ವಿಶ್ವದಾದ್ಯಂತ ಫೇಸ್‌ಬುಕ್ ವಾಟ್ಸಾಪ್ ಬಂದ್‌ಗೆ ಅಸಲಿ ಕಾರಣವೇನು ಗೊತ್ತಾ

ದೇಶದಲ್ಲೇ ಅತೀ ಹೆಚ್ಚು ಉಪಯೋಗಿಸಲಾದ ಸಾಮಾಜಿಕ ಜಾಲತಾಣಗಳೆಂದರೆ ಫೇಸ್ ಬುಕ್‌ ಮತ್ತು ವಾಟ್ಸಪ್‌ ಹಾಗೂ ಇನ್ಸ್ಟಾಗ್ರಾಮ್ ಹೌದು ಇಂದಿನ ಆಧುನಿಕ ಯುಗದಲ್ಲಿ ಒಂದು ಹೊತ್ತು ಊಟ ಮಾಡದ ವ್ಯಕ್ತಿಯನ್ನು ನಾವು ಗಮನಿಸಬಹುದು ಆದರೆ ಒಂದು ದಿನ ಸಾಮಾಜಿಕ ಜಾಲತಾಣದಿಂದ ದೂರವಿರುವ ವ್ಯಕ್ತಿಯನ್ನು ನೋಡಲು ಸಾಧ್ಯವೇ ಇಲ್ಲ.

ಇತ್ತಿಚಿನ ದಿನಗಳಲ್ಲಿ ನಮಗೆ ಉಸಿರಾಡುವ ಗಾಳಿ ಎಷ್ಟು ಮುಖ್ಯವೋ ಅದರಂತೆ ಸಾಮಾಜಿಕ ಜಾಲತಾಣಗಳು ಅಷ್ಟೇ ಮುಖ್ಯ ಎನ್ನುವಂತಾಗಿದೆ. ಇಂತಹ ಸಾಮಾಜಿಕ ಜಾಲತಾಣಗಳು ಒಂದು ದಿನವಲ್ಲ ಕೇವಲ ಸ್ವಲ್ಪ ಹೊತ್ತು ಸರಿಯಾಗಿ ಕಾರ್ಯ ನಿರ್ವಹಿಸದಿದ್ದಕ್ಕೆ ಅನೇಕ ಮಾತುಗಳು ಕೇಳಿಬಂದಿವೆ.

ಅತೀ ಹೆಚ್ಚು ಬಳಕೆಯಾಗುವ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ವಾಟ್ಸಾಪ್ ಅಪ್ಲಿಕೇಷನ್‌ಗಳು ನೆನ್ನೆ ಸಂಜೆಯಿಂದ ಸರಿಯಾದ ರೀತಿ ಕಾರ್ಯ ನಿರ್ವಹಿಸದ ಕಾರಣ ಇಡೀ ದೇಶದೆಲ್ಲೆಡೆ ಸಂಚಲನ ಮೂಡಿಸಿದೆ ಹೌದು ಕಳೆದ ರಾತ್ರಿ ಫೋಟೊ ಹಾಗೂ ವಿಡಿಯೋ ಡೌನ್‌ಲೋಡ್ ಆಗದೆ ಇರುವುದು, ಹಾಗೂ ಸ್ಟೇಟಸ್ ವೀಕ್ಷಣೆಯಲ್ಲಿ ತೊಂದರೆಯಾಗುವುದನ್ನು ಕಂಡ ದೇಶದ ಜನತೆ ವಾಟ್ಸಾಪ್ ಕಂಪನಿ ಬಂದಾಗಲಿದೆ ಎಂಬ ಸುದ್ದಿ ವೈರಲ್ ಆಗಿದೆ.

ಫೇಸ್‌ಬುಕ್ ಹಾಗೂ ವಾಟ್ಸಾಪ್ ಕಂಪನಿಯೂ ಒಂದೆ ಮಾಲಿಕತ್ವ ಹೊಂದಿದ್ದ ಕಾರಣ ಕಳೆದ ರಾತ್ರಿ ಸ್ಯಾಟಲೈಟ್‌ನ ತೊಂದರೆಯಿಂದಾಗಿ ವಿಶ್ವದಾದ್ಯಂತ ಸರ್ವರ್ ಡೌನ್‌ ಆಗಿ ಉಭಯ ಜಾಲತಾಣಗಳ ಸೇವೆಯಲ್ಲಿ ಅಸ್ತವ್ಯಸ್ತ ಹೊಂದಿದ್ದು ಬಳಕೆದಾರರಿಗೆ ತೊಂದರೆಯುಂಟು ಮಾಡಿದೆ.

ಖ್ಯಾತ ಸಾಮಾಜಿಕ ಜಾಲತಾಣ ಫೇಸ್ ಬುಕ್ ಸಮೂಹ ಸಂಸ್ಥೆಯ ಆ್ಯಪ್ ಗಳಾದ ಫೇಸ್ ಬುಕ್, ವಾಟ್ಸಪ್, ಇನ್ ಸ್ಟಾಗ್ರಾಮ್ ಗಳ ಸರ್ವರ್ ಗಳು ತಾಂತ್ರಿಕ ದೋಷದಿಂದ ಸರ್ವರ್ ಡೌನ್ ಆಗಿದ್ದು, ಬಳಕೆದಾರರಿಂದ ಈ ಕುರಿತಂತೆ ವ್ಯಾಪಕ ದೂರುಗಳು ಸಲ್ಲಿಸಿದ್ದಾರೆ.

ಈ ಆ್ಯಪ್ ಗಳಲ್ಲಿ ಫೋಟೊ ಅಪ್‌ಲೋಡ್‌, ಡೌನ್ ಲೋಡ್‌ನಂತಹ ಸೇವೆ ನಿಧಾನಗೊಂಡಿದ್ದು, ಆ್ಯಪ್ ಗಳ ಲೋಡಿಂಗ್ ಕೂಡ ತುಂಬಾ ನಿಧಾನವಾಗಿದೆ ಎಂದು ಟ್ವಿಟರ್ ನಲ್ಲಿ ಬಳಕೆದಾರರು ಕಂಪನಿ ವಿರುದ್ಧ ದೂರಿದ್ದಾರೆ. ಆ್ಯಪ್ ಗಳ ಸೇವೆ ವ್ಯತ್ಯಯವಾಗಿದ್ದು, ಇದಕ್ಕೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಕೇವಲ ಭಾರತ ಮಾತ್ರವಲ್ಲದೇ ಅಮೆರಿಕ, ಯೂರೋಪ್, ದಕ್ಷಿಣ ಅಮೆರಿಕ ಮತ್ತು ಜಪಾನ್ ದೇಶಗಲ್ಲಿ ಈ ಸಮಸ್ಯೆ ಕಂಡು ಬಂದಿದೆ ಎಂದು ಫೇಸ್ ಬುಕ್ ಅಧಿಕಾರಿಗಳು ಮಾಹಿತಿ ನೀಡಿದ್ದು, ತಾಂತ್ರಿಕ ದೋಷ ಸರಿಪಡಿಸುವ ಕಾರ್ಯ ಭರದಿಂದ ಸಾಗಿದೆ ಎಂದು ಹೇಳಿದ್ದಾರೆ.

ಇನ್ನು ಸುಳ್ಳು ಸುದ್ಧಿ ಹಬ್ಬಿಸುವುದರಲ್ಲಿ ಭಾರತೀಯರು ಒಂದು ಹೆಜ್ಜೆ ಮುಂದೆ ಎಂದು ಹೇಳಬಹುದು, ಯಾವುದೇ ಮಾಹಿತಿ ಬಂದ ತಕ್ಷಣ ಅದನ್ನು ವಿಚಾರಣೆ ಮಾಡದೆ ಮುಂದಕ್ಕೆ ಕಳಿಸುವುದು ಭಾರತೀಯರ ದೊಡ್ಡ ವೀಕ್ನೆಸ್ ಎಂದೆ ಹೇಳಬಹುದು ಯಾಕೆಂದರೆ ಒಂದುಕಡೆ ಪೇಸ್ ಬುಕ್ ಮತ್ತು ವಾಟ್ಸಪ್ ಗಳ ಸೇವೆಯಲ್ಲಿ ವ್ಯತ್ಯಯವಾಗುತ್ತಲೇ ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರು.

ಕೆಲ ಕಿಡಿಗೇಡಿಗಳು ಹಾಗೂ ಮೋದಿ ವಿರೊಧಿಗಳಂತೂ ಹಲವಾರು ಸುಳ್ಳು ಸಂದೇಶ ರವಾನೆ ಮಾಡುವ ಮೂಲಕ ಮೋದಿ ಸರ್ಕಾರ ಫೇಸ್ ಬುಕ್ ಮತ್ತು ವಾಟ್ಸಪ್ ಜಾಲತಾಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹೀಗೆ ಮಾಡಿದ್ದಾರೆ ಎಂಬ ಸುಳ್ಳು ಸಂದೇಶ ಹರಡಿಸುತ್ತಿದ್ದರು. ಆದರೆ ಇದಕ್ಕೂ ಮೋದಿ ಸರಕಾರಕ್ಕೂ ಯಾವುದೇ ಸಂಬಂಧವಿಲ್ಲ ಇದು ಕೇವಲ ಕಂಪನಿಯ ತಾಂತ್ರಿಕ ದೋಷ ಎಂದು ದೃಢಪಟ್ಟಿದೆ.

-Team Google Guru

Leave a Reply

Your e-mail address will not be published. Required fields are marked *

error: Content is protected !!