ಯಾವುದೇ ಬ್ರೇಕ್ ಹಾಕದಿದ್ದರೂ ಈ ದೇವಸ್ಥಾನದ ಬಳಿ ತಾನೇ ತಾನಾಗಿ ನಿಂತುಬಿಡುತ್ತೆ ಟ್ರೇನ್..! ಇದರ ಹಿಂದಿನ ರಹಸ್ಯ ಕಂಡು ಬೆಚ್ಚಿಬಿದ್ದ ವಿಜ್ಞಾನಿಗಳು

ಭಾರತದಲ್ಲಿ ಹಲವಾರು ರಹಸ್ಯಮಯ ಸ್ಥಳಗಳಿವೆ, ಅಲ್ಲಿನ ರಹಸ್ಯಗಳನ್ನ ಭೇದಿಸಲು ಈಗಲೂ ಮುಂದುವರೆದಿರುವ ವಿಜ್ಞಾನವಾಗಲಿ ವಿಜ್ಞಾನಿಗಳಾಗಲಿ ಕಂಡು ಹಿಡಿಯೋಕೆ ಸಾಧ್ಯವಾಗಿಲ್ಲ. ವಿಜ್ಞಾನ ಎಷ್ಟೇ ಮುಂದುವರೆದಿದ್ದರೂ ಭಾರತದಲ್ಲಿರುವ ಹಲವಾರು ರಹಸ್ಯಗಳು ಈಗಲೂ ರಹಸ್ಯಗಳಾಗೇ ಉಳಿದಿವೆ‌. ಆ ರಹಸ್ಯವನ್ನ ಭೇದಿಸಲು ಪ್ರಯತ್ನಿಸಿದವರಿಗೆ ಒಂದೋ ಸಾವು ಖಚಿತ ಇಲ್ಲ ರಹಸ್ಯ ಭೇದಿಸದೆ ಖಾಲಿ ಕೈ ವಾಪಸ್ಸಾಗುತ್ತಾರೆ.

ಬನ್ನಿ ಅಂತಹುದೇ ಒಂದು ರಹಸ್ಯಮಯ ಸ್ಥಳದ ಬಗ್ಗೆ ನಾವಿಂದು ನಿಮಗೆ ತಿಳಿಸುತ್ತೇವೆ. ಅಷ್ಟಕ್ಲೂ ದೇವರ ಆಕಾರ, ಪ್ರಕಾರ, ರೂಪದ ಬಗ್ಗೆ ನಮಗೆ ತಿಳಿಯದೆ ಇರಬಹುದು ಆದರೆ ದೇವರ ಹಾಗು ದೈವಿ ಶಕ್ತಿಯ ಬಗ್ಗೆ ಅನುಭವವಂತೂ ಪ್ರತಿಯೊಬ್ಬರಿಗೂ ಆಗೇ ಇರುತ್ತೆ. ನಮ್ಮ ಸುತ್ತಮುತ್ತಲೂ ನಡೆಯುವ ಕೆಲ ಘಟನೆಗಳು ನಮಗೆ ದೇವರಿದ್ದಾನೆ ಅನ್ನೋ ಅನುಭವವನ್ನ ಮಾಡಿಸುತ್ತವೆ.

ಇದೇ ಕಾರಣದಿಂದ ದೇವರಿದ್ದಾನೆ ಅನ್ನೋ ಅಚಲವಾದ ನಂಬಿಕೆ ಜನರಲ್ಲಿರುವುದರಿಂದಲೇ ಕೋಟ್ಯಂತರ ಜನ ಆಸ್ತಿಕರಾಗಿರುವುದು ಹಾಗು ದೇವರನ್ನ ನಂಬುತ್ತಿರೋದು. ಕೋಟ್ಯಂತರ ಜನರ ನಂಬಿಕೆ ಈ ಒಂದು ಮೂರ್ತಿ(ಹನುಮಾನ ದೇವಸ್ಥಾನ)ಯ ಎದುರು ಬಂದು ತಲೆ ಬಾಗುತ್ತಾರೆ. ಇಂತಹುದ್ದೇ ಒಂದು ಚಮತ್ಕಾರಿ ಮಂದಿರ ನಮ್ಮ ಭಾರತದಲ್ಲೇ ಇದ್ದು ಅಲ್ಲಿ ಕೇವಲ ಜನಗಳಷ್ಟೇ ಅಲ್ಲ ವೇಗವಾಗಿ ಚಲಿಸುತ್ತಿರೋ ಟ್ರೇನ್ ಕೂಡ ಯಾವುದೇ ಬ್ರೇಕ್ ಹಾಕದೆಯೂ ತನ್ನಿಂತಾನೇ ನಿಂತು ಹನುಮನಿಗೆ ಪ್ರಣಾಮ ಸಲ್ಲಿಸಲು ಬಿಡುತ್ತದೆ.

ಹೌದು ದೇವರಿದ್ದಾನೆ ಅನ್ನೋದಕ್ಕೆ ಇದೊಂದು ಜೀವಂತ ಉದಾಹರಣೆಯೆಂದರೆ ತಪ್ಪಾಗಲಾರದು. ಇಂತಹದ್ದೊಂದು ಚಮತ್ಕಾರಿ, ವಿಸ್ಮಯ ಹಾಗು ರಹಸ್ಯಮಯ ದೇವಸ್ಥಾನ ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯ ಬೋಲಾಯಿ ಗ್ರಾಮದಲ್ಲಿನ ಹನುಮನ ದೇವಸ್ಥಾನದಲ್ಲಿ ನಮಗೆ ನೋಡಲು ಸಿಗುತ್ತದೆ. ಜನರ ನಂಬಿಕೆಯ ಪ್ರಕಾರ ಈ ದೇವಸ್ಥಾನ ಸಾಕಷ್ಟು ಚಮತ್ಕಾರಗಳನ್ನ ಸೃಷ್ಟಿಸುವ ಹಾಗು ಹಲವಾರು ರಹಸ್ಯಗಳನ್ನ ತನ್ನ ಒಡಲಲ್ಲಿಟ್ಟುಕೊಂಡಿರುವ ಸ್ಥಳವಾಗಿದೆ.

ಸ್ಥಳೀಯ ಜನರ ಪ್ರಕಾರ ಕೆಲ ವರ್ಷಗಳ ಹಿಂದೆ ಇದೇ ಜಾಗದಲ್ಲಿ ಎರಡು ಗೂಡ್ಸ್ ಟ್ರೇನ್ ಗಳು ಮುಖಾಮುಖಿಯಾಗಿ ಡಿಕ್ಕಿಯಾಗಿ ಭಾರೀ ಅವಘಡವೇ ಆಗಿಬಿಟ್ಟಿತ್ತು, ಇಂತಹದ್ದೊಂದು ಅನಾಹುತದ ಬಗ್ಗೆ ಎರಡೂ ಟ್ರೇನ್ ಗಳ ಚಾಲಕರಿಗೆ ಮೊದಲೇ ಸಣ್ಣ ಅನುಮಾನ ಉಂಟಾಗಿತ್ತು. ಇದೇ ಕಾರಣದಿಂದ ಎರಡೂ ಟ್ರೇನ್ ಗಳ ಸ್ಪೀಡ್ ಕಡಿಮೆ ಮಾಡಿದ್ದ ಕಾರಣದಿಂದ ಎರಡೂ ಟ್ರೇನ್ ಗಳು ಡಿಕ್ಕಿಯಾದರೂ ಯಾವ ಪ್ರಾಣಹಾನಿಯೂ ಆಗಿರಲಿಲ್ಲ.

ಶ್ರೀ ಸಿದ್ಧವೀರ ಖೇಡಾಪತಿ ಹನುಮಾನ ಮಂದಿರ ರತ್ಲಾಮ್ ಹಾಗು ಭೋಪಾಲ್ ರೇಲ್ವೆ ಸ್ಟೇಷನ್ನಿನ ನಡುವೆ ಬೋಲಾಯಿ ಸ್ಟೇಷನ್ನಿನಿಂದ ಒಂದು ಕಿಲೋಮೀಟರ್ ದೂರದಲ್ಲಿದೆ. ಮಂದಿರದ ಅರ್ಚಕ ಪಂಡಿತಗ ನಾರಾಯಣಪ್ರಸಾಧ ಉಪಾಧ್ಯಾಯರು ಹೇಳುವಂತೆ ಈ ದೇವಸ್ಥಾನ ಹತ್ತಿರತ್ತಿರ 600 ವರ್ಷಗಳಷ್ಟು ಪುರಾತನವಾಗಿದೆ. ಈ ದೇವಸ್ಥಾನದಲ್ಲಿನ ಹನುಮಾನ ಪ್ರತಿಮೆಯ ಪಕ್ಕದಲ್ಲೇ ಶ್ರೀ ಸಿದ್ಧಿ ವಿನಾಯಕ ಗಣೇಶನ ಮೂರ್ತಿಯೂ ಇದೆ‌. ಆಂಜನೇಯ ಹಾಗು ಗಣೇಶ ಇಬ್ಬರೂ ಒಂದೇ ಜಾಗದಲ್ಲಿ ವಿರಾಜಮಾನರಾಗಿರುವ ಈ ಸ್ಥಳ ಅತ್ಯಂತ ಪವಿತ್ರ, ಶುಭ ಹಾಗು ಫಲಪ್ರದ ಜಾಗವೆಂದೇ ಹೇಳಲಾಗುತ್ತದೆ.

ಮಾನ್ಯತೆಗಳ ಪ್ರಕಾರ ಈ ದೇವಸ್ಥಾನ ಭವಿಷ್ಯದಲ್ಲಾಗುವ ಘಟನೆಗಳ ಬಗ್ಗೆ ಮೊದಲೇ ಸೂಚನೆ ನೀಡುವ ಅದ್ಭುತ ಶಕ್ತಿಯನ್ನ ಚಮತ್ಕಾರವನ್ನ ಹೊಂದಿದೆ‌. ಈ ದೇವಸ್ಥಾನ ಹಲವಾರು ಚಮತ್ಕಾರಗಳು, ರಹಸ್ಯಗಳಿಂದ ಕೂಡಿದೆ‌. ಈ ಮಂದಿರದ ಮತ್ತೊಂದು ರೋಚಕ, ಚಮತ್ಕಾರಿ ವಿಷಯವೇನೆಂದರೆ ಈ ಮಂದಿರದ ಎದುರಿನಿಂದ ಯಾವುದೇ ಟ್ರೇನ್ ಗಳೂ ಚಲಿಸುತ್ತಿದ್ದರೂ ಆ ಟ್ರೇನ್ ಗಳ ಸ್ಪೀಡ್ ತನ್ನಿಂತಾನಾಗಿಯೇ ಕಡಿಮೆಯಾಗಿಬಿಡುತ್ತೆ.

ದೇವಸ್ಥಾನದ ಅರ್ಚಕರಾದ ಉಪಾಧ್ಯಾಯರು ಹೇಳುವ ಪ್ರಕಾರ ಒಮ್ಮೆ ಟ್ರೇನಿನ ಲೋಕೋ ಪೈಲಟ್ ಇವರ ಜೊತೆ ಮಾತನಾಡುತ್ತ ಹೀಗೇ ಹೇಳಿದ್ದರಂತೆ “ದೇವಸ್ಥಾನದ ಬಳಿ ಟ್ರೇನ್ ಬಂದ ತಕ್ಷಣ ಯಾರೋ ತಮ್ಮನ್ನ ಟ್ರೇನ್ ನಿಲ್ಲಿಸುವಂತೆ ಹಾಗು ಸ್ಪೀಡ್ ಕಡಿಮೆ ಮಾಡುವಂತೆ ಹೇಳಿದಂತೆ ಭಾಸವಾಗುತ್ತದೆ” ಆಗ ತಾವು ಅನಿವಾರ್ಯವಾಗಿ ತಮಗೇ ತಿಳಿಯದಂತೆ ಟ್ರೇನ್ ಸ್ಪೀಡ್ ಕಡಿಮೆ ಮಾಡಿಬಿಡುತ್ತೇವೆ ಎಂದಿದ್ದರಂತೆ.

ಒಂದು ವೇಳೆ ಯಾವುದಾದರೂ ಟ್ರೇನ್ ಡ್ರೈವರ್ ಇದನ್ನ ಧಕ್ಕರಿಸಿ ಸ್ಪೀಡ್ ಕಡಿಮೆ ಮಾಡದೇ ಹೋದಲ್ಲಿ ಆಟೋಮೆಟಿಕಲಿ ಟ್ರೇನ್ ಸ್ಪೀಡ್ ಯಾವುದೇ ಬ್ರೇಕ್ ಹಾಕದೆಯೇ ತನ್ನಿಂತಾನೆ ಕಡಿಮೆಯಾಗಿಬಿಡುತ್ತದೆ. ಹೀಗಾಗೋದಕ್ಕೆ ಕಾರಣವಾದರೂ ಏನಿರಬಹುದೆಂದು ದೇವಸ್ಥಾನದ ಅರ್ಚಕರು ಮತ್ತೊಬ್ಬ ಲೋಕೋ ಪೈಲಟ್ ಗೆ ಕೇಳಿದಾಗ ಆತ ಹೇಳಿದ್ದು ಹೀಗೆ,

“ಅಂದು ನಾನು ಟ್ರೇನ್ ಡ್ರೈವ್ ಮಾಡುತ್ತಿದ್ದೆ, ನನಗೆ ಟ್ರೇನ್ ಸ್ಪೀಡ್ ಕಡಿಮೆ ಮಾಡು ಅಂತ ಯಾರೋ ಹೇಳಿದ ಹಾಗೆ ಸೂಚಿಸಿದ ಹಾಗೆ ಭಾಸವಾಗುತ್ತಿತ್ತು, ಆದರೂ ನಾನೂ ಸ್ಪೀಡ್ ಕಡಿಮೆ ಮಾಡಿರಲಿಲ್ಲ. ಆಗಲೇ ನಡೆದು ಹೋಯ್ತು ಎರಡು ಟ್ರೇನ್ ಗಳ‌ ಮುಖಾಮುಖಿ ಡಿಕ್ಕಿಯಾಗೇ ಬಿಟ್ಟವು. ಆದರೆ ಮೊದಲೇ ನನಗೆ ಮುನ್ಸೂಚನೆಯನ್ನ ಯಾರೋ ಕೊಟ್ಟಿದ್ದರಿಂದ ಅವಘಡ ಸಂಭವಿಸಿದರೂ ಯಾವ ಪ್ರಾಣ ಹಾನಿಯೂ ಆಗಲಿಲ್ಲ” ಎಂದಿದ್ದರು.

ಈ ದೇವಸ್ಥಾನದ ನಂಬಿಕೆ ಹಾಗು ಮಾನ್ಯತೆಗಳ ಪ್ರಕಾರ ಇಲ್ಲಿಗೆ ಬಂದು ತಮ್ಮ ಕಷ್ಟ ಕಾರ್ಪಣ್ಯಗಳನ್ನ ಬೇಡಿಕೊಂಡರೆ ಎಲ್ಲ ಸಂಕಷ್ಟಗಳೂ ಪರಿಹಾರವಾಗುತ್ತವೆಯಂತೆ. ಈ ದೇವಸ್ಥಾನಕ್ಕರ ಶನಿವಾರ, ಮಂಗಳವಾರ ಹಾಗು ಬುಧವಾರದಂದು ದೂರ ದೂರದೂರಿನಿಂದ ಭಕ್ತರ ದಂಡೇ ಹರಿದು ಬರುತ್ತದೆ. ಆದರೆ ಈ ಜಾಗದ ಹತ್ತಿರ ಬಂದ ತಲ್ಷಣವೇ ಬ್ರೇಕ್ ಹಾಕದೆಯೇ ಟ್ರೇನಿನ ಸ್ಪೀಡ್ ಕಡಿಮೆಯಾಗೋದು ಯಾಕೆ? ತನ್ನಿಂತಾನೆ ಬ್ರೇಕ್ ಹಾಕೋದಾದರೂ ಯಾರು? ಅನ್ನೋದರ ಕುರಿತಾಗಿ ಹಲವು ಬಾರಿ ಪ್ರಯತ್ನ ಪಟ್ಟರೂ ಆ ರಹಸ್ಯವನ್ನ ಭೇದುಸಲೂ ಯಾರಿಂದಲೂ ಸಾಧ್ಯವಾಗಿಲ್ಲ.

– Vinod Hindu Nationalist

Leave a Reply

Your email address will not be published. Required fields are marked *

error: Content is protected !!