ಅತ್ತೆ ಮಾವನ ನೋಡಿಕೊಳ್ಳದ ಮಗ ಸೊಸೆಗೆ ಸುಪ್ರೀಂ ಕೋರ್ಟ್‌ನಿಂದ ಘೋರ ಶಿಕ್ಷೆ

ದೇಶದಾದ್ಯಂತ ಇಂದು ಅತೀ ದೊಡ್ಡ ಸಮಸ್ಯೆ ಎಂದರೆ ವಯಸ್ಸಾದ ತಂದೆ ತಾಯಿಯನ್ನು ತಮ್ಮ ಮಕ್ಕಳು ನೋಡಿಕೊಳ್ಳದೆ ಇರುವುದು. ಹೌದು ಮಕ್ಕಳು ವಯಸ್ಸಿಗೆ ಬಂದಿದ್ದಾರೆ ಅವರನ್ನು ಮದುವೆ ಮಾಡಿ ತಮ್ಮ ಜವಾಬ್ದಾರಿ ಮುಗಿಸಿ ಆರಾಮದಾಯಕ ಜೀವನ ನಡೆಸಬೇಕೆಂಬ ಪಾಲಕರಿಗೆ ಆರಾಮವಾಗಿರುವುದು ಕಷ್ಟ ಸಾಧ್ಯ.

ಹೌದು ಇಂದಿನ ಆಧುನಿಕ ಜೀವನದಲ್ಲಿ ಹಾಸ್ಟೆಲ್‌ನಲ್ಲಿ ಬೆಳೆದ ಮಕ್ಕಳಿಗೆ ತಂದೆಯ ಪ್ರೀತಿ ತಾಯಿಯ ವಾತ್ಸಲ್ಯದ ಬಗ್ಗೆ ಅರಿವೆ ಇರುವುದಿಲ್ಲ, ತಂದೆ ತಾಯಿ ಎಂದರೆ ದೇವರಂತೆ ಕಾಣುವ ಜನಗಳಲ್ಲಿ ಆ ದೇವರನ್ನು ಕೇವಲವಾಗಿ ಕಾಣುವ ಜನರೇ ಇಂದಿನ ಯುಗದಲ್ಲಿ ಜಾಸ್ತಿ ಎಂದರೆ ತಪ್ಪಾಗಲಾರದು.

ವಯಸ್ಸಾದ ತಂದೆ ತಾಯಿಯನ್ನು ನೋಡಿಕೊಳ್ಳದ ಮಗ ಸೊಸೆಗೆ ಈ ಸಮಾಜ ಹೇಗೆ ಒಪ್ಪಿಕೊಳ್ಳುವುದಿಲ್ಲವೋ ಅದೇ ರೀತಿ ಕಾನೂನು ಸಹ ಅಂತವರಿಗೆ ಶಿಕ್ಷೆ ವಿಧಿಸಲು ಮುಂದಾಗಿದೆ. ಮನೆಗೆ ಬಂದ ಸೊಸೆ ಗಂಡನ ವೃದ್ಧ ತಂದೆ ತಾಯಿಯನ್ನು ನೋಡಿಕೊಳ್ಳದಿದ್ದರೆ ಅಂತವರಿಗೆ ಸುಪ್ರೀಂ ಕೋರ್ಟ್ ಕಠಿಣ ಶಿಕ್ಷೆ ನೀಡವುದು ಎನ್ನಲಾಗ್ತಿದೆ.

ಹೊಸದಾಗಿ ಮದುವೆಯಾಗಿ ಮನೆಗೆ ಬಂದ ಸೊಸೆ ತನ್ನ ಅತ್ತೆ ಮಾವನನ್ನು ಗಂಡನಿಂದ ದೂರ ಮಾಡಲು ಒತ್ತಾಯಿಸಿದರೆ ಅಥವಾ ಅವರನ್ನು ನೋಡಿಕೊಳ್ಳದೆ ಬೇರೆ ಮನೆ ಮಾಡಲು ನಿರ್ಧರಿಸಿದರೆ ಅಂತಹ ಹೆಂಡತಿಯರಿಗೆ ಗಂಡನಾದವನು ಕಾನೂನಾತ್ಮಕವಾಗಿ ವಿವಾಹ ವಿಚ್ಛೇದನ ನೀಡಬಹುದು ಎಂದು ಹೈಕೋರ್ಟ್ ತೀರ್ಮಾನಿಸಿದೆ.

ಸಾಧಾರಣವಾಗಿ ಮದುವೆಯಾದ ಮಹಿಳೆ ತನ್ನ ಗಂಡನ ಮನೆಯಲ್ಲಿ ವಾಸ ಮಾಡಬೇಕು ಅದನ್ನು ಹೊರತು ಪಡಿಸಿ ಮದುವೆಯ ನಂತರ ಬೇರೆ ಸಂಸಾರ ಮಾಡುವಂತೆ ಹೆದರಿಸುವುದಾಗಲಿ ಮಾಡಿದರೆ ಕಾನೂನಿನ ಪ್ರಕಾರ ಗಂಡನಾದವನು ವಿಚ್ಚೇದನ ನೀಡಬಹುದು, ಹೆಂಡತಿಯಾದವಳು ಬೇರೆಯಾಗಲು ನಿರ್ಧರಿಸಿದರೆ ಒಂದು ನಿಖರ ಕಾರಣ ನೀಡಬೇಕು ಎಂದು ಕೋರ್ಟ್ ತಿಳಿಸಿದೆ.

ಬಿಹಾರದ ಸರಕಾರವು ಕೂಡ ಈ ಪ್ರಕರಣಕ್ಕೆ ಅತೀ ದೊಡ್ಡ ನಿರ್ಣಯ ಕೈಗೊಂಡಿದ್ದು, ಬಿಹಾರ ರಾಜ್ಯದಲ್ಲಿ ತಂದೆ ತಾಯಿಯನ್ನು ನೋಡಿಕೊಳ್ಳದ ಮಕ್ಕಳನ್ನು ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಹೀಗಾಗಿ ಬಿಹಾರದಲ್ಲಿನ ಜನರು ತಮ್ಮ ಪಾಲಕರನ್ನು ಸರಿಯಾಗಿ ನೋಡಿಕೊಳ್ಳುತ್ತಾರೆ ಎಂದು ವರದಿಯಾಗಿದೆ.

ಇದೀಗ ತಂದೆ ತಾಯಿಯರನ್ನು ಮಕ್ಕಳು ಚೆನ್ನಾಗಿ ನೋಡಿಕೊಳ್ಳದಿದ್ದರೆ ಅಂತಹ ಮಕ್ಕಳ ಬಗ್ಗೆ ತನಿಖೆ ನಡೆಸಿ ಶಿಕ್ಷೆಗೆ ಗುರಿ ಪಡಿಸಲಾಗುತ್ತೆ. ಮಕ್ಕಳಿಂದ ವಂಚಿತರಾದ ತಂದೆ ತಾಯಿಯರಿಗೆ ಕಾನೂನಾತ್ಮಕ ಸುರಕ್ಷೆ ನೀಡುವುದು ಪ್ರತಿಯೊಂದು ರಾಜ್ಯ ಸರಕಾರದ ಜವಾಬ್ದಾರಿಯಾಗಿದೆ ಎಂದು ಹೈಕೋರ್ಟ್ ಆದೇಶ ನೀಡಿದೆ. ವೃದ್ಧ ತಂದೆ ತಾಯಿ ಮೇಲೆ ದೌರ್ಜನ್ಯ ನಡೆಸಿದರೆ ಅಥವಾ ಅವರನ್ನು ದೂರು ಮಾಡಿದರೆ ಅಂಥ ಮಕ್ಕಳು ಇನ್ನು ಮುಂದೆ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ

-Team Google Guru

Leave a Reply

Your e-mail address will not be published. Required fields are marked *

error: Content is protected !!