರ ಸಿಂಗ್ ರವರ ವಿರುದ್ಧ ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ರಾಹುಲ್ ಗಾಂಧಿಯ ಹೀನಾಯ ಸೋಲು ಹಾಗು ಸ್ಮೃತಿ ಇರಾನಿಯವರ ಭರ್ಜರಿ ಗೆಲುವಿನಲ್ಲಿ ಅಮೇಥಿಯ ಜಿಲ್ಲಾ ಮಟ್ಟದ ಮುಖಂಡ ಸುರೇಂದ್ರ ಸಿಂಗ್ ರವರ ಪಾತ್ರ ಬಹುಮುಖ್ಯವಾಗಿತ್ತು. ಸುರೇಂದ್ರ ಸಿಂಗ್ ರವರು ಸ್ಮೃತಿ ಇರಾನಿಯವರಿಗಾಗಿ ಚುನಾವಣೆಯಲ್ಲಿ ಭರ್ಜರಿ ಕಾರ್ಯ ನಿರ್ವಹಿಸಿದ್ದರು.

ಸುರೇಂದ್ರ ಸಿಂಗ್ ರವರು ಸ್ಮೃತಿ ಇರಾನಿ ಟೀಮಿನ ಸಕ್ರಿಯ ಕಾರ್ಯಕರ್ತ ಹಾಗು ರಣನೀತಿಕಾರರಾಗಿದ್ದರು, ಅಮೇಥಿಯಲ್ಲಿ ರಾಹುಲ್ ಗಾಂಧಿಯ ಹೀನಾಯ ಸೋಲು ಕಂಡಿದ್ದು ನಿಮಗೆಲ್ಲಾ ಗೊತ್ತಿರುವ ವಿಷಯವೇ. ಇದೀಗ ಸುರೇಂದ್ರ ಸಿಂಗ್ ರನ್ನ ಚುನಾವಣಾ ಫಲಿತಾಂಶ ಬಂದ ಎರಡನೆಯ ದಿನಕ್ಕೆ ಅಂದರೆ ನೆನ್ನೆ ಗುಂಡಿಕ್ಕಿ ಅಮಾನುಷವಾಗಿ ಹತ್ಯೆ ಮಾಡಲಾಗಿದೆ.

ಸುರೇಂದ್ರ ಸಿಂಗ್ ಅಮೇಥಿಯ ಬರೈಲಿಯಾ ಗ್ರಾಮದ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದರು, ಅವರು ಅಮೇಥಿಯಲ್ಲಿ ಸ್ಮೃತಿ ಇರಾನಿ ರವರ ಸಂಪೂರ್ಣ ಚುನಾವಣಾ ಅಭಿಯಾನವನ್ನ ತಾವೇ ಮುಂದೆ ನಿಂತು ನಡೆಸಿ ಸ್ಮೃತಿ ಇರಾನಿ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಈ ಮನುಷ್ಯ ಸ್ಮೃತಿ ಇರಾನಿಯನ್ನ ಗೆಲ್ಲಿಸಿ ರಾಹುಲ್ ಗಾಂಧಿಯನ್ನ ಸೋಲಿಸಿದ್ದಾನೆ ಎಂದು ದುಷ್ಕರ್ಮಿಗಳು ಅವರನ್ನ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಸುರೇಂದ್ರ ಸಿಂಗ್ ರವರ ಕುಟುಂಬಸ್ಥರು ಈ ಹತ್ಯೆಯ ಹಿಙದೆ ರಾಜಕೀಯ ಕೈವಾಡವಿದೆ ಎಂದು ಹೇಳಿದ್ದಾರೆ. ಸುರೇಂದ್ರ ಸಿಂಗ್ ರನ್ನ ಮಧ್ಯ ರಾತ್ರಿ 3 ಗಂಟೆಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ, ಶವವನ್ನ ಇದೀಗ ಪೋಸ್ಟ್‌ಮಾರ್ಟಂ ಗಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಪೋಲಿಸರು ದುಷ್ಕರ್ಮಿಗಳ ಪತ್ತೆಗಾಗಿ ತೀವ್ರ ಶೋಧ ನಡೆಸಿದ್ದು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ರಾಹುಲ್ ಗಾಂಧಿ ಅಮೇಥಿಯಲ್ಲಿ ಹೀನಾಯವಾಗಿ ಸೋತ ಬಳಿಕ ಸ್ಥಳೀಯ ಕಾಂಗ್ರೆಸ್ಸಿಗರಲ್ಲಿ ಭಾರೀ ಆಕ್ರೋಶವಿತ್ತು ಹಾಗು ಇದೀಗ ಅದರ ಪರಿಣಾಮವೆಂಬಂತೆ ಬಿಜೆಪಿ ನಾಯಕ ಸುರೇಂದ್ರ ಕುಮಾರಚ ಹತ್ಯೆ ಮಾಡಲಾಗಿದೆ. ಸ್ಮೃತಿ ಇರಾನಿಗಾಗಿ ಹಗಲಿರುಳು ಶ್ರಮಿಸಿದ್ದ ಸುರೇಂದ್ರ ಸಿಂಗ್ ರವರ ಹತ್ಯೆ ಸುದ್ದಿ ತಿಳಿಯುತ್ತಲೇ ಸ್ಮೃತಿ ಇರಾನಿ ಶೋಕ ವ್ಯಕ್ತಪಡಿಸಿದ್ದು ಇಂದು ಸುರೇಂದ್ರ ಸಿಂಗ್ ಕುಟುಂಬಸ್ಥರನ್ನ ಭೇಟಿಯಾಗಲಿದ್ದಾರೆ.

– Team Google Guruu

Leave a Reply

Your e-mail address will not be published. Required fields are marked *

error: Content is protected !!