ಅಮೇಥಿಯಲ್ಲಿ ರಾಹುಲ್ ಗಾಂಧಿಯನ್ನ ಹೀನಾಯವಾಗಿ ಸೋಲಿಸಿ ಖೆಡ್ಡಾಗೆ ಬೀಳಿಸಿದ ಫೈರ್‌ಬ್ರ್ಯಾಂಡ್ ಸ್ಮೃತಿ ಇರಾನಿ

ಲೋಕಸವಬಾ ಚುನಾವಣೆ 2019 ರ ಫಲಿತಾಂಶ ಬಂದಿದೆ, ಇಂದು ರಾಷ್ಟ್ರವಾದದ ಜಯವಾಗಿದೆ, ಇಂದು ಭಾರತದ ಜಯವಾಗಿದೆ, ಇಂದು ದೇಶದಲ್ಲಿ ಸೆಕ್ಯೂಲರ್‌ಗಳು, ವಾಮಪಂಥೀಯರು, ನಕ್ಸಲೀಯರು, ಮಿಷನರಿಗಖು, ಭಯೋತ್ಪಾದಕರು ಹಾಗು ಅವರ ಸಿಂಪತೈಸರ್‌ಗಳು ಇಂದು ಸೋತು ಸುಣ್ಣವಾಗಿದ್ದಾರೆ.

ಇಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೀನಾಯವಾಗಿ ಸೋತಿದ್ದಾರೆ, ರಾಹುಲ್ ಗಾಂಧಿ ತನ್ನ ಸ್ವ ಕ್ಷೇತ್ರವಾದ ಅಮೇಥಿ ಸೀಟ್ ನಲ್ಲೂ ಗೆಲ್ಲಲು ಸಾಧ್ಯವಾಗದೆ ಹೀನಾಯವಾಗಿ ಸೋತಿದ್ದಾರೆ ಹಾಗು ಅಲ್ಲಿ ಸೋಲುತ್ತೇನೆ ಎಂಬ ದೃಢ ಆತ್ಮವಿಶ್ವಾಸದಿಂದಲೇ ಕೇರಳದ ಮುಸ್ಲಿಂ ಬಾಹುಳ್ಯವಿರುವ ವಯನಾಡ್ ಕ್ಷೇತ್ರಕ್ಕೆ ಪಲಾಯನ ಮಾಡಿದ್ದರು.

ಅಮೇಥಿ ಕ್ಷೇತ್ರವನ್ನ ಸ್ಮೃತಿ ಇರಾನಿ ಪ್ರಚಂಡ ಬಹುಮತದಿಂದ ಗೆದ್ದಿದ್ದಾರೆ ಎಂಬ ಸುದ್ದಿ ಇದೀಗ ಅಮೇಥಿಯಿಂದ ಬರುತ್ತಿದೆ. ಅಮೇಥಿ ಸೀಟ್‌ನಲ್ಲಿ ಸ್ಮೃತಿ ಇರಾನಿ ರಾಹುಲ್ ಗಾಂಧಿಯನ್ನ ಹೀನಾಯವಾಗಿ ಸೋಲಿಸಿ ಖೆಡ್ಡಾಗೆ ಕೆಡವಿದ್ದಾರೆ. ಪ್ರತಿ ರೌಂಡ್ ‌ನ ವೋಟಿಂಗ್‌ನಲ್ಲೂ ಸ್ಮೃತಿ ಇರಾನಿಯ ಗೆಲುವಿನ ಅಂಕಿಅಂಶಗಳು ಏರುತ್ತಲೇ ಹೋಗಿತ್ತು. ಅಮೇಥಿಯ ಪ್ರತಿ ಬೂತ್ ಹಾಗು ಕ್ಷೇತ್ರದಲ್ಲೂ ಸ್ಮೃತಿ ಇರಾನಿ ರಾಹುಲ್ ಗಾಂಧಿಗಿಂತ ಅಧಿಕ ವೋಟ್ ಪಡೆದಿದ್ದಾರೆ.

ಕಳೆದ 2014 ರ ಲೋಕಸಭಾ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರದಿಂದ ಸ್ಮೃತಿ ಇರಾನಿ ಕೇವಲ ಒಂದು ಲಕ್ಷ ಮತದ ಅಂತರದಿಂದ ರಾಹುಲ್ ಗಾಂಧಿಯೆದುರು ಸೋಲನುಭವಿಸಿದ್ದರು. ಆದರೂ ಸ್ಮೃತಿ ಇರಾನಿ ಛಲ ಬಿಡದೆ ಸೋಲತರೂ ಅಮೇಥಿ ಕ್ಷೇತ್ರದ ಅಭಿವೃದ್ಧಿ ಹಾಗು ಅಲ್ಲಿನ ಜನರ ಜೊತೆ ಬೆರೆತು ಅವರ ಮನಸ್ಸಿಗೆ ಹತ್ತಿರವಾದರು. ಅವರು ಅಮೇಥಿಗಾಗಿ ಸತತವಾಗಿ ಕೆಲಸ ಮಾಡಿದರು, ನಾನು ಗೆದ್ದೇ ಗೆಲ್ಲುತ್ತೇನೆ ಎಂಬ ಅಹಂಕಾರದಿಂದ ಮೆರೆಯುತ್ತಿದ್ದ ರಾಹುಲ್ ಗಾಂಧಿ ಎಂದಿನಂತೆ ಅಮೇಥಿಗೆ ಕೇವಲ ಚುನಾವಣಾ ಪ್ರಚಾರಕ್ಕಾಗಿ ಮಾತ್ರ ಆಗಮಿಸಿ ಭಾಷಣ ಬಿಗಿದು ಹೋಗುವುದಷ್ಟೇ ಮಾಡಿದ್ದರು.

ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ಸಿಗರು ಗ್ರೌಂಡ್ ರಿಪೋರ್ಟ್ ನೀಡಿ ಅಮೇಥಿಯಲ್ಲಿ ರಾಹುಕ್ ಗಾಂಧಿ ಈ ಬಾರಿ ಸೋಲಲಿದ್ದಾರೆ ಹಾಗಾಗಿ ಬೇರೆ ಕ್ಷೇತ್ರದಿಂದಲೂ ಸ್ಪರ್ಧಿಸಿ ಎಂಬ ಸಲಹೆ ನೀಡಿದ್ದರು. ಇದೇ ಕಾರಣದಿಂದ ಸ್ಮೃತಿ ಇರಾನಿಗೆ ಹೆದರಿದ ರಾಹುಲ್ ಗಾಂಧಿ ದೂರದ ಕೇರಳದ ವಯನಾಡ್ ಮುಸ್ಲಿಂ ಬಾಹುಳ್ಯ ಕ್ಷೇತ್ರದಿಂದ ಕೂಡ ಸ್ಪರ್ಧಿಸಿದರು.

ಅಮೇಥಿ ಸೀಟ್ ನಲ್ಲೂ ಸ್ಪರ್ಧಿಸಿ ಅಲ್ಪಸ್ವಲ್ಪ ಮಾನವಾದರೂ ಉಳಿಸಿಕೊಳ್ಳೋಣವೆಂದರೂ ಕೂಡ ಸ್ಮೃತಿ ಇರಾನಿ ರಾಹುಲ್ ಗಾಂಧಿ ಬೆನ್ನುಬಿಡದೆ ಹೀನಾಯವಾಗಿ ಸೋಲಿಸಿ ರಾಹುಲ್ ಗಾಂಧಿಗೆ ತಕ್ಕ ಪಾಠ ಕಲಿಸಿದ್ದಾರೆ‌. ಈಗ ಕಾಂಗ್ರೆಸ್ ಪಕ್ಷದ ಅಧ್ಯಕ್ಷನೇ ಸೋತಿದ್ದಾನೆ ಹಾಗು ಪಲಾಯನವಾದಿ ನಾಯಕನಾಗಿಬಿಟ್ಟಿದ್ದಾನೆ. ತನ್ನ ಸ್ವಂತ ಕ್ಷೇತ್ರದ ಒಂದು ಸೀಟ್ ಗೆಲ್ಲಲಾಗದ ಈತ ತಾನು ಸೋಲುತ್ತೇನೆಂದು ಮುಸ್ಲಿಂ ಬಾಹುಳ್ಯ ಕ್ಷೇತ್ರವಾದ ವಯನಾಡ್ ಗೆ ಓಡಿ ಹೋಗುವ ಸ್ಥಿತಿ ಬಂದಿದ್ದು ನಿಜಕ್ಕೂ ಕಾಂಗ್ರೆಸ್ ಮುಕ್ತ ಭಾರತಕ್ಕೆ ಹಿಡಿದ ಕೈಗನ್ನಡಿಯಾಗಿದೆ

– Team Google Guruu

Leave a Reply

Your e-mail address will not be published. Required fields are marked *

error: Content is protected !!