ಮುಸಲ್ಮಾನರಿಗೆ ಮತ್ತೆ ಬಿಗ್ ಶಾಕ್.! ಯೋಗಿ ಸರಕಾರ ತೆಗೆದುಕೊಂಡ ಆ ದಿಟ್ಟ ನಿರ್ಧಾರವೇನು ಗೊತ್ತಾ..?

ರಾಜ್ಯ ಸರ್ಕಾರಿ ಶಾಲೆಗಳಿಗೆ 4000 ಉರ್ದು ಶಿಕ್ಷಕರ ನೇಮಕವನ್ನು ಉತ್ತರ ಪ್ರದೇಶ ಸರ್ಕಾರ ರದ್ದುಪಡಿಸಿದೆ. ಮೂಲ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪ್ರಭಾತ್ ಕುಮಾರ್ ಅವರ ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಸಾಕಷ್ಟು ಸಂಖ್ಯೆಯ ಉರ್ದು ಶಿಕ್ಷಕರಿದ್ದಾರೆ ಎಂದು ರಾಜ್ಯ ಸರ್ಕಾರ ಹೇಳಿದ್ದು ಹಾಗಾಗಿ ಹೊಸ ಶಿಕ್ಷಕರ ನೇಮಕಾತಿಯನ್ನು ಸ್ಥಗಿತಗೊಳಿಸಿದ್ದಾರೆ ಎನ್ನಲಾಗಿದೆ.

ಅಖಿಲೇಶ್ ಯಾದವ್ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರ 4000ಕ್ಕೂ ಹೆಚ್ಚಿನ ಶಿಕ್ಷಕರನ್ನು ನೇಮಕ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿತ್ತು. ಅಪ್ಲಿಕೇಶನ್ ಪ್ರಕ್ರಿಯೆಯನ್ನು ಡಿಸೆಂಬರ್ 2016 ರಲ್ಲಿ ಪ್ರಾರಂಭಿಸಿದ್ದು, ಈ ಸಮಾಲೋಚನೆ ಮಾರ್ಚ್ 2017 ಕ್ಕೆ ನಿಗದಿಯಾಗಿದೆ.

ಆದರೇ ಇದೀಗ ಬಂದ ಯೋಗಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಉತ್ತರ ಪ್ರದೇಶ ಮೂಲ ಶಿಕ್ಷಣ ಮಂಡಳಿ ಅಥವಾ ಉತ್ತರ ಪ್ರದೇಶದ ಮೂಲ ಶಿಕ್ಷಾ ಪರಿಷತ್ ವಿರುದ್ಧ ಹೈಕೋರ್ಟ್ ನಲ್ಲಿ ಅಭ್ಯರ್ಥಿಗಳು ಪ್ರಕರಣ ದಾಖಲಿಸಿದ್ದಾರೆ.

ನ್ಯಾಯಾಲಯವು ಅಭ್ಯರ್ಥಿಗಳ ಪರವಾಗಿ ತೀರ್ಪು ನೀಡಿತು ಮತ್ತು ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸರಕಾರವನ್ನು ಕೇಳಿತು. ಹೀಗಿದ್ದರೂ, ರಾಜ್ಯ ಸರ್ಕಾರ ಆದೇಶದ ವಿರುದ್ಧ ವಿಮರ್ಶೆ ಅರ್ಜಿಯನ್ನು ಸಲ್ಲಿಸಿದೆ.

ಅದೇನೆ ಇರಲಿ ಒಟ್ಟಿನಲ್ಲಿ ರಾಷ್ಟ್ರೀಯ ಭಾಷೆ ಹಿಂದಿಗೆ ಹೆಚ್ಚಿನ ಆದ್ಯತೆ ನೀಡಿದ ಯೋಗಿ ಸರಕಾರ ಉತ್ತರ ಪ್ರದೇಶದಲ್ಲಿ ಉರ್ದು ಹೇರಿಕೆ ಜಾಸ್ತಿ ಬೇಡ ಎಂಬ ತೀರ್ಮಾನಕ್ಕೆ ಮುಂದಾಗಿದೆ ಎಂದು ಕಂಡುಬರುತ್ತಿದೆ. ಯೋಗಿಜಿಯ ಈ ನಿರ್ಭಂಧ ಹಲವು ಅನುಮಾನಗಳಿಗೆ ಎಡೆಮಾಡಿದ್ದು ಮುಸ್ಲಿಮರ ವಿರೋಧಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಚರ್ಚೆಗಳಿಗೆ ಕಾರಣವಾಗಿದೆ.

-Team Google Guru

Leave a Reply

Your e-mail address will not be published. Required fields are marked *

error: Content is protected !!