ಪ್ರಧಾನಿ ಮೋದಿಯಂತೆ ಖಡಕ್ ನಿರ್ಧಾರ ಕೈಗೊಂಡ ಯೋಗಿ ಆದಿತ್ಯನಾಥ್

ಉತ್ತರಪ್ರದೇಶದಲ್ಲಿ ಭ್ರಷ್ಟಾಚಾರ ಹಾಗು ಭ್ರಷ್ಟಾಚಾರಿಗಳ ಮೇಲೆ ಯೋಗಿ ಸರ್ಕಾರದ ಭರ್ಜರಿಯಾದ ದಾಳಿ ಜಾರಿಯಲ್ಲಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜ್ಯದ ಭ್ರಷ್ಟ ಅಧಿಕಾರಿಗಳಿಗೆ ಈ ಸರ್ಕಾರದಲ್ಲಿ ನಿಮ್ಮಂಥವರಿಗೆ ಸ್ಥಾನವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಮೋದಿ ಸರ್ಕಾರದ ಖಡಕ್ ನಿರ್ಧಾರಗಳನ್ನ ಅನುಸರಿಸಿ, ಯೋಗಿ ಸರ್ಕಾರವು ಈಗ ಭ್ರಷ್ಟ ಅಧಿಕಾರಿಗಳಿಗೆ ರಾಜೀನಾಮೆ ನೀಡುವಂತೆ ಸೂಚಿಸಬಹುದು ಎಂದು ಹೇಳಲಾಗುತ್ತಿದೆ.

ರಾಜೀನಾಮೆಗೆ ಸಂಬಂಧಿಸಿದ ಚಟುವಟಿಕೆಯಲ್ಲಿ ಭಾಗಿಯಾಗಿರುವ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ 27 ಅಧಿಕಾರಿಗಳ ಮೇಲೆ ಕೆಲ ದಿನಗಳ ಹಿಂದೆ ಮೋದಿ ಸರ್ಕಾರ ಒತ್ತಡ ಹೇರಿತ್ತು ಎಂಬುದು ನಿಮಗೆ ನೆನಪಿರಬಹುದು. ಸುದ್ದಿ ಮೂಲಗಳ ಪ್ರಕಾರ, ಯೋಗಿ ಸರ್ಕಾರ ಕೂಡ ಇದೇ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. 

ಗುರುವಾರದಂದು ಸಿಎಂ ಯೋಗಿ ಆದಿತ್ಯನಾಥರು ಸಚಿವಾಲಯದ ಆಡಳಿತ ಇಲಾಖೆಯ ಕಾರ್ಯಕ್ಷಮತೆ ವೈಖರಿಯ ಪರಿಶೀಲನೆಯನ್ನ ನಡೆಸುತ್ತಿದ್ದರು. ಸರ್ಕಾರದ ಬಲ್ಲ ಮೂಲಗಳ ಪ್ರಕಾರ ಯೋಗಿ ಆದಿತ್ಯನಾಥರು ಈ ಸಂದರ್ಭದಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಅವರು ಅಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳಿಗೆ ನಿರ್ದೇಶನ ನೀಡುತ್ತ ತಕ್ಷಣವೇ ಭ್ರಷ್ಟಾಚಾರದಲ್ಲಿ ಮುಳುಗಿರುವ ಅಧಿಕಾರಿಗಳ ಲಿಸ್ಟ್ ತಯಾರು ಮಾಡಿ, ಆ ಲಿಸ್ಟ್ ನಲ್ಲಿರುವ ಅಧಿಕಾರಿಗಳನ್ನ ಕೆಲಸದಿಂದ ಕಿತ್ತೆಸೆಯಿರಿ ಎಂದು ಆದೇಶ ನೀಡಿದ್ದಾರೆ.

ಇಷ್ಟೇ ಅಲ್ಲದೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡುತ್ತ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣಾತಿ ಕಠಿಣ ಕೈಗೊಳ್ಳುತ್ತ ಅವರಿಗೆ ಪ್ರಮೋಷನ್ ಆಗದಂತೆ ಮಾಡಿ ಎಂದು ತಿಳಿಸಿದ್ದಾರೆ. ಸುದ್ದಿ ಮಾಧ್ಯಮಗಳ ಮೂಲಗಳ ಪ್ರಕಾರ ಉತ್ತರಪ್ರದೇಶ ಸರ್ಕಾರವು ಇಂತಹ 30 ಅಧಿಕಾರಿಗಳ ಲಿಸ್ಟ್ ಈಗಾಗಲೇ ರೆಡಿ ಮಾಡಿಕೊಂಡಿದೆ ಹಾಗು ಅವರ ವಿರುದ್ಧ ಕ್ರಮ ಕೈಗೊಳ್ಳುವ ಕಾರ್ಯ ಶುರುವಾಗಿದೆ. ಇದರ ಹೊರತಾಗಿ ಮುಖ್ಯಮಂತ್ರಿಗಳು ತಮ್ಮ ಸರ್ಕಾರದ ಮೂವರು ಮಂತ್ರಿಗಳನ್ನ ಜನೆವರಿಯಲ್ಲಿ ಅರೆಸ್ಟ್ ಮಾಡಿರುವುದನ್ನೂ ಉಲ್ಲೇಖಿಸಿ ಅವರು ಕ್ಯಾಮರಾ ಮುಂದೆ ಲಂಚ ಪಡೆದಿದ್ದಕ್ಕಾಗಿ ಅವರ ವಿರುದ್ಧ ಕಾರ್ಯಾಚರಣೆ ನಡೆಸಿದ್ದಾಗಿ ತಿಳಿಸಿದ್ದಾರೆ‌. 

ಭ್ರಷ್ಟಾಚಾರದ ವಿರುದ್ಧ ನಮ್ಮ ಸರ್ಕಾರ ಜೀರೋ ಟಾಲರೆನ್ಸ್ ಹೊಂದಿದೆ ಎಂದು ಅವರು ಅಧಿಕಾರಿಗಳಿಎ ಚಾಟಿಯೇಟು ಬೀಸಿದ್ದಾರೆ. ಯೋಗಿ ಸರ್ಕಾರದ ಈ ಹೆಜ್ಜೆ ಸರ್ಕಾರಿ ಕಾರ್ಯನಿರ್ವಹಿಸುತ್ತಿರುವ ಭ್ರಷ್ಟ ಅಧಿಕಾರಿಗಳ ಎದೆಯಲ್ಲಂತೂ ನಡುಕ ಹುಟ್ಟಿಸಿರುವುದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಸಿಎಂ ಯೋಗಿ ಆದಿತ್ಯನಾಥ್ ಮುಂದೆ ಮಾತನಾಡುತ್ತ ವಿಧಾನ ಭವನ, ಸಚಿವಾಲಯದ ಎನೆಕ್ಸಿ ಹಾಗು ಇನ್ನಿತರ ಸರ್ಕಾರಿ ಭವನಗಳಿಗೆ ಬರುವ ಹೊರ ವ್ಯಕ್ತಿಗಳು ಮೊಬೈಲ್ ಫೋನ್ ತರುವುದರ ಅನುಮತಿಯನ್ನೂ ನೀಡಲಾಗುವುದಿಲ್ಲ. ಈ ಆದೇಶ ಮೊಬೈಲ್ ರೆಕಾರ್ಡಿಂಗ್ ಹಾಗು ಮೊಬೈಲ್‌ಗಳ ಉಪಯೋಗ ಸರ್ಕಾರಿ ಕಛೇರಿಗಳಲ್ಲಿ ನಡೆಯುತ್ತಿರುವ ವಿಚಾರ ಮಾಧ್ಯಮಗಳಿಂದ ತಿಳಿದು ಬಂದಿದೆ ಎಂದು ಅವರು ತಿಳಿಸಿದರು.

ನಿಮ್ಮ ಮಾಹಿತಿಗಾಗಿ ಇಲ್ಲಿ ತಿಳಿಸಬಯಸುವ ವಿಷಯವೇನೆಂದರೆ ಜೂನ್ 10 ರಂದು ಮೋದಿ ಸರ್ಕಾರದಿಂದ 12 ಉನ್ನತ ಮಟ್ಟದ ಇನ್‌ಕಮ್ ಟ್ಯಾಕ್ಸ್ ಅಧಿಕಾರಿಗಳಿಗೆ ರಾಜೀನಾಮೆ ನೀಡುವಂತೆ ಸೂಚಿಸಲಾಗಿತ್ತು. ಇದಷ್ಟೇ ಅಲ್ಲದೆ ಜೂನ್ 18 ರಂದು 15 ಕಸ್ಟಮ್ ಹಾಗು ಅಬಕಾರಿ ಇಲಾಖೆಯ ಅಧಿಕಾರಿಗಳಿಗೂ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿತ್ತು. ಮೋದಿ ಸರ್ಕಾರದ ಈ ದಿಟ್ಟ ಹೆಜ್ಜೆ ಭ್ರಷ್ಟಾಚಾರದ ವಿರುದ್ಧದ ಬ್ರಹ್ಮಾಸ್ತ್ರವೆಂದೆ ಹೇಳಲಾಗುತ್ತಿದ್ದು ಖುದ್ದು ವರಿಷ್ಠ ಅಧಿಕಾರಿಗಳೇ ಮೋದಿ ಸರ್ಕಾರದ ಈ ನಡೆಯನ್ನು ಶ್ಲಾಘಿಸುತ್ತಿದ್ದಾರೆ. ಇದೀಗ ಮೋದಿ ಸರ್ಕಾರದ ಖಡಕ್ ಕಾರ್ಯಾಚರಣೆಯನ್ನ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರೂ ಪಾಲಿಸುತ್ತಿದ್ದಾರೆ‌.

– Team Google Guruu

Leave a Reply

Your e-mail address will not be published. Required fields are marked *

error: Content is protected !!