ಪ್ರಧಾನಿ ಮೋದಿಯವರ ಪ್ರಚಂಡ ಗೆಲುವಿಗೆ ವಿಶ್ವ ನಾಯಕರ ಪ್ರತಿಕ್ರಿಯೆ ಹೇಗಿದೆ ಗೊತ್ತಾ? ಇವರೆಲ್ಲಾ ಪ್ರಧಾನಿ ಮೋದಿ ಬಗ್ಗೆ ಹೇಳಿದ್ದೇನಂತ ಕೇಳಿ

ಲೋಕಸಭೆ ಚುನಾವಣೆ ಫಲಿತಾಂಶ ಹೊರ ಬರುತ್ತಿದ್ದು, ಮೋದಿ ನೇತೃತ್ವದ ಎನ್​ಡಿಎ ಒಕ್ಕೂಟ ಮತ್ತೆ ಆಡಳಿತದ ಚುಕ್ಕಾಣಿ ಹಿಡಿಯೋದು ಬಹುತೇಕ ಪಕ್ಕಾ ಆಗಿದೆ. ಎರಡನೇ ಬಾರಿ ಅಭೂತಪೂರ್ವ ಗೆಲುವಿನತ್ತ ಎನ್​ಡಿಎ ಮುನ್ನುಗ್ಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ದೇಶ-ವಿದೇಶಗಳಿಂದ ಗಣ್ಯರು ಶುಭಾಶಯ ಕೋರುತ್ತಿದ್ದಾರೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್ ಟೆಲಿಗ್ರಾಮ್ ಮೂಲಕ ಪ್ರಧಾನಿ ಮೋದಿಗೆ ಶುಭಾಶಯ ಕೋರಿದ್ದಾರೆ. ಮೋದಿಯವರ ಭರ್ಜರಿಯಾದ ಪ್ರಚಂಡ ಬಹುಮತ ಹಾಗು ಗೆಲುವಿಗೆ ಇದೀಗ ರಷ್ಯಾ ರಾಷ್ಟ್ರಪತಿ ವ್ಲಾದಿಮಿರ್‌‌ ಪುಟಿನ್ ಶುಭಾಷಯದ ಸಂದೇಶವನ್ನ ಕಳಿಸಿದ್ದಾರೆ. ವ್ಲಾದಿಮಿರ್‌‌ ಪುಟಿನ್ ರವರು ಮೋದಿಗೆ ಗೆಲುವಿನ ಶುಭಾಷಯ ಕೋರುತ್ತ ನರೇಂದ್ರ ಮೋದಿ ಕೇವಲ ಭಾರತದ ನಾಯಕ ಅಷ್ಟೇ ಅಲ್ಲ ಅವರೊಬ್ಬ ಗ್ಲೋಬಲ್ ಲೀಡರ್ ಎಂದಿದ್ದಾರೆ.

ಪುಟಿನ್ ರವರು ನರೇಂದ್ರ ಮೋದಿಯವರನ್ನ ವರ್ಲ್ಡ್ ಲೀಡರ್ ಎನ್ನುತ್ತ ಭಾರತದಲ್ಲಿ ಹೊಸ ಇತಿಹಾಸ ಸೃಷ್ಟಿಸಿರುವುದಕ್ಕೆ ಶುಭಾಷಯ ಕೋರಿದ್ದಾರೆ. ಮೋದಿಯವರ ಗೆಲುವಿನ ಬಗ್ಗೆ ಪುಟಿನ್ ಮುಂದೆ ಮಾತನಾಡುತ್ತ ಈ ಗೆಲುವು ಐತಿಹಾಸಿಕ ಜಯವಾಗಿದೆ ಹಾಗು ಮುಂಬರುವ ದಿನಗಳಲ್ಲಿ ರಷ್ಯಾ ಹಾಗು ಭಾರತದ ಸಂಬಂಧಗಳಲ್ಲಿ ಮತ್ತಷ್ಟು ವೃದ್ಧಿಯಾಗಲಿದೆ ಎಂದಿದ್ದಾರೆ.

ಭಾರತದ ಪರಮಾಪ್ತ ರಾಷ್ಟ್ರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಕೂಡ ಟ್ವೀಟ್ ಮಾಡಿ ನರೇಂದ್ರ ಮೋದಿಯವರಿಗೆ ಶುಭಾಷಯ ಕೋರಿದ್ದು ಇಸ್ರೇಲ್ ಹಾಗು ಭಾರತದ ನಡುವಿನ ಸಂಬಂಧ ಮತ್ತಷ್ಟು ಬಲಿಷ್ಟವಾಗಲಿದೆ ಎಂದಿದ್ದಾರೆ.

ಭೂತಾನ್ ರಾಜ ಜಿಗ್ಮೆ ಖೇಸರ್​ ನಾಮ್​ಗ್ಯೆಲ್​ ವಾಂಗ್​ಚ್ಯುಕ್​, ಫೋನ್​ ಮೂಲಕ ಪ್ರಧಾನಿ ಮೋದಿಗೆ ಶುಭಾಶಯ ಕೋರಿದ್ದಾರೆ. ಜಪಾನ್​ ಪ್ರಧಾನಿ ಶಿಂಜೋ ಅಬೆ, ಟೆಲಿಫೋನ್ ಮೂಲಕ ಪ್ರಧಾನಿ ಮೋದಿಗೆ ಶುಭಾಶಯ ಕೋರಿದ್ದಾರೆ. ಹಾಗೇ ಚೀನಾ ಅಧ್ಯಕ್ಷ ಕ್ಸಿ ಜಿನ್​ ​ಪಿಂಗ್​ ಸಹ ಪ್ರಧಾನಿ ಮೋದಿಗೆ ಶುಭಾಶಯ ಕೋರಿದ್ದಾರೆ.

ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಸಹ ಟ್ವೀಟ್​ ಮಾಡಿ ಶುಭಾಶಯ ಕೋರಿದ್ದಾರೆ. ಅಪ್ಘಾನ್ ಭಾರತದ ಜೊತೆಗಿನ ಸಹಕಾರ ಸಂಬಂಧವನ್ನ ವೃದ್ಧಿಸಲು ಬಯಸುತ್ತದೆ ಎಂದಿದ್ದಾರೆ.

ನೇಪಾಳ​ ಪ್ರಧಾನಿ ಕೆ.ಪಿ.ಶರ್ಮಾ ಒಲಿ, ಪ್ರಧಾನಿ ಮೋದಿಗೆ ಟ್ವೀಟ್​ ಮೂಲಕ ಶುಭಾಶಯ ಕೋರಿದ್ದಾರೆ.

Leave a Reply

Your e-mail address will not be published. Required fields are marked *

You may have missed

error: Content is protected !!