ಅಚ್ಚರಿ: ಈ ವಿಸ್ಮಯಕಾರಿ ದೇವಸ್ಥಾನದ ಮೇಲೆ ಪಾಕಿಸ್ತಾನ ಎಂಥಾ ಬಾಂಬ್ ಎಸೆದರೂ ಸ್ಪೋಟಗೊಳ್ಳೋದೇ ಇಲ್ಲ

ತಾನೋಟ್ ಮಾತಾ ದೇವಿಯ ಪ್ರಸಿದ್ಧ ದೇವಸ್ಥಾನವಾದ ಹಿಂಗ್ಲಾಜ್ ಮಾತಾ ಮಂದಿರವು ಬಲುಚಿಸ್ತಾನದ ಲಾಸವೇಲಾ ಜಿಲ್ಲೆಯಲ್ಲಿದ್ದೂ ಆ ದೇವಿಯ ಇನ್ನೊಂದು ಸ್ವರೂಪ ರಾಜಸ್ತಾನದ ಜೈಸಲ್ಮೇರ್‌ನಲ್ಲಿ ತಾನೋಟ್ ಮಾತಾ ಮಂದಿರ ಎಂದೇ ರೂಪಗೊಂಡಿದೆ. ಈ ದೇವಸ್ತಾನವೂ ಭಾರತ ಪಾಕಿಸ್ತಾನದ ನಡುವೆ 1971ರಲ್ಲಿ ನಡೆದ ಯುದ್ಧ ಸ್ಥಳವಾದ ಲೊಂಗೆವಾಲ ಎಂಬ ಸ್ಥಳದಲ್ಲಿ ನಿರ್ಮಾಣಗೊಂಡಿದೆ.

ಹಿಂಗ್ಲಾಜ್ ನಿಂದ ಬರೊಬ್ಬರಿ 120ಕಿ.ಮಿ ದೂರದ ರಾಜಸ್ಥಾನದ ಜೈಸಲಮೀರ್‌ನಲ್ಲಿ ಅಂದಿನ ಭಾಟಿ ರಜಪೂತರ ರಾಜ ತಾನು ರಾವ್ ಅವರು ತಾನೋಟ್ ಮಾತಾ ಮಂದಿರ ನಿರ್ಮಿಸಿದ್ದಾರೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ತಾನು ರಾವ್ ಅವರು ತಾನೋಟ್‌ನ್ನು ಅವರ ರಾಜಧಾನಿಯನ್ನಾಗಿ ಆಯ್ಕೆ ಮಾಡುತ್ತಾರೆ.

ತಾನೋಟ್ ಮಾತಾ ಮಂದಿರವು 1965ಕ್ಕೂ ಮುಂಚೆ ರಾಜನ ಅಧಿನದಲ್ಲಿತ್ತು ಆದರೆ ಭಾರತ ಪಾಕ್‌ನ ಯುದ್ಧದ ನಂತರ ಅದರ ಜವಾಬ್ದಾರಿಯನ್ನು ಬಿಎಸ್‌ಎಫ್ (ಭಾರತೀಯ ಸೆಕ್ಯುರಿಟಿ ಫೋರ್ಸ್) ಗೆ ವಹಿಸಲಾಯಿತು, ಈ ದೇವಸ್ತಾನವನ್ನು ಬಿಎಸ್‌ಎಫ್ ಅಧಿಕಾರಿಗಳಿಗೆ ನೀಡುವ ಹಿಂದಿದೆ ಆ ರೋಚಕ ಕಹಾನಿ ಆ ಕಥೆ ತಿಳಿದರೆ ನೀವು ಸಹ ಒಂದು ಕ್ಷಣ ಗಾಬರಿಯಾಗುವಿರಿ.

1965ರ ಪಾಕಿಸ್ತಾನ ಭಾರತದ ನಡುವಿನ ಯುದ್ಧ ಸಂದರ್ಭದಲ್ಲಿ ಪಾಕಿಸ್ತಾನಿ ಸೇನೆ ತಾನೋಟ್ ಮಾತಾ ದೇವಿಯ ಮಂದಿರವನ್ನು ಟಾರ್ಗೆಟ್ ಮಾಡಿ ಧ್ವಂಸ ಮಾಡಲು ಯತ್ನಿಸಿ ಹಲಹು ಶೆಲ್ ಬಾಂಬ‌್‌ಗಳನ್ನು ಎಸೆದಿದ್ದಾರೆ ಆದರೆ ಅಚ್ಚರಿ ಎಂಬಂತೆ ಯಾವೊಂದು ಬಾಂಬ್ ಸಹ ಮಂದಿರದ ಮೇಲೆ ಬೀಳಲಿಲ್ಲ ಕೆಲವು ಬಾಂಬುಗಳು ಮಂದಿರದ ಆವರಣದಲ್ಲಿ ಹಾಗೂ ಸುತ್ತಮುತ್ತಲೂ ಬಿದ್ದರೂ ಸಹ ಅಚ್ಚರಿ, ಪವಾಡ ಎಂಬಂತೆ ಸ್ಪೋಟಗೊಳ್ಳಲೇ ಇಲ್ಲ.

ತಾನೋಟ್ ಮಂದಿರದ ಮೇಲೆ ಪಾಕ್ ಒಂದು ಬಾರಿ ಬಾಂಬ್ ಹಾಕಿ ವಿಫಲಗೊಂಡಿತ್ತು ಆದರೆ ಪಟ್ಟು ಬಿಡದ ಪಾಪಿ ಪಾಕಿಸ್ತಾನ ಮತ್ತೊಮ್ಮೆ ಸತತ ದಾಳಿ ನಡೆಸಿ ಸ್ಫೋಟಕ ಮದ್ದು ಗುಂಡು ಬಳಸಿ ಬಾಂಬ್ ದಾಳಿ ನಡೆಸಿತು ಆದರೆ ದೇವಸ್ಥಾನದ ಒಂದು ಇಂಚಿನಷ್ಟು ಭಾಗಕ್ಕೂ ಯಾವುದೇ ಹಾನಿಯಾಗಲಿಲ್ಲ, ಇದನ್ನು ಕಂಡ ಪಾಕ್ ಕಂಗಾಲಾಗಿ ತನ್ನ ಪ್ರಯತ್ನವನ್ನು ಕೈ ಬಿಟ್ಟಿದೆವೆ ಎಂದು ಪಾಕ್ ಸೇನೆ ತನ್ನ ರಿಪೋರ್ಟ್ ಕಾರ್ಡ್‌ನಲ್ಲಿ ಉಲ್ಲೇಖಿಸಿದೆ.

ತಾನೋಟ್ ಮಾತಾ ಮಂದಿರದ ಮೇಲೆ ಹಾಗೂ ಮಂದಿರದ ಅಕ್ಕಪಕ್ಕದಲ್ಲಿ ಪಾಪಿ ಪಾಕಿಸ್ತಾನ ಒಟ್ಟು 3000 ಶೆಲ್ ಬಾಂಬ್‌ಗಳನ್ನು ಎಸೆದಿದ್ದು ಅವುಗಳಲ್ಲಿ ಒಂದೇ ಒಂದು ಬಾಂಬ್ ಸ್ಫೋಟಗೊಂಡಿಲ್ಲ ಈ ಒಂದು ರೋಚಕ ಘಟನೆಗೆ ದೈವಿ ಶಕ್ತಿಯೇ ಕಾರಣ ಭಾರತದ ಜನರನ್ನು ಹಾಗೂ ರಕ್ಷಣಾ ಯೋಧರನ್ನು ತಾನೋಟ್ ದೇವಿ ಕಾಪಾಡುತ್ತಿದ್ದಾಳೆ ಎಂದು ಬಿಎಸ್‌ಎಫ್ ಅಧಿಕಾರಿಗಳು ಹೇಳಿದ್ದಾರೆ.

ಭಾರತ ಪಾಕಿಸ್ತಾನದ ಯುದ್ಧ ಸಂದರ್ಭದಲ್ಲಿ ಪಾಕ್ ಭಾರತದ ಮೇಲೆ ಎಸೆದ ಎಲ್ಲ ಬಾಂಬ್‌ಗಳು ಸ್ಪೋಟಗೊಂಡಿದ್ದವು ಆದರೆ ಅದೇ ಬಾಂಬ‌್ ಗಳು ಮಂದಿರದ ಅಂಗಳ ಹಾಗೂ ಮಂದಿರದ ಅಕ್ಕ ಪಕ್ಕ ಬಿದ್ದ ಬಾಂಬ್‌ಗಳು ಮಾತ್ರ ಸ್ಪೋಟಗೊಳ್ಳದೆ ದೈವ ಸ್ವರೂಪದಿಂದ ನಿಷ್ಕ್ರಿಯಗೊಂಡಿದ್ದವು ಎಂದು ಇತಿಹಾಸದಲ್ಲಿ ಉಲ್ಲೇಖವಾಗಿದೆ.

ಅಂದಿನ ದಿನ ಪಾಕಿಸ್ತಾನ ಸೇನೆ ತಾನೋಟ್ ಮಾತಾ ಮಂದಿರದ ಮೇಲೆ ಎಸೆಯಲಾದ ಶೆಲ್ ಬಾಂಬ್‌ಗಳು ನಿಷ್ಕ್ರಿಯಗೊಂಡಿದ್ದವು ಆ ನಿಷ್ಕ್ರಿಯಗೊಂಡ ಶೆಲ್ ಬಾಂಬ್‌ಗಳು ದೇವಸ್ತಾನದ ಮಂಡಳಿ ಇಂದಿಗೂ ಸಹ ದೇವಸ್ತಾನದಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದು ದೇವಿಯ ಮಹಾತ್ಮೆಯನ್ನು ಭಕ್ತರಿಗೆ ತಿಳಿಸಲು ಈ ರೀತಿಯಾಗಿ ಇರಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಪಾಕಿಸ್ತಾನ ತಾನೋಟ್ ಮಾತಾ ದೇವಿಯ ಮಂದಿರದ ಮೇಲೆ ಎಸೆದ ಬಾಂಬ್‌ಗಳನ್ನು ಕಂಡ ದೇವಸ್ತಾನದ ಮಂಡಳಿ ಬಿಎಸ್ಎಫ್ (ಗಡಿ ರಕ್ಷಣಾ ಅಧಿಕಾರಿ)ಗೆ ಮಾಹಿತಿ ತಿಳಿಸಿದರು ಆಗ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಪಾಕ್ ಎಸೆದ ಬಾಂಬ್‌ ತನ್ನಿಂದ ತಾನೆ ನಿಷ್ಕ್ರಿಯಗೊಂಡಿದ್ದನ್ನು ಕಂಡು ಬೆಚ್ಚಿ ಬೆರಗಾಗಿದ್ದರು ಈ ರೀತಿಯಾಗಿದ್ದಕ್ಕೆ ಕಾರಣ ಮಾತೆ ತಾನೋಟ್ ದೇವಿಯ ವಿಸ್ಮಯ ಶಕ್ತಿ ಎಂದು ಹೇಳಿದ್ದರು.

ಅಂದಿನ ದಿನವಷ್ಟೇ ಅಲ್ಲ ಇವತ್ತಿಗೂ ಸಹ ತಾನೋಟ್ ಮಂದಿರದ ಮೇಲಾಗಲಿ ಅಥವಾ ಮಂದಿರದ ಪಕ್ಕದಲ್ಲಿ ಯಾವುದೇ ಬಾಂಬ್ ಸ್ಫೋಟಗೊಳ್ಳಲ್ವಂತೆ, ತಾನೋಟ್ ದೇವಿಯೂ ಇಂದಿಗೂ ಸಹ ಭಾರತ ದೇಶದ ಗಡಿ ಹಾಗೂ ಭಾರತಿಯ ಸೈನಿಕರ ರಕ್ಷಣೆ ಮಾಡುತ್ತಿದ್ದಾಳೆ ಎಂದು ಅಲ್ಲಿನ ಜನ ಹೇಳುತ್ತಾರೆ ಈ ಎಲ್ಲ ಪ್ರಕ್ರಿಯೆ ನೋಡುತ್ತಿದ್ದರೆ ಅವರ ಮಾತು ಸತ್ಯ ಎಂದು ಹೇಳಬಹುದು.

ಈ ಎಲ್ಲ ಮಾತುಗಳು ಕೇಳಿದರೆ ತಾನೋಟ್ ಮಾತಾ ದೇವಿಯ ಶಕ್ತಿ ಅಪರಿಮಿತವಾದದ್ದು ಹಾಗೂ ಅಲ್ಲಿಯ ನಡೆಯುವ ಘಟನೆಗಳು ನಿಜಕ್ಕೂ ಇಂದಿಗೂ ಅಚ್ಚರಿಗೊಳಿಸುತ್ತವೆ. ಹಾಗೂ ಇಂದಿಗೂ ಸಹ ಯಾವ ವಿಜ್ಞಾನಿಗಳು ಆ ಶೆಲ್ ಬಾಂಬ್‌ಗಳು ಯಾಕೆ ಸ್ಫೋಟಗೊಳ್ಳಲಿಲ್ಲ ಎಂಬುದರ ಬಗ್ಗೆ ತಿಳಿಯಲು ಸಾಧ್ಯವೇ ಆಗಿಲ್ಲ. ಒಂದು ವೇಳೆ ನೀವು ಪ್ರಾವಸಕ್ಕೆ ಎಲ್ಲಿಯಾದರೂ ಪ್ಲ್ಯಾನ್ ಮಾಡಿಕೊಂಡಿದ್ದರೆ ಒಂದು ಬಾರೀ ಈ ವಿಸ್ಮಯ ಸ್ಥಳಕ್ಕೆ ಭೇಟಿ ನೀಡಿ ದೇವಿಯ ದರ್ಶನ ಮಾಡಿಕೊಂಡು ಬನ್ನಿ.

– Gururaj Sahukar

Leave a Reply

Your e-mail address will not be published. Required fields are marked *

error: Content is protected !!