ಶತ್ರುಗಳ ಬಾಂಬ್, ರಾಕೆಟ್, ಮಿಸೈಲ್ ಗಳೂ ಆಗಲಿವೆ ಠುಸ್; ಭಾರತೀಯ ಸೈನಿಕರಿಗಾಗಿ ಅಡ್ವಾನ್ಸ್ಡ್ ಟೆಕ್ನಾಲಾಜಿಯ ಟ್ಯಾಂಕರ್ ಕೊಟ್ಟ ದೇಶಭಕ್ತ ರತನ್ ಟಾಟಾ

ಟಾಟಾ ಮೋಟರ್ಸ್ ಇಂಡಿಯನ್ ಡಿಫೆನ್ಸ್ ವೆಹಿಕಲ್ ನ ಅತಿ ದೊಡ್ಡ ಸಪ್ಲೈಯರ್ ಕಂಪೆನಿಯೆಂದೇ ಖ್ಯಾತಿ ಗಳಿಸಿದೆ. ಟಟಾ ಕಂಪೆನಿ ಭಾರತೀಯ ಆರ್ಮ್ಡ್ ಫೋರ್ಸ್ ಗೆ ಸೇನೆ ಶಸ್ತ್ರಾಸ್ತ್ರಗಳಿಂದ ಕೂಡಿರುವ ವಾಹನಗಳನ್ನ ಸಪ್ಲೈ ಮಾಡುವ ಕಾಂಟ್ರ್ಯಾಕ್ಟ್ ಪಡೆದುಕೊಂಡಿದೆ. ಈ ಮೊದಲು ಟಾಟಾ ಕಂಪೆನಿಯು ಭಾರತೀಯ ಸೇನೆಗೆ ಟಾಟಾ ಸಫಾರಿ ಸ್ಟಾರ್ಮ್ ನ್ನ ಸಪ್ಲೈ ಮಾಡಿತ್ತು.

ಅದನ್ನೀಗ ರಿಪ್ಲೇಸ್ ಮಾಡಲಾಗುವುದೆಂದು ಹೇಳಲಾಗುತ್ತಿದೆ. ಭಾರತೀಯ ಸೇನೆಯಲ್ಲಿ ಸದ್ಯ ಸೇರ್ಪಡೆಯಾಗಲಿರುವ ಟಾಟಾ ಮರ್ಲಿನ್ (Merlin) ವಾಹನವನ್ನ ಸದ್ಯ ಮುಂಬೈ-ಪುಣೆ ಎಕ್ಸಪ್ರೆಸ್‌ವೇ ನಲ್ಲಿ ಟೆಸ್ಟಿಂಗ್ ಗಾಗಿ ಸ್ಪಾಟ್ ಮಾಡಲಾಗಿದೆ.

ಅಡ್ವಾನ್ಸ್ಡ್ ಟೆಕ್ನಾಲಜಿಯಿಂದ ಕೂಡಿರುತ್ತೆ ಈ ವಾಹನ:

ಟಾಟಾ ಕಂಪೆನಿಯ ಈ ವಾಹನ ಯಾವ ಮಾನ್ಸ್ಟರ್ ಗಳಿಂತಲೇನೂ ಕಮ್ಮಿಯಿಲ್ಲ. ಟಾಟಾ ಕಂಪೆನಿಯ ಅಧಿಕೃತ ವೆಬಸೈಟ್ ನಲ್ಲಿ ಈ ವಾಹನದ ಕುರಿತಾಗಿರುವ ಡಿಟೇಲ್ಸ್ ನ್ನ ಹಾಕಲಾಗಿದೆ. ಈ ಗಾಡಿಯನ್ನ ವಿಶೇಷ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು ಇದರ ಸೈಡ್ ಹಾಗು ರೇರ್ ನಲ್ಲಿ STANAG 4569‌ ಲೆವೆಲ್-1 ಪ್ರೊಟೆಕ್ಷನ್ ನೀಡಲಾಗಿದೆ.

ಇದರಲ್ಲಿ ನಾಟೋ ಸ್ಟ್ಯಾಂಡರ್ಡ್ ನ ಉಚ್ಛಸ್ಥರದ ರಕ್ಷಣಾ ವ್ಯವಸ್ಥೆಯನ್ನೂ ಒದಗಿಸಲಾಗಿದೆ. ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಲೆವೆಲ್-1 ಪ್ರೊಟೆಕ್ಷನ್ ನ ಟ್ರಕ್ ಗಳಲ್ಲಿ ಆರ್ಟಿಲರಿ, ಗ್ರೆನೇಡ್ ಹಾಗು ಮೈನ್ ಬ್ಲ್ಯಾಸ್ಟ್ ಗಳಿಂದ ಯಾವುದೇ ರೀತಿಯ ಎಫೆಕ್ಟ್ ಕೂಡ ಆಗಲ್ಲ. ಇದು ಕೈನೆಟಿಕ್ ಎನರ್ಜಿಯನ್ನ ಎಬ್ಸಾರ್ಬ್ಬ ಮಾಡಿಕೊಂಡು ಹಾಗು ಅದರಲ್ಲಿ ಪ್ರಯಾಣಿಸಿತ್ತಿರುವ ಸೈನಿಕರನ್ನ ರಕ್ಷಣೆ ಒದಗಿಸುತ್ತದೆ.

ಆಟೋಮೇಟಿಕ್ ಗ್ರೆನೇಡ್ ಲಾಂಚರ್ ಇನ್ಸ್ಟಾಲ್ ಮಾಡುವ ಆಪ್ಷನ್ ಕೂಡ ಇರಲಿದೆ:

ಇದರಲ್ಲಿ ಕಾಮನ್ ರೇಲ್ ಟರ್ಬೋ ಡೀಸಲ್ ಇಂಜಿನ್ ನ್ಮ ಅಳವಡಿಸಲಾಗಿದ್ದು ಇದು ಹೆಚ್ಚೆಂದರೆ 185 Bhp ಹಾಗು 450 ನ್ಯೂಟನ್ ಮೀಟರ್ ನ ಟಾರ್ಕ್ ಜನರೇಟ್ ಮಾಡುತ್ತೆ. ಇದರಲ್ಲಿ 4×4 ಡ್ರೈವಿಂಗ್ ಸಿಸ್ಟಮ್ ಇರಲಿದ್ದು ಆಪತ್ ಕಾಲದ ಸ್ಥಿತಿಯಲ್ಲಿ ಭಾರೀ ಸಹಾಯ ಮಾಡುವಲ್ಲಿ ಹಾಗು ರಕ್ಷಣೆ ಒದಗಿಸುವಲ್ಲಿ ಸಹಕಾರಿಯಾಗಲಿದೆ. ಈ ವೆಹಿಕಲ್ ನ ಟೈಯರ್ ಗಳಲ್ಲಿ ಹೊರಗಿನ‌ ಯಾವುದೇ ಸೋರ್ಸ್ ಗಳಿಂದಲೂ ಗಾಳಿ ತುಂಬ ಬಹುದಾಗಿದೆ.

ಈ ವೆಹಿಕಲ್ ನ ಟಾಪ್ ನಲ್ಲಿ 7.6 ಎಂ.ಎಂ ನ‌ ಮಷೀನ್ ಗನ್ ಹಾಗು 40 ಎಂ.ಎಂ ಆಟೋಮೆಟಿಕ್ ಗ್ರೆನೇಡ್ ಲಾಂಚರ್ ಕೂಡ ಇನ್ಸ್ಟಾಲ್ ಮಾಡುವ ಆಪ್ಷನ್ ಕೂಡ ಇರಲಿದೆ. ಇದರಲ್ಲಿ ಆ್ಯಂಟಿ ಟ್ಯಾಂಕ್ ಮಿಸೈಲ್ ಇನ್ಸ್ಟಾಲ್ ಆಗಿರಲಿದೆ. ಟಾಟಾ ಸಂಸ್ಥೆ ಹಲವು ದಶಕಗಳಿಂದ ಭಾರತೀಯ ಸೇನೆಗೆ ವೆಹಿಕಲ್ ಗಳನ್ನ ಪೂರೈಸುತ್ತಿದೆ. ಅಷ್ಟೇ ಅಲ್ಲದೆ ವಿಶ್ವದ ಅನೇಕ ದೇಶಗಳಿಗೂ ಕೂಡ ಡಿಫೆನ್ಸ್ ವೆಹಿಕಲ್ಸ್ ಗಳ ಸಪ್ಲೈ ಮಾಡುತ್ತಿದೆ.

– Kranti Arjun

Leave a Reply

Your e-mail address will not be published. Required fields are marked *

error: Content is protected !!