ಪ್ರತಿದಿನ ರಾಷ್ಟ್ರಗೀತೆ ಹಾಡುವ ಸಂದರ್ಭದಲ್ಲಿ ಇಡೀ ಊರಿಗೆ ಊರೆ ಎದ್ದು ನಿಂತು ಗೌರವ ಸಲ್ಲಿಸುತ್ತಾರೆ

ರಾಷ್ಟ್ರ ರಾಷ್ಟ್ರಗೀತೆ ಎಂಬ ವಿಷಯ ಬಂದರೆ ಸಾಕು ಭಾರತ ದೇಶದ ಜನರು ಯಾವುದಕ್ಕೆ ಬೇಕಾದರೂ ತ್ಯಾಗ ಮಾಡಲು ಸಿದ್ದ, ತಮ್ಮ ಪ್ರಾಣ ಬಿಡಲು ಸಹ ಹಿಂದೆ ಮುಂದೆ ನೋಡಲ್ಲ, ಹೌದು ನಮ್ಮವರ ದೇಶಭಕ್ತಿಗೆ ಸರಿ ಸಾಟಿ ಬೇರೆ ಯಾವ ದೇಶದವರು ಸರಿಸಾಟಿಯಾಗಲ್ಲ ಎಂದರೆ ತಪ್ಪಾಗಲಾರದು.

ಇಂತಹದ್ದೊಂದು ದೇಶಭಕ್ತಿ ಆ ಒಂದು ಗ್ರಾಮ ಇಡೀ ಜಗತ್ತಿಗೆ ಮಾದರಿಯಾಗಿದೆ ಎನ್ನಬಹುದು ಹೌದು ಒಂದು ಕಡೆ ಭಾರತ್ ತೇರೆ ತುಕುಡೆ ಹೋಂಗೆ ಎನ್ನುವ ನಾಲಾಯಕರು, ದಿನಕ್ಕೆ ಒಂದು ಬಾರಿಯಾದರೂ ಈ ಗ್ರಾಮದ ಜನರ ಪಾದ ಮುಟ್ಟಿ ನಮಸ್ಕರಿಸಬೇಕು ಅಂತಹ ದೇಶ ಭಕ್ತಿ ಹೊಂದಿದ್ದಾರೆ ಅಲ್ಲಿನ ಜನ.

ರಾಷ್ಟ್ರಗೀತೆ ಬಂದಾಗ ಎದ್ದು ನಿಂತು ಗೌರವ ಸೂಚಿಸೋದು ಕಾಮನ್ ಆಗಿ ಎಲ್ಲ ಕಡೆನೂ ನೋಡಿರ್ತಿವಿ. ಹಾಗೆನೇ ಎಲ್ಲಾ ಶಾಲೆಗಳಲ್ಲಿ ಬೆಳಗಿನ ಹೊತ್ತು ರಾಷ್ಟ್ರಗೀತೆ ಹಾಡೋದನ್ನ ಕೇಳೀರ್ತಿವಿ. ಆದ್ರೆ ಇಲ್ಲೊಂದು ಹಳ್ಳಿಯಲ್ಲಿ ಪ್ರತಿನಿತ್ಯ ರಾಷ್ಟ್ರಗೀತೆಗೆ ಎಲ್ಲರು ನಿಂತು ಗೌರವ ಸಲ್ಲಿಸುತ್ತಾರೆ.

ಯಾಕಂದ್ರೆ ಇಲ್ಲಿ ಪ್ರತಿದಿನ ಇಡೀ ಊರೇ ರಾಷ್ಟ್ರಗೀತೆಯನ್ನ ಹಾಡುತ್ತದೆ. ಈ ವಿಶೇಷ ಹಳ್ಳಿ ಇರೋದು ತೆಲಂಗಾಣದ ಕರೀಂ ನಗರ್​ ಜಿಲ್ಲೆಯ ಜಮ್ಮಿಕುಂಟ ಎಂಬ ಪಟ್ಟಣದ ಬಳಿ. ಹೈದ್ರಾಬಾದ್​​ನಿಂದ 140 ಕಿ.ಮೀಟರ್​ ದೂರದಲ್ಲಿರುವ ಈ ಹಳ್ಳಿಯಲ್ಲಿ 2017ರಿಂದ ಪ್ರತಿನಿತ್ಯ ಇಡೀ ಊರಿಗೆ ಊರೇ ರಾಷ್ಟ್ರಗೀತೆಯನ್ನ ಹಾಡುತ್ತೆ.

ಬೆಳಗ್ಗೆ ನಿಖರವಾಗಿ 7.58ಕ್ಕೆ 16 ಸ್ಪೀಕರ್​​​ನ ಮೂಲಕ ರಾಷ್ಟ್ರಗೀತೆ ಆರಂಭವಾಗುವ ಸೂಚನೆ ನೀಡಲಾಗುತ್ತದೆ. ಈ ಸೂಚನೆ ಬಂದ 2 ಸೆಕೆಂಡ್​​ಗಳ ಬಳಿಕ ರಾಷ್ಟ್ರಗೀತೆ ಆರಂಭವಾಗುತ್ತದೆ. ರಾಷ್ಟ್ರಗೀತೆ ಮೊಳಗುತ್ತಿದ್ದಂತೆ ಇಡೀ ಊರಿಗೆ ಊರೇ ಎದ್ದು ನಿಂತು ಗೌರವ ಸೂಚಿಸುತ್ತೆ.

-Team Google Guruu

Leave a Reply

Your e-mail address will not be published. Required fields are marked *

You may have missed

error: Content is protected !!