ಮುಸಲ್ಮಾನರಿಗೆ ಅಹಿತಕರ ಸುದ್ದಿ ಕೊಟ್ಟ ಸುಪ್ರೀಂಕೋರ್ಟ್; ಭುಗಿಲೆದ್ದ ಮುಸ್ಲೀಮರ ಆಕ್ರೋಶ

ಜಗತ್ತಿನ ಏಳು ಅದ್ಭುತಗಳಲ್ಲೊಂದಾದ ತಾಜಮಹಲ್ ನಲ್ಲಿ ಸುಪ್ರೀಂಕೋರ್ಟ್ ನಮಾಜ್ ಮಾಡುವುದನ್ನು ನಿಷೇಧಿಸಿತ್ತು. ಇದೀಗ ಸುಪ್ರೀಂಕೋರ್ಟಿನ‌ ಈ ತೀರ್ಪಿನಿಂದ ಮುಸಲ್ಮಾನರಲ್ಲಿ ಆಕ್ರೋಶ ಭುಗಿಲೆದ್ದಿದೆ. Archeological Survey of India ASI (ಭಾರತೀಯ ಪುರಾತತ್ವ ಇಲಾಖೆ) ಅಧಿಕೃತವಾಗಿ ಇದನ್ನ ಪಾಲಿಸಲು ಮುಂದಾಗಿದೆ. ಭಾರತದ ಐತಿಹಾಸಿಕ ಸ್ಮಾರಕಗಳನ್ನ ಪುರಾತತ್ವ ಇಲಾಖೆ ನೋಡಿಕೊಳ್ಳುತ್ತಿದೆ. ಹೀಗಾಗಿ ಅವುಗಳ ಸಂರಕ್ಷಣೆಯ ಜವಾಬ್ದಾರಿ ಅದರದ್ದೇ ಆದ್ದರಿಂದ ಸ್ಮಾರಕಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಕರ್ತವ್ಯವೂ ಪುರಾತತ್ವ ಇಲಾಖೆಗಿದೆ.

ಇದೀಗ ಭಾರತೀಯ ಪುರಾತತ್ವ ಇಲಾಖೆಯು ತಾಜಮಹಲಿನಲ್ಲಿ ನಮಾಜ್ ಮಾಡದಂತೆ ಆದೇಶ ಹೊರಡಿಸಿದ್ದರ ವಿರುದ್ಧ ಮುಸ್ಲಿಂ ಸಮುದಾಯದಲ್ಲಿ ಆಕ್ರೋಶ ಭುಗಿಲೇಳುವಂತೆ ಮಾಡಿದ್ದು ಹಿಂದಿನಿಂದ ನಾವು ಅಲ್ಲಿ ನಮಾಜ್ ಮಾಡುತ್ತಿದ್ದೆವು, ಆದರೆ ಇದೀಗ ನಮ್ಮ ನಮಾಜ್ ಗೆ ಈ ರೀತಿಯಾಗಿ ದಿಢೀರ್ ಬ್ರೇಕ್ ಹಾಕಿರುವುದು ಸರಿಯಲ್ಲ ಎಂದು ಮುಸ್ಲಿಮರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರತೀಯ ಪುರಾತತ್ವ ಇಲಾಖೆಯು ಅಧಿಕೃತವಾಗಿ ಹೊರಡಿಸಿದ್ದ ಆದೇಶದಲ್ಲಿ ತಾಜಮಹಲ್ ನಲ್ಲಿ ಶುಕ್ರವಾರದಂದು ಮಾತ್ರ ಅಂದರೆ ಒಂದು ದಿನ ಮಾತ್ರ ನಮಾಜ್ ಮಾಡಲು ಅವಕಾಶ ನೀಡಲಾಗಿತ್ತು. ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುಮಾವಣೆಯನ್ನ ದೃಷ್ಟಿಯಲ್ಲಿಟ್ಟುಕೊಂಡು ಇಂತಹ ನಿರ್ಧಾರವನ್ನ ಕೈಗೊಳ್ಳಲಾಗಿದೆ ಎಂದು ಮುಸ್ಲಿಂ ಧಾರ್ಮಿಕ ಮುಖಂಡರು ತಮ್ಮ ಅಸಮಾಧಾನವನ್ನ ಹೊರ ಹಾಕಿದ್ದಾರೆ.

ತಾಜಮಹಲ್ ನಲ್ಲಿ ನಮಾಜ್ ಬ್ಯಾನ್ ಆಗಲು ಕಾರಣವೇನು?

ಉತ್ತರಪ್ರದೇಶ ರಾಜ್ಯದ ಆಗ್ರಾದಲ್ಲಿರುವ ವಿಶ್ವವಿಖ್ಯಾತ ತಾಜಮಹಲ್ ದೇಶದ ಪರಂಪರೆಯ ಪ್ರತೀಕವಾಗಿದೆ, ಹಾಗಿದ್ದಮೇಲೆ ಅಂತಹ ಜಾಗದಲ್ಲಿ ಮುಸಲ್ಮಾನರು ನಮಾಜ್ ಮಾಡುವುದರ ಮೂಲಕ ಆ ಜಾಗವನ್ನ ಧಾರ್ಮಿಕ ಸ್ಥಳವನ್ನಾಗಿ ಮಾಡುವುದು ಎಷ್ಟು ಸರಿ? ಈ ಜಾಗಕ್ಕೆ ದೇಶ ವಿದೇಶದಿಂದ ಪ್ರವಾಸಿಗರು ಜಾತಿ ಮತ ಪಂಥ ನೋಡದೆ ಬರುತ್ತಾರೆ ಹಾಗಿದ್ದಮೇಲೆ ಇದನ್ನ ಧಾರ್ಮಿಕ ಸ್ಥಳದಂತೆ ಮಾಡಿ ಅಲ್ಲಿ ನಮಾಜ್ ಮಾಡುವುದನ್ನ ನಿಲ್ಲಿಸಬೇಕು ಎಂದು ಆರೆಸ್ಸೆಸ್ ಸೇರಿದಂತೆ ಹಲವು ಹಿಂದೂ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.

2018 ರ ಜನೇವರಿ 24 ರಂದು ಆಗ್ರಾ ಆಡಳಿತಾಧಿಕಾರಿಗಳು ತಾಜಮಹಲ್ ಬಳಿಯಿರುವ ಮಸೀದಿಯನ್ನ ಹೊರಗಿನಿಂದ ಬಂದ ಜನ ನಮಾಜ್ ಮಾಡಿತ್ತಿದ್ದುದನ್ನ ತಡೆದಿದ್ದರು. ಆದರೆ ಆಡಳಿತಾಧಿಕಾರಿಗಳ ಈ‌ ನಿರ್ಧಾರಕ್ಕೆ ಆಕ್ರೋಶಗೊಂಡ ಮುಸ್ಲಿಮರು ಸುಪ್ರೀಂಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನ ಸಲ್ಲಿಸಿ ನಮಾಜ್ ಮಾಡಲು ಬಿಡುವಂತೆ ಕೋರಿದ್ದರು. ಆದರೆ ಈ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ತಾಜಮಹಲ್ ವಿಶ್ವವಿಖ್ಯಾತ ಸ್ಮಾರಕ, ಜಗತ್ತಿನ ಏಳು ಅದ್ಭುತಗಳಲ್ಲಿ ಒಂದು ಹೀಗಾಗಿ ನಮಾಜ್ ಬೇರೆ ಜಾಗದಲ್ಲೂ ಮಾಡಬಹುದು ಅದಕ್ಕಾಗಿ ತಾಜಮಹಲ್ ಬಳಸದಿರಿ ಎಂದು ಮುಸಲ್ಮಾನರ ಅರ್ಜಿ ವಜಾ ಮಾಡಿತ್ತು.

ತಾಜಮಹಲ್ ಪರಿಸರದಲ್ಲಿ ಇರುವ ಮಸೀದಿಯಲ್ಲಿ ಪ್ರತಿ ಶುಕ್ರವಾರವೂ ಸ್ಥಳೀಯ ಮುಸಲ್ಮಾನರು ನಮಾಜ್ ಮಾಡುತ್ತಾರೆ ಆದರೆ ಹೊರಗಿನಿಂದ ಬಂದ ಮುಸ್ಲಿಂ ಪ್ರವಾಸಿಗರೂ ಕೂಡ ನಮಾಜ್ ಮಾಡಲು ಬರುತ್ತಿದ್ದರು ಆದರೆ ಹೊರಗಿನಿಂದ ಬಂದ ಪ್ರವಾಸಿಗರಿಗೆ ನಮಾಜ್ ಮಾಡಲು ಅನುಮತಿಯಿಲ್ಲ. ತಾಜಮಹಲ್ ನಲ್ಲಿ ನಮಾಜ್ ಮಾಡುವುದಕ್ಕೆ ಹಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ತಾಜಮಹಲ್ ನಲ್ಲಿ ಹೊರಗಿನಿಂದ ಬಂದವರು ನಮಾಜ್ ಮಾಡುವುದನ್ನ ನಿಷೇಧ ಮಾಡಿದ್ದನ್ನ ಪ್ರಶ್ನಿಸಿ ಮುಸಲ್ಮಾನರು ಹಾಕಿದ್ದ ನಿರ್ಧಾರಕ್ಕೆ ತಕರಾರು ಅರ್ಜಿ ಹಾಕದ್ದ ಮುಸಲ್ಮಾನರ ಅರ್ಜಿಯನ್ನ ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು.

ಇದೀಗ ಸುಪ್ರೀಂಕೋರ್ಟ್ ಆದೇಶ ಹಾಗು ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳ ನಿರ್ದೇಶನದಂತೆ ತಾಜಮಹಲ್ ನಲ್ಲಿ ನಮಾಜ್ ಮಾಡಲು ಅವಕಾಶ ನೀಡದಿರುವ ವಿಚಾರಕ್ಕೆ ಮುಸ್ಲಿಂ ಸಮುದಾಯದಲ್ಲಿ ಆಕ್ರೋಶ ಭುಗಿಲೆದ್ದಿದೆ.

– Team Google Guruu

Leave a Reply

Your email address will not be published. Required fields are marked *

error: Content is protected !!