ಮೋದಿ ಪ್ರಮಾಣವಚನ ಸ್ವಿಕರಿಸುವ ಮುಂಚೆಯೇ ವಿಜಯ್ ಮಲ್ಯಗೆ ಭಾರೀ ಸಂಕಷ್ಟ

ದೇಶದಲ್ಲೆ ಶ್ರೀಮಂತ ಎನಿಸಿಕೊಂಡಿದ್ದ ಮಧ್ಯದ ದೊರೆ ವಿಜಯ್ ಮಲ್ಯ ಸಾಲದ ಸುಳಿಯಲ್ಲಿ ಸಿಕ್ಕು ಒದ್ದಾಡುವ ವಿಷಯ ಭಾರತದಲ್ಲಷ್ಟೆ ಅಲ್ಲ ಇಡೀ ವಿಶ್ವದ ತುಂಬೆಲ್ಲಾ ಸುದ್ದಿಯಾಗಿತ್ತು, ಮಲ್ಯ ಭಾರತದಲ್ಲಿ ಅಷ್ಟೇ ಅಲ್ಲ ವಿದೇಶದಲ್ಲಿಯೂ ಕೂಡ ಸಂಕಷ್ಟದ ಸುಳಿಯಲ್ಲಿ ಸಿಕ್ಕು ಒದ್ದಾಡುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಹೇಳಬಹುದು.

ಭಾರತ ಬಿಟ್ಟು ಬ್ರಿಟನ್‌ಗೆ ಓಡಿ ಹೋಗಿದ್ದ ಭಾರತದ ಉದ್ಯಮಿ ವಿಜಯ್‌ ಮಲ್ಯ ಅವರಿಗೆ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಲ್ಯ ವಿರುದ್ಧದ ಪ್ರಕರಣವೊಂದರಲ್ಲಿ ಡಿಯಾಜಿಯೊಗೆ ಬ್ರಿಟನ್‌ ಹೈಕೋರ್ಟ್‌ನಲ್ಲಿ ಗೆಲುವಾಗಿದೆ. ಕೋರ್ಟ್‌ ತೀರ್ಪಿನ ಅನ್ವಯ ಮಲ್ಯ ಅವರು ಡಿಯಾಜಿಯೊಗೆ 13.5 ಕೋಟಿ ಡಾಲರ್‌ ಅಂದರೇ ಸುಮಾರು 945ಕೋಟಿ ರೂಪಾಯಿ ಪರಿಹಾರವನ್ನು ಪಾವತಿಸಬೇಕಾಗಿದೆ. 

ಮಲ್ಯ ಒಡೆತನದ ಯುಎಸ್‌ಎಲ್ ಯುನೈಟೆಡ್‌ ಸ್ಪಿರಿಟ್ಸ್‌ ಲಿಮಿಟೆಡ್‌ ಅನ್ನು ಸ್ವಾದೀನ ಪಡಿಸಿಕೊಳ್ಳುವ ಸಂದರ್ಭದಲ್ಲಿ ಆಗಿದ್ದ ಒಪ್ಪಂದದಂತೆ ಡಿಯಾಜಿಯೊಗೆ ಮಲ್ಯ ಅವರು 13.5 ಕೋಟಿ ಡಾಲರ್‌ ಪಾವತಿಸಬೇಕು ಎಂದು ಲಂಡನ್ ಕೋರ್ಟ್ ತಿಳಿಸಿದೆ.

ಬ್ರಿಟನ್‌ ಮೂಲದ ಡಿಯಾಜಿಯೊ ವಿಶ್ವದ ಅತಿದೊಡ್ಡ ಮದ್ಯ ತಯಾರಿಕಾ ಕಂಪನಿಯಾಗಿದ್ದು, ಅದು 2012ರಲ್ಲಿ ಯುನೈಟೆಡ್‌ ಸ್ಪಿರಿಟ್ಸ್‌ನ ಶೇ.54.78ರಷ್ಟು ಷೇರುಗಳನ್ನು 3 ಶತಕೋಟಿ ಡಾಲರ್‌ಗೆ ಖರೀದಿ ಮಾಡಿತ್ತು. ಈ ಸಂಬಂಧ ನಡೆದ ಕಾನೂನು ಸಮರದಲ್ಲಿ ಮಲ್ಯಗೆ ಹಿನ್ನಡೆಯಾಗಿದ್ದು, ಆ ಹಣವನ್ನು ಪಾವತಿಸುವಂತೆ ನ್ಯಾಯಮೂರ್ತಿ ರಾಬಿನ್‌ ನೋವೆಲ್ಸ್‌ ಆದೇಶಿಸಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಮಲ್ಯ ಕೋರ್ಟ್‌ನಲ್ಲಿ ಇರಲಿಲ್ಲ. 

ಈ ಹಿಂದೆ ಮೋದಿ ಆಡಳಿತಕ್ಕೆ ನಲುಗಿ ವಿಜಯ್ ಮಲ್ಯ ಕೂಡ ಸಾಲ ಮರುಪಾವತಿಗೆ ಒಪ್ಪಿಕೊಂಡಿದ್ದರು, ಕಳೆದ ಬಾರಿ ಪ್ರಧಾನಿಯಾದಾಗಿನಿಂದ ಮೆಹೂಲ್ ಚೌಕ್ಸಿ ವಿಜಯ್ ಮಲ್ಯರಂತಹ ಬ್ರಷ್ಟರನ್ನು ಮಟ್ಟಹಾಕುವಲ್ಲಿ ಮೋದಿ ಸರಕಾರ ಯಶಸ್ವಿಯಾಗಿದೆ ಎಂದು ಹೇಳಬಹುದು.

ಈಗಾಗಲೇ ಪ್ರಧಾನಿ ಮೋದಿ ಸರಕಾರದಲ್ಲಿ ಬ್ರಷ್ಟಾಚಾರವೆಸಗಿದ ಕ್ರಿಶ್ಚಿಯನ್ ಮಿಶೆಲ್ ಹಾಗೂ ವಿಜಯ್ ಮಲ್ಯ ಅವರಿಗೆ ತಕ್ಕ ಪಾಠ ಕಲಿಸಿದ್ದೂ ಮುಂಬರುವ ದಿನಗಳಲ್ಲಿ ಉಳಿದೆಲ್ಲ ಬ್ರಷ್ಟರಿಗೆ ಕಾನೂನಿನ ಮೂಲಕ ಶಿಕ್ಷಿಸಲು ತಯಾರಾಗಿದೆ ಎಂದು ಹೇಳಬಹುದು. ಅಂದುಕೊಂಡಂತೆ ಎಲ್ಲವೂ ನಡೆದು ಹೋದರೆ ದೊಡ್ಢ ದೊಡ್ಡ ಬ್ರಷ್ಟರಿಗೆ ಶಿಕ್ಷೆ ತಪ್ಪಿದ್ದಲ್ಲ.

-Team Google Guru

Leave a Reply

Your e-mail address will not be published. Required fields are marked *

error: Content is protected !!