ಎರಡೂ ಕೈಗಳಿಗೆ ಬೆರಳುಗಳಿಲ್ಲ ಆದರೂ ಈ ಪುಟ್ಟ ಬಾಲಕಿ ಮಾಡಿದ ಸಾಧನೆ ಭಾರತದ ಪ್ರತಿಯೊಬ್ಬರಿಗೂ ಮಾದರಿ

ಕೈ ಬೆರಳುಗಳಿಲ್ಲದೆ ಜನಿಸಿದ ಪುಟ್ಟ ಬಾಲಕಿಯೊಬ್ಬಳು ನ್ಯಾಷನಲ್ ಹ್ಯಾಂಡ್​​ರೈಟಿಂಗ್​​ ಕಾಂಪಿಟೆಷನ್​​ನಲ್ಲಿ ಗೆದ್ದು ಸಾಧನೆ ಮಾಡಿದ್ದಾಳೆ. 10 ವರ್ಷದ ಸಾರಾ ಹೈನೆಸ್ಲೀ ಸ್ಪರ್ಧೆ ಗೆದ್ದ ಬಾಲಕಿ. ಈಕೆ ಅಮೇರಿಕಾದ ಮೇರಿಲ್ಯಾಂಡ್​​ನಲ್ಲಿರೊ ಸೆಂಟ್​​ ಜಾನ್ಸ್​​ ರೀಜನಲ್ ಕ್ಯಾಥೋಲಿಕ್ ಸ್ಕೂಲ್​​ನಲ್ಲಿ ಮೂರನೇ ತರಗತಿ ಓದುತ್ತಿದ್ದಾಳೆ.

ಕರ್ಸಿವ್​ ರೈಟಿಂಗ್​​ನಲ್ಲಿ 2019ರ ಮ್ಯಾಕ್ಸಿಮ್ ಅವಾರ್ಡ್​​ ತನ್ನದಾಗಿಸಿಕೊಂಡಿದ್ದಾಳೆ. ಪ್ರತಿ ವರ್ಷ ಪ್ರಿಂಟ್​ ರೈಟಿಂಗ್​​ ಹಾಗೂ ಸ್ಕ್ರಿಪ್ಟ್​​ ವಿಭಾಗದಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಈ ಪ್ರಶಸ್ತಿಯನ್ನ ನೀಡಲಾಗುತ್ತದೆ. ಸಾರಾಗೆ ಕೈಗಳಿಲ್ಲದಿದ್ದರೂ ಆಕೆ ಕೃತಕ ಕೈಗಳನ್ನ ಎಂದಿಗೂ ಬಳಸಿಲ್ಲ.

ಕೆಲವೊಮ್ಮೆ ಕತ್ತರಿಯಿಂದ ಪೇಪರ್​ ಕಟ್​​ ಮಾಡಬೇಕಾದಾಗ ಅಥವಾ ಇತರೆ ಕೆಲಸಗಳನ್ನ ಮಾಡುವಾಗ ಸುಲಭವಾಗಲಿ ಅಂತ ಯಾವುದಾದ್ರೂ ಸಾಧನವನ್ನ ನೀಡಿದ್ರೆ ಅಥವಾ ಸಹಾಯ ಮಾಡಲು ಮುಂದಾದ್ರೆ ಆಕೆ ನಿರಾಕರಿಸುತ್ತಾಳೆ. ನಾನು ಈ ಕೆಲಸವನ್ನ ಮಾಡಬಲ್ಲೆ ಅಂತ ಅಂದುಕೊಂಡು ಅದಕ್ಕೆ ಬೇಕಾದ ಮಾರ್ಗವನ್ನ ತಾನೇ ಕಂಡುಕೊಳ್ಳುತ್ತಾಳೆ ಅಂತ ಸಾರಾಳ ತಾಯಿ ಕ್ಯಾಥ್ರಿನ್ ಹೇಳಿದ್ದಾರೆ.

ಇನ್ನು ಸಾರಾ ಬರವಣಿಗೆ ಮಾತ್ರವಲ್ಲ, ಚಿತ್ರ ಬಿಡಿಸೋದು ಹಾಗೂ ಕ್ಲೇಯಿಂದ ಕ್ರಾಫ್ಟ್​​ ಮಾಡೋದು ಕೂಡ ಮಾಡ್ತಾಳೆ. ಇಂಗ್ಲಿಷ್​ ಹಾಗೂ ಮ್ಯಾಂಡರಿನ್​ ಭಾಷೆಗಳಲ್ಲಿ ಈಕೆ ಬರೆಯಬಲ್ಲಳು ಅಂತ ಶಿಕ್ಷಕಿ ಚೆರಿಲ್ ಹೇಳಿದ್ದಾರೆ.

ಸಾರಾ ಬರೆಯುವಾಗ ತನ್ನ ಎರಡು ತೋಳುಗಳ ಮಧ್ಯೆ ಪೆನ್ಸಿಲ್​​ ಹಿಡಿಯುತ್ತಾಳೆ. ಅಕ್ಷರದ ಶೇಪ್​ ಮೇಲೆ, ಪ್ರತಿ ತುದಿ ಹಾಗೂ ತಿರುವುಗಳ ಬಗ್ಗೆ ಗಮನ ಹರಿಸುತ್ತಾ ಬರೆಯುತ್ತಾಳೆ. ಕರ್ಸೀವ್​ ಬರೆಯೋದು ಅಂದ್ರೆ ನನಗೆ ಒಂದು ಕಲಾಕೃತಿ ರಚಿಸಿದ ಅನುಭವವಾಗುತ್ತೆ ಅಂತಾಳೆ ಸಾರಾ.

-Team Google Guru

Leave a Reply

Your e-mail address will not be published. Required fields are marked *

error: Content is protected !!