ದೇಶ ದ್ರೋಹಿಗಳ ವಿರುದ್ಧ ಹೊಸ ಕಾನೂನು ಜಾರಿಗೆ ತಂದ ಯೋಗಿ ಆದಿತ್ಯನಾಥ್

ಕಳೆದ ಕೆಲವು ವರ್ಷಗಳಿಂದ ಶೈಕ್ಷಣಿಕ ಜೀವನದ ಹೆಸರಿನಲ್ಲಿ ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ ದೇಶ ವಿರೋಧದ ಕೆಲಸ ಇತ್ತಿಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ ಆದರೆ ಎಂದು ಹೇಳಬಹುದು, ಹೌದು ಭಾರತ ಮಾತೆಯ ಅನ್ನ ತಿಂದು ದ್ರೋಹ ಬಗೆಯುವವ ಕುನ್ನಿಗಳು ಸಹ ಈ ದೇಶದಲ್ಲಿ ಇರುವುದು ನಮ್ಮ ದೌರ್ಭಾಗ್ಯವೇ ಸರಿ.

ಈ ಹಿಂದೆ ಕಳ್ಳರಿಗೆ, ಕೊಲೆಗಾರರಿಗೆ, ಅತ್ಯಾಚಾರಿಗಳಿಗೆ ತಕ್ಕ ಪಾಠ ಕಲಿಸಲು ಹೊಸ ರಕ್ಷಣಾ ಪಡೆ ತಯಾರಿಸುವ ಮೂಲಕ ಉತ್ತರ ಪ್ರದೇಶವನ್ನು ಸುರಕ್ಷಿತ ಹಾಗೂ ನಿರ್ಭಯ ಪ್ರದೇಶವನ್ನಾಗಿ ಮಾಡಿದ ಯೋಗಿ ಆದಿತ್ಯನಾಥರು ಇದೀಗ ದೇಶದ್ರೋಹಿಗಳಿಗೆ ಚಳಿ ಬಿಡಿಸಲು ಮುಂದಾಗಿದ್ದಾರೆ ಎನ್ನಬಹುದು.

ಉತ್ತರ ಪ್ರದೇಶದ ವಿಶ್ವವಿದ್ಯಾಲಯದಲ್ಲಿ ಕೇಳಿ ಬರುತ್ತಿರುವ ದೇಶದ್ರೋಹದ ಕೂಗಿನ ಬಾಯಿ ಬಂದ್ ಮಾಡಲು ಇದೀಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಮುಂದಾಗಿದ್ದು ಇದಕ್ಕಾಗಿ ಹೊಸ ಕಾನೂನು ರೂಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಭಾರತದಲ್ಲಿ ಜನಸಿ ಭಾರತಕ್ಕೆ ದ್ರೋಹ ಎಸಗುವ ದೇಶದ್ರೋಹಿಗಳ ವಿರುದ್ದ ಯೋಗಿ ಆದಿತ್ಯನಾಥರು ಖಡಕ್ ತೀರ್ಮಾನಕ್ಕೆ ಮುಂದಾಗಿದ್ದು “ಅಂಬ್ರೆಲಾ ಆ್ಯಕ್ಟ್” ಎಂಬ ಹೊಸ ಕಾನೂನು ಜಾರಿಗೆ ತಂದಿದ್ದಾರೆ. ಇಂತಹ ಕಠಿಣ ಯೋಜನೆಯನ್ನು ಯೋಗಿ ಸರಕಾರ ಮಾತ್ರ ತೆಗೆದುಕೊಳ್ಳಲು ಸಾಧ್ಯ ಎನ್ನಬಹುದು.

ಯೋಗಿ ಸರಕಾರ ಅಂಬ್ರೆಲಾ ಆ್ಯಕ್ಟ್ ಅನ್ನು ಈಗಾಗಲೇ ಜಾರಿಗೆ ತರಲು ಮುಂದಾಗಿದ್ದು ಇದನ್ನು ವಿಧಾನಸಭೆಯಲ್ಲಿ ಮಂಡಿಸಿ ರಾಜ್ಯಪಾಲರ ಅನುಮತಿಗಾಗಿ ಕಳುಹಿಸಿದ್ದಾರೆ ಎಂದು ಉತ್ತರ ಪ್ರದೇಶ ಸರಕಾರದ ಮೂಲಗಳು ತಿಳಿಸಿವೆ. ಉತ್ತರ ಪ್ರದೇಶದ ವಿಶ್ವವಿದ್ಯಾಲಯದಲ್ಲಿ ಭಾರತವನ್ನು ವಿರೋಧಿಸಿ ಅವಮಾನ ಮಾಡುವುದನ್ನು ತಡೆಗಟ್ಟಲು ಯೋಗಿ ಅಂಬ್ರೆಲಾ ಆ್ಯಕ್ಟ್ ನಂತಹ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗ್ತಿದೆ.

ಈ ಅಂಬ್ರೆಲಾ ಆ್ಯಕ್ಟ್ ಜಾರಿಯಾದ ನಂತರ ಉತ್ತರ ಪ್ರದೇಶದ ಎಲ್ಲಾ ವಿಶ್ವವಿದ್ಯಾಲಯಗಳು ತಾವು ದೇಶ ವಿರೋಧಿ ಚಟುವಟಿಕೆ ಮಾಡಲ್ಲ, ದೇಶ ವಿರೋಧಿ ಚಟುವಟಿಕೆಗಳಿಗೆ ಬೆಂಬಲ ನೀಡಲ್ಲ ಎಂದು ಲಿಖಿತ ರೂಪದಲ್ಲಿ ಬರೆದು ಕೊಡಬೇಕು. ಒಂದು ವೇಳೆ ದೇಶ ದ್ರೋಹಿ ಚಟುವಟಿಕೆ ಕಂಡು ಬಂದರೆ ತಕ್ಷಣ ಕಾನೂನು ಮೂಲಕ ತಪಾಸಣೆ ನಡೆಸಲು ಪೋಲಿಸರಿಗೆ ತಿಳಿಸಬೇಕು ಎಂದು ಯೋಗಿ ಸರಕಾರ ಕಟ್ಟೆಚ್ಚರ ವಹಿಸಿದೆ.

-Team Google Guru

Leave a Reply

Your e-mail address will not be published. Required fields are marked *

error: Content is protected !!