ಭಿ’ಕಾರಿ PAK ಗೆ ಬ’ಗ್ಗಿಸಿ ಗು’ಮ್ಮಿದ ವರ್ಲ್ಡ್ ಬ್ಯಾಂಕ್ ಕೈಗೊಂಡ ನಿರ್ಣಯವೇನು ಗೊತ್ತಾ.?

ಕಂಗಾಲಾಗಿರುವ ಪಾಕಿಸ್ತಾನದ ಮೇಲೆ ಇದೀಗ ಮತ್ತೊಂದು ತೂಗುಗತ್ತಿ ಹಾರಾಡುತ್ತಿದೆ. ವರ್ಲ್ಡ್ ಬ್ಯಾಂಕ್‌ಗೆ ಸಂಬಂಧಿಸಿದ ನ್ಯಾಯಾಧಿಕರಣವಾದ ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಸೆಟಲ್ಮೆಂಟ್ ಆಫ್ ಇನ್ವೆಸ್ಟ್‌ಮೆಂಟ್ ಡಿಸ್ಪ್ಯೂಟ್ಸ್ (ICSID) ಬಲೂಚಿಸ್ತಾನದಲ್ಲಿರುವ ರೆಕೋ ಡಿಕ್ ಖದಾನ್ ಒಪ್ಪಂದವನ್ನ ರದ್ದು ಮಾಡಿದ್ದಕ್ಕಾಗಿ ಪಾಕಿಸ್ತಾನದ ಮೇಲೆ 5 ಅರಬ್ 97 ಕೋಟಿ ಡಾಲರ್ ದಂಡವನ್ನ ವಿಧಿಸಿದೆ, ಇದರಲ್ಲಿ 4.08 ಅರಬ್ ಡಾಲರ್ ಹಾಗು 1.87 ಅರಬ್ ಡಾಲರ್ ಬಡ್ಡಿಯೂ ಸೇರಿದೆ.

ಈ ದಂಡ ಪಾಕಿಸ್ತಾನಕ್ಕೆ ಟೆಥಯಾನ್ ಕಾಪರ್ ಕಂಪೆನಿ (TCC) ಗೆ ತೀರಿಸಬೇಕಿದೆ. ಗಂಭೀರ ಆರ್ಥಿಕ ಸಂಕಟದಿಂದ ಕಂಗಾಲಾಗಿರುವ ಪಾಕಿಸ್ತಾನಕ್ಕೆ ಈ ದಂಡ ಮತ್ತೊಂದು ಬಿಗ್ ಶಾಕ್ ಕೊಟ್ಟಿದೆ. ಅದೇ ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಈ ಕುರಿತು ಮಾಹಿತಿ ಪಡೆಯಲು ಹಾಗು ಈ ಹಣ ಈ ಮಟ್ಟಕ್ಕೆ ಹೇಗೆ ತಲುಪಿತು ಎಂದು ತಿಳಿಯಲು ಆಯೋಗವನ್ನ ರಚನೆ ಮಾಡಿದ್ದಾನೆ. ಪಾಕಿಸ್ತಾನ ಸರ್ಕಾರ ಈ ಕುರಿತು ತಾನು ಈ ನಿರ್ಧಾರದ ವಿರುದ್ಧ ICSID ಸಮೇತ ಸಂಬಂಧಿತ ನ್ಯಾಯಾಂಗ ವೇದಿಕೆಗಳ ಮೇಲೆ ಅಪೀಲ್ ಮಾಡುವಂತೆ ಚಿಂತನೆ ನಡೆಸಿದೆ. 

ಪಾಕಿಸ್ತಾನದ ಸುಪ್ರೀಂಕೋರ್ಟ್ ಈ ಒಪ್ಪಂದದಲ್ಲಿ ಗೋಲಮಾಲ್ ನಡೆದಿದೆ ಎಂದು ಇದನ್ನ ರದ್ದುಗೊಳಿಸಿದ ಬಳಿಕ ಟೆಯಥಾನ್ ಕಾಪರ್ ಕಂಪೆನಿ (TCC) ಗೆ 2012 ರಲ್ಲಿ ವರ್ಲ್ಡ್ ಬ್ಯಾಂಕಿನ ICSID ಯ ಮುಂದೆ 11.43 ಅರಬ್ ಡಾಲರ್ ಇದೆ ಎಂದು ಪಾಕಿಸ್ತಾನದ ವಿರುದ್ಧ ಕೇಸ್ ದಾಖಲಿಸಿತ್ತು. 2017 ರಲ್ಲಿ ICSID ಟಿಸಿಸಿ ಯ ವಾದ ನಿಜ ಎಂದು ಒಪ್ಪಿಕೊಂಡಿತ್ತು ಆದರೆ ದಂಡದ ಹಣ ಎಷ್ಟು ಎಂಬುದನ್ನ ನಿರ್ಧರಿಸಿರಲಿಲ್ಲ.

ನ್ಯಾಯಾಧೀಕರಣವು ಕಳೆದ ಶುಕ್ರವಾರ ಅಂದರೆ ಜುಲೈ 12 ರಂದು ಈ ದಂಡದ ಮೊತ್ತವನ್ನ ನಿರ್ಧರಿಸುತ್ತ ತನ್ನ ತೀರ್ಪನ್ನ 100 ಪುಟಗಳಲ್ಲಿ ಪಾಕಿಸ್ತಾನಕ್ಕೆ ಸಲ್ಲಿಸಿದೆ. ಪಾಕಿಸ್ತಾನದ ಮೇಲೆ ಹೇರಿರುವ ಈ ದಂಡ ICSID ವತಿಯಿಂದ ಅದರ ಇತಿಹಾಸದಲ್ಲೇ ವಿಧಿಸಿದ ಅತ್ಯಧಿಕ ದಂಡವೆಂದು ಹೇಳಲಾಗುತ್ತಿದೆ. TCC ಕಂಪೆನಿಯು ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ರೆಕೋ ಟಿಕ್ ನಲ್ಲಿ ಭಾರೀ ಪ್ರಮಾಣದಲ್ಲಿ ಚಿನ್ನದ ಗಣಿಯನ್ನ ಪತ್ತೆ ಮಾಡಿತ್ತು. ಕಂಪನಿ ಹೇಳುವಂತೆ ಈ ಪ್ರದೇಶದಲ್ಲಿ ಈವರೆಗೆ ಹತ್ತಿರತ್ತಿರ 22 ಕೋಟಿ ಡಾಲರ್ ಖರ್ಚು ಮಾಡಿದೆ.

ಆದರೆ ಸಡನ್ ಆಗಿ 2011 ರಲ್ಲಿ ಪಾಕಿಸ್ತಾನ ಸರ್ಕಾರ ಈ ಜಾಗದಲ್ಲಿ ಉತ್ಖನನ ನಡೆಸಲು ಈ ಕಂಪೆನಿಗೆ ಪರ್ಮಿಷನ್ ರದ್ದುಗೊಳಿಸಿತ್ತು. ಹಾಗು ಇದರ ವಿರುದ್ಧ ಕಂಪೆನಿ ಸಲ್ಲಿಸಿದ್ದ ಅರ್ಜಿಯನ್ನ ಸುಪ್ರೀಂಕೋರ್ಟ್‌ನ ಆಗಿನ ಮುಖ್ಯ ನ್ಯಾಯಾಧೀಶ ಇಫ್ತೆಖಾರ್ ಚೌಧರಿ ಈ ಒಪ್ಪಂದವನ್ನ ಇಲ್ಲೀಗಲ್ ಎಂದು ಅದನ್ನ ರದ್ದುಗೊಳಿಸಿತ್ತು.

– Team Google Guruu

Leave a Reply

Your e-mail address will not be published. Required fields are marked *

error: Content is protected !!