ಎಷ್ಟೇ ದೇವಾಲಯ ಸುತ್ತಿದರೂ ನಿಖಿಲ್ ಸೋಲು ಖಂಡಿತ; ಭವಿಷ್ಯ ನುಡಿದಿದ್ದು ಯಾರು ಗೊತ್ತಾ..?

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಭಾರಿ ಸದ್ದು ಮಾಡಿದ ಕ್ಷೇತ್ರ ಅದು ಮಂಡ್ಯ ರೆಬಲ್ ಸ್ಟಾರ್ ಅಂಬರೀಶ್ ಅವ್ರ ಅಭಿಮಾನಿ ಮನೆಗೆ ಅಭಿಷೇಕ್ ಅಂಬರೀಶ್ ಭೇಟಿ ನೀಡಿದರು. ಮಂಡ್ಯ ತಾಲೂಕಿನ ಹನಿಯಂಬಾಡಿಯಲ್ಲಿರುವ ಅಂಬಿ ಅಭಿಮಾನಿ ಯೋಗಾನಂದ ಅವ್ರ ಗೃಹಪ್ರವೇಶಕ್ಕೆ ಆಗಮಿಸಿದ್ರು.

ಈ ವೇಳೆ ಅಭಿಷೇಕ್ ಅಂಬರೀಶ್​ ಅವ್ರನ್ನ ನೋಡಿದ ಅಭಿಮಾನಿಗಳು, ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ. ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಂಡ ನಂತರ ಮಾತನಾಡಿದ ಅವರು, ಪ್ರೀತಿಯಿಂದ ಅಭಿಮಾನಿಗಳು ಕರೀತಾರೆ. ಹಾಗಾಗಿ ಅವರ ಮನೆಯ ಕಾರ್ಯಕ್ರಮಗಳಿಗೆ ಬರುತ್ತೇನೆ. ಈ ತಿಂಗಳು ನಮ್ಮ ಕುಟುಂಬಕ್ಕೆ ವಿಶೇಷವಾದ ತಿಂಗಳು.

ಮೇ.23 ಅಮ್ಮನ ಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಮೇ.29ಕ್ಕೆ ಅಪ್ಪನ ಹುಟ್ಟು ಹಬ್ಬ ಇದೆ. ಜೊತೆಗೆ ನನ್ನ ಸಿನಿಮಾ ಅಮರ್ 29ಕ್ಕೆ ರಿಲೀಸ್ ಆಗಲಿದೆ ಎಂದರು. ಅಭಿಮಾನಿಗಳು ಪ್ರೀತಿಯಿಂದ ಟೀ, ಕಾಫಿಗೆ ಕರೀತಾರೆ. ಪ್ರೀತಿಯಿಂದ ಕರೆದಾಗ ಬರುತ್ತೇವೆ ಎಂದರು.

ಇದೇ ವೇಳೆ ನಿಖಿಲ್ ಮತ್ತು ಅಭಿಷೇಕ್ ಸ್ನೇಹ ಹಳಸಿದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅದೇನೋ ಹೊಸ ಸಿನೆಮಾ ಮಾಡ್ತಾರೆ ಅಂತಾ ಕೇಳ್ಪಟ್ಟೆ, ಗುಡ್ ಲಕ್ ಅಂದ್ರು. ಅಲ್ಲದೇ ಚುನಾವಣೆ ಗೆಲುವಿಗಾಗಿ ಯಾವ ಸರ್ವೇ ಮಾಡಿಸಿದ್ರೂ, ಎಷ್ಟೇ ದೇವಾಲಯಗಳನ್ನ ಸುತ್ತಿದ್ರೂ ಫಲಿತಾಂಶದಲ್ಲಿ ಬದಲಾವಣೆ ಆಗಲ್ಲ.

ಫಲಿತಾಂಶ ಏನಿದ್ರು ಮತಯಂತ್ರದಲ್ಲಿ ಅಡಗಿದೆ, ಅದು ಮೇ.23ಕ್ಕೆ ಹೊರ ಬೀಳಲಿದೆ ಅಂತಾ ವಿರೋಧಿಗಳಿಗೆ ಟಾಂಗ್ ಕೊಡುವ ಮೂಲಕ ಈ ಬಾರಿ ತಮ್ಮ ತಾಯಿ ಸುಮಲತ ಗೆಲ್ಲುವುದು ಖಂಡಿತ ಎಂದು ಹೇಳಿದ್ದಾರೆ.

Leave a Reply

Your e-mail address will not be published. Required fields are marked *

error: Content is protected !!